ಐತ್ತೂರಿನಲ್ಲಿ ಪರಿಸರ ಮಾಹಿತಿ, ಗಿಡ ನಾಟಿ

0

ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಕಡಬ ತಾಲೂಕು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕಡಬ ತಾಲೂಕು, ಮತ್ತು ಅರಣ್ಯ ಇಲಾಖೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಐತ್ತೂರಿನ ಸುಳ್ಯ ಎಂಬಲ್ಲಿ ಪರಿಸರ ಮಾಹಿತಿ ಮತ್ತು ಗಿಡ ನಾಟಿ ಕಾರ್ಯಕ್ರಮವನ್ನು ಕಡಬ ತಾಲ್ಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಮಹೇಶ್ ಕೆ.ಸವಣೂರು ರವರು ಉದ್ಘಾಟಿಸಿ ಶುಭಹಾರೈಸಿದರು. ಸಮಾರಂಭ ಅಧ್ಯಕ್ಷತೆ ಬಿಳಿನೆಲೆ ವಲಯದ ಜನ ಜಾಗೃತಿ ವೇದಿಕೆ ಯ ಅಧ್ಯಕ್ಷ ತಮ್ಮಯ್ಯ ಗೌಡ ವಹಿಸಿದರು. ಅರಣ್ಯ ಇಖಾಖೆಯ ಆರ್ ಎಫ್ ಓ ರಾಘವೇಂದ್ರರವರು ಪ್ರಸ್ತಾವಿಕವಾಗಿ ಮಾತನಾಡಿದರು. ಕಡಬ ತಾಲೂಕಿನ ಕೇಂದ್ರ ಒಕ್ಕೂಟಗಳ ಅಧ್ಯಕ್ಷ ಸಂತೋಷ ಕೆ, ಶೌರ್ಯ ವಿಪತ್ತು ನಿರ್ವಹಣಾ ಘಟಕದ ಅಧ್ಯಕ್ಷರ ಭವಾನಿ ಶಂಕರ್, ಅರಣ್ಯ ಇಲಾಖೆಯಾ ಅಧಿಕಾರಿಗಳು ಉಪಸ್ಥಿತರಿದ್ದರು. ಕೃಷಿ ಮೇಲ್ವಿಚಾರಕ ಸೋಮೇಶ ಕಾರ್ಯಕ್ರಮ ನಿರೂಪಿಸಿದರು. ವಲಯ ಮೇಲ್ವಿಚಾರಕ ಆನಂದ್ ಡಿ ಬಿ ಸ್ವಾಗತಿಸಿ, ಸೇವಾ ಪ್ರತಿನಿಧಿ ಸತೀಶ್ ರವರು ವಂದಿಸಿದರು. 200 ಹಣ್ಣು ಹಂಪಲು ಗಿಡಗಳನ್ನು ಅರಣ್ಯದಲ್ಲಿ ನಾಟಿ ಮಾಡಲಾಯಿತು.

LEAVE A REPLY

Please enter your comment!
Please enter your name here