ಪುತ್ತೂರು : ಜು.30 ರಂದು ಕೊಂಬೆಟ್ಟು ಮರಾಟಿ ಯುವ ವೇದಿಕೆ ಹಾಗೂ ಮರಾಟಿ ಸಮಾಜದ ಇತರ ಸಂಘಟನೆಯ ಸಹಯೋಗದಲ್ಲಿ, ಆರ್ಯಾಪು ಮೇಲ್ಮಜಲು ಹಳೆಮನೆ ಗದ್ದೆಯಲ್ಲಿ ನಡೆದ ಕೆಸರು ಗದ್ದೆ ಕ್ರೀಡಾ ಕೂಟದಲ್ಲಿ ಮಕ್ಕಳು ,ಮಹಿಳೆಯರು ಹಾಗೂ ಪುರುಷರಿಗಾಗಿ ಹಲವು ಬಗೆಯ ಆಟೋಟಾ ಸ್ಪರ್ಧೆಗಳನ್ನು ಆಯೋಜನೆ ಮಾಡಲಾಗಿತ್ತು.
ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಒಟ್ಟು 22 ತಂಡಗಳಲ್ಲಿ , ಮಹಿಳೆಯರ 4 ತಂಡ ,ಪುರುಷರ 18 ತಂಡಗಳು ಭಾಗವಹಿಸಿ , ಮಹಿಳೆಯರ ವಿಭಾಗದಲ್ಲಿ ಗಂಜಿಮಠ ತಂಡ ಪ್ರಥಮ , ಎಲಿಯ ಮರಾಟಿ ಸಂಘ ದ್ವಿತೀಯ ಸ್ಥಾನ ಪಡೆದುಕೊಂಡಿತು. ಪುರುಷರ ವಿಭಾಗದಲ್ಲಿ ಗುರಿಕುಮೇರು ಬಿ ಪ್ರಥಮ ,ಬಂಟ್ವಾಳ ಪೆರಾಜೆ ದ್ವಿತೀಯ ,ಕಡಬ ತಂಡ ತೃತೀಯ ಹಾಗೂ ಕಲಾಸಬೈಲು ತಂಡ ಚತುರ್ಥ ಸ್ಥಾನ ಪಡೆಯಿತು.
ತ್ರೋ ಬಾಲ್ ನಲ್ಲಿ 6 ತಂಡಗಳು ಭಾಗವಹಿಸಿ , ಕೊಳ್ತಿಗೆ ಹಾಗೂ ಬೆಳ್ತಂಗಡಿ ಕ್ರಮವಾಗಿ ಪ್ರಥಮ ,ದ್ವಿತೀಯ ಸ್ಥಾನವೇರಿದವು. ವಾಲಿಬಾಲ್ ಸ್ಪರ್ಧೆಯಲ್ಲಿ 20 ತಂಡಗಳು ಭಾಗವಹಿಸಿದ್ದು , ಅಡ್ಕಾರ್ ಹಾಗೂ ಮೂಡಬಿದ್ರೆ ತಂಡಗಳು ಕ್ರಮವಾಗಿ ಪ್ರಥಮ ,ದ್ವಿತೀಯ ಸ್ಥಾನ ಪಡೆಯಿತು. ಇಷ್ಟೇಯಲ್ಲದೇ ಮಕ್ಕಳಿಗೆ ಓಟ ,ಹಿಂಬದಿ ಓಟ ,ನಿಂಬೆ ಚಮಚ ಆಟ ,ಅಡಿಕೆ ಹಾಲೆ ಆಟ ಹಾಗೂ ಮಡಕೆ ಹೊಡೆಯೋ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಮಹಿಳೆಯರಿಗೆ ರಿಲೇ ,ಹಿಂಬದಿ ಓಟ ,ಮೂರು ಕಾಲಿನ ಓಟ ,ಮಡಕೆ ಹೊಡೆಯುವುದು ಹಾಗೂ ನೂರು ಮೀಟರ್ ಓಟದ ಸ್ಪರ್ಧೆಗಳಿದ್ದವು. ಪುರುಷರಿಗಾಗಿ ರಿಲೇ , ನೂರು.ಮೀ.ಓಟ ,ಮೂರು ಕಾಲಿನ ಓಟ ,ನಿಧಿ ಶೋಧ ,ಮಡಕೆ ಹೊಡೆಯೊದು ಹಾಗೂ ಜಾರು ಕಂಬ ಸ್ಪರ್ಧೆಗಳನ್ನೂ ಕೂಡ ಅಯೋಜನೆ ಮಾಡಲಾಗಿದ್ದು , ಜಾರುಕಂಬ ಏರುವ ಸ್ಪರ್ಧೆಯಲ್ಲಿ ಶ್ರೀಧರ್ ಕಲ್ಪಣೆ, ಸರ್ವೆ ವಿಜೇತರಾದರು.
ಎಲ್ಲಾ ಸ್ಪರ್ಧೆಗಳ ತೀರ್ಪುಗಾರರಾಗಿ , ಸವಣೂರು ಪದವಿ ಕಾಲೇಜಿನ ದೈಹಿಕ ಶಿಕ್ಷಕ ನಂದನ್, ಬೆಟ್ಟಂಪಾಡಿ ಕಾಲೇಜಿನ ದೈಹಿಕ ಶಿಕ್ಷಕಿ ಚಂದ್ರಕಲಾ, ದಯಾನಂದ ಮೆದು, ಉಮೇಶ್ ಸಂಪ್ಯ, ಭವಿತ್ ಕಲ್ಲರ್ಪೆ ಸಹಕರಿಸಿ , ಪುರುಷೋತ್ತಮ ಕುಂಡಡ್ಕ ಕ್ರೀಡಾಕೂಟ ನಿರ್ವಹಿಸಿ ಕೊಟ್ಟರು.