ಜು.30: ಕೊಂಬೆಟ್ಟು ಮರಾಟಿ ಯುವ ವೇದಿಕೆ ನೇತೃತ್ವದಲ್ಲಿ ಕೆಸರುಗದ್ದೆ ಕ್ರೀಡಾಕೂಟ

0

ಪುತ್ತೂರು: ಮರಾಟಿ ಯುವ ವೇದಿಕೆ ಕೊಂಬೆಟ್ಟು, ಪುತ್ತೂರು ನೇತೃತ್ವದಲ್ಲಿ ಮರಾಟಿ ಯುವ ವೇದಿಕೆ, ಭಜನಾ ತಂಡ ಹಾಗೂ ಆರ್ಯಾಪು ಗ್ರಾಮದ ಮರಾಟಿ ಬಾಂಧವರ ಸಹಕಾರದೊಂದಿಗೆ ಕಂಬುಳೊದ ಕಂಡೊಡ್ ಆಟಿದ ಐಸಿರ ಕೆಸರುಗದ್ದೆ ಕ್ರೀಡಾ ಕೂವು ಜು.30ರಂದು ಆರ್ಯಾಪು ಗ್ರಾಮದ ಮೆಲ್ಮಜಲು ಹಳೆಮನೆ ಗದ್ದೆಯಲ್ಲಿ ನಡೆಯಲಿದೆ.

ಈ ಬಗ್ಗೆ `ಸುದ್ದಿ ಸ್ಟುಡಿಯೋ’ದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಮರಾಟಿ ಯುವ ವೇದಿಕೆಯ ಗೌರವಾಧ್ಯಕ್ಷ ಗಿರೀಶ್ ನಾಯ್ಕ ಸೊರಕೆಯವರು, ಮರಾಟಿ ಯುವ ವೇದಿಕೆ ಕೊಂಬೆಟ್ಟು, ಪುತ್ತೂರು ನೇತೃತ್ವದಲ್ಲಿ ಮರಾಟಿ ಯುವ ವೇದಿಕೆ, ಭಜನಾ ತಂಡ ಹಾಗೂ ಆರ್ಯಾಪು ಗ್ರಾಮದ ಮರಾಟಿ ಬಾಂಧವರ ಸಹಕಾರದೊಂದಿಗೆ ಎರಡನೇ ಬಾರಿ ಕೆಸರುಗದ್ದೆ ಕ್ರೀಡಾಕೂಟ ನಡೆಯಲಿದೆ. ಕ್ರೀಡಾಕೂಟವು ದ.ಕ., ಉಡುಪಿ ಮತ್ತು ಕಾಸರಗೋಡು ಜಿಲ್ಲೆಯ ಮರಾಟಿ ಸಮಾಜ ಬಾಂಧವರಿಗೆ ಸೀಮಿತವಾಗಿದೆ. ಮರಾಟಿ ಸಮಾಜ ಬಾಂಧವರು ಮಾತ್ರ ಭಾಗವಹಿಸಬಹುದಾಗಿದೆ. ಇತರ ಸಮಾಜದವರಿಗೆ ವೀಕ್ಷಣೆಗೆ ಅವಕಾಶವಿದೆ ಎಂದು ಹೇಳಿದರು.

ಬೆಳಗ್ಗೆ 8 ಗಂಟೆಗೆ ಕ್ರೀಡಾಕೂಟ ಉದ್ಘಾಟನೆಗೊಳ್ಳಲಿದ್ದು, ಆರಂಭದಲ್ಲಿ ಮಕ್ಕಳ ಕ್ರೀಡಾಕೂಟ ನಡೆಯಲಿದ್ದು, 11 ಗಂಟೆಗೆ ಗುಂಪು ಸ್ಪರ್ಧೆಗಳು ಆರಂಭಗೊಳ್ಳಲಿವೆ. ಬೆಳಗ್ಗೆ 10 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಸಭಾಧ್ಯಕ್ಷತೆಯನ್ನು ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಮಂಜುನಾಥ್ ಎನ್.ಎಸ್. ವಹಿಸಲಿದ್ದಾರೆ. ಸಭಾ ಕಾರ್ಯಕ್ರಮವನ್ನು ಶಾಸಕರಾದ ಅಶೋಕ್ ಕುಮಾರ್ ರೈ ಅವರು ಉದ್ಘಾಟಿಸಲಿದ್ದಾರೆ. ಗುಂಪು ಸ್ಪರ್ಧೆಗಳ ಉದ್ಘಾಟನೆಯನ್ನು ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ನೆರವೇರಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮುಖ್ಯ ಅತಿಥಿಗಳಾಗಿ ಆರ್ಯಾಪು ಗ್ರಾಮ ಪಂಚಾಯತ್ ಅಧ್ಯಕ್ಷ ಸರಸ್ವತಿ ವಿಶ್ವನಾಥ ಮೇಗಿನಪಂಜ, ಮಂಗಳೂರು ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ರವಿಪ್ರಸಾದ್ ನಾಯ್ಕ, ಕರ್ನಾಟಕ ಮರಾಟಿ ಯುವ ವೇದಿಕೆ ಬೆಂಗಳೂರು ಇದರ ಅಧ್ಯಕ್ಷ ಅಶ್ವಿನ್ ಕುಮಾರ್ ನೀರೊಳ್ಯ, ದ.ಕ. ಜಿಲ್ಲಾ ಮರಾಟ ಸಂರಕ್ಷಣಾ ಸಮಿತಿ ಮಂಗಳೂರು ಅಧ್ಯಕ್ಷ ಅಶೋಕ್ ನಾಯ್ಕ ಕೆದಿಲ, ಮೆಸ್ಕಾಂ ಮಂಗಳೂರು ಮಾಜಿ ನಿರ್ದೇಶಕ ಕಿಶೋರ್ ಕುಮಾರ್ ಬೊಟ್ಯಾಡಿ, ದ.ಕ. ಬಿಜೆಪಿ ಉಪಾಧ್ಯಕ್ಷ ರಾಧಾಕೃಷ್ಣ ಬೂಡಿಯಾರ್, ಮಾಜಿ ಶಾಸಕ ಸಂಜೀವ ಮಠಂದೂರು, ಸಂಪ್ಯ ಗ್ರಾಮಾಂತರ ಠಾಣೆ ಠಾಣಾಧಿಕಾರಿ ಧನಂಜಯ ಬಿ.ಸಿ., ಜಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಲ್ಯಾಂಪ್ಸ್ ಸೊಸೈಟಿ ಪುತ್ತೂರು ಅಧ್ಯಕ್ಷ ಪೂವಪ್ಪ ನಾಯ್ಕ, ಹವಾಮಾನ ಇಲಾಖೆ ನಿವೃತ್ತ ಅಧಿಕಾರಿ ಸುಬ್ಬ ನಾಯ್ಕ, ಹಿಂದು ಮುಖಂಡ ಮುರಲಿಕೃಷ್ಣ ಹಸಂತಡ್ಕ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಎಸ್.ಟಿ. ಘಟಕ ಅಧ್ಯಕ್ಷ ಮಹಾಲಿಂಗ ನಾಯ್ಕ ನರಿಮೊಗರು, ದ.ಕ.ಮರಾಟಿ ಸಂ.ಸಮಿತಿಯ ಸಂಚಾಲಕ ಶ್ರೀಧರ ನಾಯ್ಕ ಮುಂಡೋವುಮೂಲೆ, ಪುತ್ತೂರು ತಾ.ಪಂ. ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಕಾರ್ಪಾಡಿ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಧಾಕರ್ ರಾವ್ ಆರ್ಯಾಪು ಭಾಗವಹಿಸಲಿದ್ದಾರೆ. ಪ್ರಗತಿಪರ ಕೃಷಿಕ ಚೆನ್ನಪ್ಪ ನಾಯ್ಕ್ ಮೆಲ್ಮಜಲು ಹಾಗೂ ಅಂತರ್‌ರಾಷ್ಟ್ರಿಯ ಯೋಗಪಟು ತೃಪ್ತಿ ಮಾಡಾವು ಇವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಸ್ಪರ್ಧೆಗಳ ವಿವರ
ಮಕ್ಕಳಿಗೆ ಓಟ, ಹಿಂಬದಿ ಓಟ, ನಿಂಬೆ ಚಮಚ ಓಟ, ಅಡಿಕೆ ಹಾಳೆಯಲ್ಲಿ ಎಳೆಯುವುದು, ಮಡಿಕೆ ಒಡೆಯುವುದು, ಪುರುಷರಿಗೆ ಹಗ್ಗ ಜಗ್ಗಾಟ, ವಾಲಿಬಾಲ್, ರಿಲೇ(4 ಜನರ), ಓಟ 100 ಮೀಟರ್, ಹಿಂಬದಿ ಓಟ, ಮೂರು ಕಾಲಿನ ಓಟ, ನಿಧಿ ಶೋಧ, ಮಡಕೆ ಒಡೆಯುವುದು, ಕೆಸರಿನಲ್ಲಿ ಜಾರುಕಂಬ ಏರುವುದು, ಸ್ಪರ್ಧೆಗಳು ನಡೆಯಲಿವೆ. ಮಹಿಳೆಯರಿಗೆ ರಿಲೇ (4 ಜನರ), ಹಗ್ಗ ಜಗ್ಗಾಟ, ಹಿಂಬದಿ ಓಟ, ಮೂರು ಕಾಲಿನ ಓಟ, ಮಡಕೆ ಒಡೆಯುವುದು, ಓಟ 100 ಮೀಟರ್, ಥ್ರೋಬಾಲ್ ಸ್ಪರ್ಧೆಗಳು ನಡೆಯಲಿವೆ ಎಂದು ತಿಳಿಸಿದರು.

ಬೆಳಗ್ಗೆ 10 ಗಂಟೆಯವರೆಗೆ ಉಪಹಾರದ ವ್ಯವಸ್ಥೆ, ಮಧ್ಯಾಹ್ನ ಸುಮಾರು 1500 ಮಂದಿಗೆ ಊಟದ ವ್ಯವಸ್ಥೆ, ಸಂಜೆ ಚಹಾತಿಂಡಿಯ ವ್ಯವಸ್ಥೆ ಇರುತ್ತದೆ. ಸಂಜೆ ಸಮಾರೋಪ ಸಮಾರಂಭ ನಡೆಯಲಿದ್ದು, ಕೆಸರುಗದ್ದೆ ಕ್ರೀಡಾ ಕೂಟ ಸಮಿತಿ ಅಧ್ಯಕ್ಷ ಗಂಗಾಧರ ನಾಯ್ಕ ಕೌಡಿಚ್ಚಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಮಹಮ್ಮಾಯಿ ಸೌಹಾರ್ದ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಶೀನ ನಾಯ್ಕ, ಮರಾಟಿ ಯುವ ವೇದಿಕೆ ಅಧ್ಯಕ್ಷ ಗಿರೀಶ್ ನಾಯ್ಕ ಸೊರಕೆ, ಕೆಸರುಗದ್ದೆ ಕ್ರೀಡಾಕೂಟ ಸಮಿತಿಯ ಪ್ರಧಾನ ಕಾರ್ಯದರ್ಶಿ ವಿನೋದ್ ಎ., ಸಂಚಾಲಕ ಅಶೋಕ ನಾಯ್ಕ ಸೊರಕೆ, ಮರಾಟಿ ಯುವ ವೇದಿಕೆ ಅಧ್ಯಕ್ಷ ವೆಂಕಪ್ಪ ನಾಯ್ಕ ಬರೆಪ್ಪಾಡಿ ಉಪಸ್ಥಿತರಿರಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮರಾಟಿ ಯುವ ವೇದಿಕೆಯ ಅಧ್ಯಕ್ಷ ವೆಂಕಪ್ಪ ನಾಯ್ಕ ಬರೆಪ್ಪಾಡಿ, ಸಂಚಾಲಕ ಅಶೋಕ್ ನಾಯ್ಕ ಸೊರಕೆ, ಸಹ ಸಂಚಾಲಕ ಸಂದೀಪ್ ಆರ್ಯಾಪು, ಕೆಸರುಗದ್ದೆ ಕ್ರೀಡಾಕೂಟ ಸಮಿತಿ ಅಧ್ಯಕ್ಷ ಗಂಗಾಧರ ನಾಯ್ಕ ಕೌಡಿಚ್ಚಾರ್ ಉಪಸ್ಥಿತರಿದ್ದರು.

ಕರಾವಳಿಯ ಮರಾಟಿ ಸಮಾಜ ಬಾಂಧವರಿಗೆ ಮಾತ್ರ ಭಾಗವಹಿಸಲು ಅವಕಾಶವಿದ್ದು, ಭಾವಚಿತ್ರ ಇರುವ ಯಾವುದೇ ಗುರುತಿನ ಚೀಟಿಯ ಮೂಲಪ್ರತಿ ಕಡ್ಡಾಯವಾಗಿದೆ. ಹೆಚ್ಚಿನ ಮಾಹಿತಿಗೆ 8970014905ನ್ನು ಸಂಪರ್ಕಿಸಬಹುದು.

LEAVE A REPLY

Please enter your comment!
Please enter your name here