ಪುತ್ತೂರು: ಮರೀಲು ಕಾಡುಮನೆ ದಿ.ಬೆಂಜಮಿನ್ ಡಿ’ಕುನ್ಹಾರವರ ಪತ್ನಿ ಸಂತಾನ್ ಪಿರೇರಾ(78ವ.)ರವರು ಹೃದಯಾಘಾತದಿಂದ ಜು.30 ರಂದು ಪೂರ್ವಾಹ್ನ ನಿಧನ ಹೊಂದಿದ್ದಾರೆ.
ಮೃತ ಸಂತಾನ್ ಪಿರೇರಾರವರು ಎಂದಿನಂತೆ ಆದಿತ್ಯವಾರ ಮರೀಲು ಸೆಕ್ರೇಡ್ ಹಾರ್ಟ್ ಚರ್ಚ್ ಗೆ ಬೆಳಗ್ಗಿನ ಪೂಜೆಗೆ ಹೊರಟು ನಿಂತಿದ್ದ ಸಂದರ್ಭದಲ್ಲಿ ತಟ್ಟನೆ ಕುಸಿದು ಬಿದ್ದು ಮೃತ ಪಟ್ಟಿರುತ್ತಾರೆ. ಮೃತರು ಪುತ್ರರಾದ ಆಂಟನಿ ಡಿ’ಕುನ್ಹಾ, ಮೈಕಲ್ ಡಿ’ಕುನ್ಹಾ, ವಾಲ್ಟರ್ ಡಿ’ಕುನ್ಹಾ, ಸೊಸೆಯಂದಿರಾದ ಗ್ರೆಟ್ಟಾ ಡಿ’ಸೋಜ, ಜ್ಯೋತಿ ಡಿ’ಕುನ್ಹಾ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.