ಬಡಗನ್ನೂರು: ಬಡಗನ್ನೂರು ಗ್ರಾ.ಪಂ ಸಾಮಾನ್ಯ ಸಭೆಯು ಗ್ರಾ.ಪಂ ಸಮುದಾಯ ಭವನದಲ್ಲಿ ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಕೆ ಅಧ್ಯಕ್ಷತೆಯಲ್ಲಿ ಜು.27 ರಂದು ನಡೆಯಿತು.
ಸಭೆಯಲ್ಲಿ 15 ಹಣಕಾಸು ಯೋಜನೆ ಹಾಗೂ ಶೇಕಡಾ 25 ಮತ್ತು ಶೇಕಡಾ 5 ಯೋಜನೆಯ ಕ್ರಿಯಾ ಯೋಜನೆ ತಯಾರಿಸಲಾಯಿತು. ವಾರ್ಡ್ ಸಭೆ ಹಾಗೂ ಗ್ರಾಮ ಸಭೆ ದಿನಾಂಕ ನಿಗದಿ ಮಾಡಲಾಯಿತು.
ಸಭೆಯಲ್ಲಿ ಉಪಾಧ್ಯಕ್ಷ ಸಂತೋಷ್ ಆಳ್ವ ಗಿರಿಮನೆ, ಸದಸ್ಯರಾದ ರವಿರಾಜ ರೈ ಸಜಂಕಾಡಿ, ಲಿಂಗಪ್ಪ ಗೌಡ ಮೋಡಿಕೆ, ಕುಮಾರ ಅಂಬಟೆಮೂಲೆ, ಪದ್ಮನಾಭ ಕನ್ನಡ್ಕ, ವೆಂಕಟೇಶ್ ಕನ್ನಡ್ಕ, ಧರ್ಮೇಂದ್ರ ಕುಲಾಲ್ ಪದಡ್ಕ, ಕಲಾವತಿ ಗೌಡ ಪಟ್ಲಡ್ಕ, ಜ್ಯೋತಿ ಅಂಬಟೆಮೂಲೆ, ಹೇಮಾವತಿ ಮೋಡಿಕೆ, ಸುಜಾತ ಮೈಂದನಡ್ಕ, ಸವಿತಾ ನೇರೋತ್ತಡ್ಕ, ಸುಶೀಲಾ ಪಕ್ಯೋಡ್, ದಮಯಂತಿ ಕೆಮನಡ್ಕ ಉಪಸ್ಥಿತರಿದ್ದರು.