ಪುತ್ತೂರು: ಎಸ್‌ಕೆಎಸ್‌ಬಿವಿ ಕುಂಬ್ರ ರೇಂಜ್ ಇದರ ತಹ್ದೀಸ್ ಸಂಗಮ ಶಂಸುದ್ದೀನ್ ದಾರಿಮಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.ಅತೀಖುರ್ರಹ್ಮಾನ್ ಖುರ್‌ಆನ್ ಪಠಿಸಿದರು. ಸ್ಥಳೀಯ ಖತೀಬ್ ಶುಕೂರ್ ದಾರಿಮಿ ಉದ್ಘಾಟಿಸಿದರು.
ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಉಪಾಧ್ಯಕ್ಷ ನಝೀರ್ ಅಝ್ಹರಿ ಬೊಳ್ಮಿನಾರ್ ಹಾಗೂ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಅಶ್ರಫ್ ರಹ್ಮಾನಿ ವೀರಮಂಗಲರವರು ಮಕ್ಕಳಿಗೆ ತರಬೇತಿ ನೀಡಿದರು. ನಂತರ2023-24ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಅಧ್ಯಕ್ಷರಾಗಿ ಮುಹಮ್ಮದ್ ಸಲ್ಮಾನ್ ಪಾಳ್ಯತ್ತಡ್ಕ, ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಹಫೀಝ್ ತ್ಯಾಗರಾಜೆ, ಕೋಶಾಧಿಕಾರಿಯಾಗಿ ಅತೀಖುರ್ರಹ್ಮಾನ್ ಕೊಳ್ತಿಗೆ, ಸಂಘಟನಾ ಕಾರ್ಯದರ್ಶಿ ಶಮ್ಮಾಸ್ ಮಾಡಾವು ಆಯ್ಕೆಯಾದರು.
ಉಪಾಧ್ಯಕ್ಷರುಗಳಾಗಿ ಮುಹಮ್ಮದ್ ಮುಬಶ್ಶಿರ್ ಪರ್ಪುಂಜ, ಇರ್ಶಾದ್ ಅಂಙತ್ತಡ್ಕ, ಮುಹಮ್ಮದ್ ಆಬಿದ್ ಕೈಕಂಬ, ಕಾರ್ಯದರ್ಶಿಗಳಾಗಿ ಮುಹಮ್ಮದ್ ಅನ್ಸಿಫ್ ಮುಂಡೋಳೆ, ನಿಝಾರ್ ರೆಂಜಲಾಡಿ, ಅಬ್ದುಲ್ ರಾಝಿಕ್ ಮಾಡನ್ನೂರ್, ಜಿಲ್ಲಾ ಕೌನ್ಸಿಲರ್‌ಗಳಾಗಿ ಮುಹಮ್ಮದ್ ಅಮ್ಜದ್ ಜಿಸ್ತಿಯಾ, ಮುಹಮ್ಮದ್ ಹುಸೈನ್ ಕಾವು ಆಯ್ಕೆಯಾದರು. ಉಪಸಮಿತಿಗಳಾದ ಅದಬ್, ಟೆಕ್ ಎಡ್ಮಿನ್, ಅಲಿಫ್, ಖಿದ್ಮಾ ಕೋರ್ಡಿನೇಟರ್‌ಗಳಾಗಿ ಶಹಬಾಸ್ ಅಮ್ಚಿನಡ್ಕ, ಜಂಶೀದ್ ಕೂಡುರಸ್ತೆ, ಮಿನಾಝ್ ಸಾರೆಪುಣಿ, ಅಹ್ಮದ್ ರಶೀದ್ ಪಮ್ಮಲೆ ಆಯ್ಕೆಯಾದರು. ಕಾರ್ಯಕಾರಿ ಸಮಿತಿ ಸದಸ್ಯರಾಗಿ ತಸ್ನೀಂ ಹಸನ್ ಆಯ್ಕೆಯಾದರು. ತೆರವಾದ ಚೇರ್‌ಮೆನ್ ಸ್ಥಾನಕ್ಕೆ ಅಬ್ದುಲ್ ಬಾಸಿತ್ ಹುದವಿ ಹಾಗೂ ಕನ್ವೀನರಾಗಿ ಇಸ್ಮಾಯಿಲ್ ಕೌಸರಿ ಜಿಸ್ತಿಯಾರನ್ನು ನೇಮಿಸಲಾಯಿತು.
ಸಂಗಮದಲ್ಲಿ ಕಾರ್ಯದರ್ಶಿಗಳಾದ ಅಬ್ದುಲ್ ನಾಸಿರ್ ಫೈಝಿ ತ್ಯಾಗರಾಜೆ, ನೌಫಲ್ ರಹ್ಮಾನಿ ಮಾಡಾವು, ಐ.ಟಿ ಕೋರ್ಡಿನೇಟರ್ ನಿಝಾರ್ ಯಮಾನಿ, ಪರೀಕ್ಷಾ ಬೋರ್ಡ್ ಚೇರ್‌ಮೆನ್ ಅಬ್ದುಲ್ ರಝಾಕ್ ಮುಸ್ಲಿಯಾರ್, ವೈಸ್ ಚೇರ್‌ಮೆನ್ ಅಬೂಬಕರ್ ಸಿದ್ದೀಕ್ ಫೈಝಿ ಕೊಳ್ತಿಗೆ, ಎಸ್‌ಕೆಎಸ್‌ಬಿವಿ ಕನ್ವೀನರ್ ಸ್ವಾದಿಕ್ ಮುಸ್ಲಿಯಾರ್ ಕಟ್ಟತ್ತಾರ್, ಪರ್ಪುಂಜ ಖತೀಬ್ ಅಶ್ರಫ್ ಮಿಸ್ಬಾಹಿ ಮಡಿಕೇರಿ, ಅಬೂಬಕರ್ ದಾರಿಮಿ ಕಟ್ಟತ್ತಾರ್, ಇಬ್ರಾಹಿಂ ಸಅದಿ ಮಾಡನ್ನೂರ್, ಮೊಹಲ್ಲಾ ಕಾರ್ಯದರ್ಶಿ ಎ.ಕೆ ಮುಹಮ್ಮದ್ ಕಾವು, ಕಾರ್ಯಕಾರಿ ಸಮಿತಿ ಸದಸ್ಯ ಮಿನಾರ್ ಉಮರ್ ಕಾವು ಮುಂತಾದವರು ಉಪಸ್ಥಿತರಿದ್ದರು. ಚೇರ್‌ಮೆನ್ ಇಸ್ಮಾಯಿಲ್ ಅಸ್ಲಮಿ ಸ್ವಾಗತಿಸಿದರು.