ಪುತ್ತೂರು: ಮಣಿಪುರ ಮತ್ತು ಸೌಜನ್ಯ ಪ್ರಕರಣದಲ್ಲಿ ಬಿಜೆಪಿ ಪ್ರತಿಷ್ಠೆಗೆ ದಕ್ಕೆಯಾಗಲಿರುವುದರಿಂದ ಅದರಿಂದ ತಪ್ಪಿಸಿಕೊಳ್ಳಲು ಎಬಿವಿಪಿಯನ್ನು ಬಳಸಿಕೊಂಡು ಉಡುಪಿಯ ಪ್ಯಾರಾ ಮೆಡಿಕಲ್ ಕಾಲೇಜಿನ ಶೌಚಾಲಯದಲ್ಲಿ ಮೊಬೈಲ್ ಚಿತ್ರೀಕರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾದ್ಯಾಂತ ಪ್ರತೊಭಟನೆ ನಡೆಸುತ್ತಿದೆ ಎಂದು ಪುತ್ತೂರು ತಾಲೂಕು ಎನ್ ಎಸ್ ಯು ಐ ಆರೋಪಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎನ್ ಎಸ್ ಯು ಐ ಜಿಲ್ಲಾ ನಾಯಕ ಭಾತಿಷ್ ಅಳಕೆಮಜಲು, ಎಬಿವಿಪಿ ನಾಯಕ ತೀರ್ಥಹಳ್ಳಿಯ ಪ್ರತೀಕ್ ಗೌಡ ಪ್ರಕರಣದಲ್ಲಾಗಲಿ, ವಿಟ್ಲ ದಲಿತ ಯುವತಿಯ ಅತ್ಯಾಚಾರ ಪ್ರಕರಣದಲ್ಲಾಗಲಿ, ವರ್ಷಗಳ ಹಿಂದೆ ಪುತ್ತೂರಿನ ಕಾಲೆಜೋಂದರಲ್ಲಿ ನಡೆದ ಯುವತಿಯ ಮೇಲಿನ ಅತ್ಯಾಚಾರವಾದಾಗ ಎಬಿವಿಪಿ ಯಾವುದೇ ಹೇಳಿಕೆಯನ್ನು ನೀಡಿಲ್ಲ ಮಾತ್ರವಲ್ಲ ಕೊರೋನಾದ ಸಂದರ್ಭದಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಸಮಸ್ಯೆಗಳಿಗೆ ಸಹಾಯಕ್ಕೆ ಬಾರದ ಇಂತಹ ನಾಟಕೀಯ ಸಂಘಟನೆಗಳು ವಿದ್ಯಾರ್ಥಿಗಳ ನಡುವೆ ವಿಷ ಬೀಜ ಬಿತ್ತುವ ಮೂಲಕ ಗಲಭೆ ಸೃಷ್ಟಿಸಲು ಪ್ರಯತ್ನಿಸುತ್ತಿದೆ ಇದನ್ನು ಎನ್ ಎಸ್ ಯು ಐ ಖಂಡಿಸುತ್ತದೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಎನ್ ಎಸ್ ಯು ಐ ಹಂಗಾಮಿ ಅಧ್ಯಕ್ಷ ಅಡ್ವರ್ಡ್ ಡಿಸೋಜಾ, ನಗರಾಧ್ಯಕ್ಷ ಸುಹೈಲ್, ಎನ್ ಎಸ್ ಯು ಐ ಮುಖಂಡ ಗಗನ್ ದೀಪ್ ಉಪಸ್ಥಿತರಿದ್ದರು.