ಕೌಕ್ರಾಡಿ ಹಾ.ಉ.ಸಹಕಾರ ಸಂಘಕ್ಕೆ ನಿರ್ದೇಶಕರ ಅವಿರೋಧ ಆಯ್ಕೆ

0


ಅಧ್ಯಕ್ಷ: ರಫಾಯಲ್ ಸ್ಟ್ರೆಲ್ಲಾ, ಉಪಾಧ್ಯಕ್ಷ: ಸೇಸಪ್ಪ ಗೌಡ

ನೆಲ್ಯಾಡಿ: ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಕೌಕ್ರಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಗೆ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಾಮಾನ್ಯಕ್ಕೆ ಮೀಸಲಾದ ಸ್ಥಾನದಿಂದ ರಫಾಯಲ್ ಸ್ಟ್ರೆಲ್ಲಾ ಒಡ್ರಳಿಕೆ, ಸೇಸಪ್ಪ ಗೌಡ ಅಂತ್ರಳಿಕೆ, ಸೇಸಪ್ಪ ಗೌಡ ಬದಿಯಡ್ಕ, ವನಿತ ಮೊಂತೇರೊ ಮಿಯಾಳ, ರೈಮಾಂಡ್ ಗಲ್ಬಾಂವೋ, ಕೆ.ರಾಜು ಕನ್ನಹಿತ್ತಿಲು ಹಾಗೂ ಎಡ್ವರ್ಡ್ ಪಿಂಟೋ ಮಿಯಾಳ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹಿಂದುಳಿದ ವರ್ಗ ಪ್ರವರ್ಗ ಎ ಮೀಸಲು ಸ್ಥಾನದಿಂದ ಯಶೋಧ ಎಸ್.ಶಬರಾಡಿ, ಜಿ.ನಾರಾಯಣ ಗೌಡ ಗುಂಡಿಮನೆ, ಮಹಿಳಾ ಮೀಸಲು ಸ್ಥಾನದಿಂದ ಗುಲಾಬಿ ಮೂಡಬೈಲು, ಜ್ಯೋತಿ ಗೊನ್ಸಾಲ್ವೀಸ್ ಮೂಡಬೈಲು, ಪರಿಶಿಷ್ಠ ಪಂಗಡ ಮೀಸಲು ಸ್ಥಾನದಿಂದ ಜಿನ್ನಮ್ಮ ಮಲೆಕುಡಿಯ ನೇತ್ರಾಳ, ಪರಿಶಿಷ್ಟ ಜಾತಿ ಮೀಸಲು ಸ್ಥಾನದಿಂದ ಬಾಬಿ ಮೂಡಬೈಲು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ/ಉಪಾಧ್ಯಕ್ಷರ ಆಯ್ಕೆ: ನೂತನ ಆಡಳಿತ ಮಂಡಳಿ ಸಭೆಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ರಫಾಯಲ್ ಸ್ಟ್ರೆಲ್ಲಾ ಹಾಗೂ ಉಪಾಧ್ಯಕ್ಷರಾಗಿ ಸೇಸಪ್ಪ ಗೌಡ ಅಂತ್ರಳಿಕೆ ಆಯ್ಕೆಯಾದರು. ಸುಳ್ಯ ಸಹಕಾರ ಅಭಿವೃದ್ಧಿ ಅಧಿಕಾರಿ ಶಿವಲಿಂಗಯ್ಯ ಎಂ.,ಅವರು ಚುನಾವಣಾಧಿಕಾರಿಯಾಗಿದ್ದರು. ಕಾರ್ಯದರ್ಶಿ ಪೆಲ್ಸಿ ವೇಗಸ್, ಹಾಲು ಪರೀಕ್ಷಕಿ ಸರಿತಾ ಸಹಕರಿಸಿದರು.

LEAVE A REPLY

Please enter your comment!
Please enter your name here