ಪುತ್ತೂರು: ಎಪಿಎಂಸಿ ಅಂಡರ್ ಪಾಸ್ ಕಾಮಗಾರಿ ವೇಳೆ ಹೆಬ್ಬಾರಬೈಲುವಿನ 15 ಮನೆಗಳಿಗೆ ಇದ್ದ ಸಂಪರ್ಕ ರಸ್ತೆ ಮುಚ್ಚಿದ್ದು ಕಾಮಗಾರಿ ಮುಗಿದ ಬಳಿಕ ಮರುಬಳಕೆಗೆ ಯೋಗ್ಯವಲ್ಲದ ರೀತಿಯಲ್ಲಿ ರಸ್ತೆ ನಿರ್ಮಾಣವಾಗಿದ್ದು, ಈ ಭಾಗದ ಜನರು ರಸ್ತೆಯಲ್ಲಿ ಹೋಗಲು ಹರಸಾಹಸ ಪಡುತ್ತಿದ್ದಾರೆ.
ಎಪಿಎಂಸಿ ಅಂಡರ್ ಪಾಸ್ ನಿರ್ಮಾಣ ಮಾಡುವ ಸಂದರ್ಭ ಚತುಷ್ಪತ ರಸ್ತೆ ನಿರ್ಮಾಣ ಮಾಡುವ ಯೋಜನೆ ಹಾಕಿದ್ದರೂ ಕೊನೆ ಕ್ಷಣದಲ್ಲಿ ಚುತುಷ್ಪತಕ್ಕೆ ಪ್ರಾವಿಜನ್ ಇಟ್ಟು ಕೊಂಡು ದ್ವಿಪಥ ರಸ್ತೆ ಮಾತ್ರ ನಿರ್ಮಾಣ ಆಗಿದೆ. ಚತುಷ್ಪತ ರಸ್ತೆ ನಿರ್ಮಾಣಕ್ಕೆ ಹೆಬ್ಬಾರಬೈಲು 15 ಮನೆಗಳಿಗೆ ಹೋಗುವ ಸಂಪರ್ಕ ರಸ್ತೆಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿತ್ತು. ಆದರೆ ಚತುಷ್ಪತ ರಸ್ತೆ ನಿರ್ಮಾಣ ಮಾಡದೆ ಮುಚ್ಚಿದ ರಸ್ತೆಯನ್ನು ತೆರೆಯಲಾಯಿತ್ತಾದರೂ ಅದು ಮರುಬಳಕೆಗೆ ಯೋಗ್ಯವಲ್ಲದ ರೀತಿಯಲ್ಲಿದೆ. ಕೆಸರುಮಯವಗಿದ್ದು, 15 ಮನೆಯವರು ಈ ರಸ್ತೆಯಲ್ಲಿ ಹೋಗಲು ಹರಸಾಹಸ ಪಡೆಬೇಕಾಗಿದೆ. ಈ ಕುರಿತು ಹೆಬ್ಬಾರ ಬೈಲು ನಿವಾಸಿಗಳು ಪುತ್ತೂರು ನಗರಸಭೆಗೆ ದೂರು ನೀಡಲು ಸಿದ್ದತೆ ನಡೆಸುತ್ತಿದ್ದಾರೆ.