ಪುತ್ತೂರು:ಕೇಂದ್ರೀಯ ಮೀಸಲು ಸಶಸ್ತ್ರ ಪೊಲೀಸ್ ಸೇನಾ ಪಡೆ(ಸಿಆರ್‌ಪಿಎಫ್)ಯಲ್ಲಿ ಸುಧೀರ್ಘ 20 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿ ನಿವೃತ್ತಿಗೊಂಡು ಹುಟ್ಟೂರಿಗೆ ಆಗಮಿಸಿದ ಬಡಗನ್ನೂರು ಪಟ್ಟೆಯ ಬಾಲಕೃಷ್ಣ ಎನ್. ನೂರಾರು ಮಂದಿ ಕೂಡುವಿಕೆಯೊಂದಿಗೆ `ಸೇನಾ ಸೇವೆಗಿದು ನಮನ’ ಎಂಬ ಅದ್ದೂರಿಯ ಹುಟ್ಟೂರ ಸ್ವಾಗತ, ಸನ್ಮಾನ ಕಾರ್ಯಕ್ರಮ ಆ.5ರಂದು ಸಂಜೆ ಕಲ್ಲರ್ಪೆಯಲ್ಲಿರುವ ಅವರ ನಿವಾಸದಲ್ಲಿ ನೆರವೇರಿತು.
ಕಾರ್ಯಕ್ರಮವನ್ನು ನಿವೃತ್ತ ಯೋಧ ಬಾಲಕೃಷ್ಣರವರ ತಾಯಿ ಗಿರಿಜಾ, ಅತ್ತೆ ಸುಶೀಲಾ, ರೇವತಿ ಉಪ್ಪಳಿಗೆ, ರಾಜೀವಿ ಕಡಮಜಲು ಹಾಗೂ ಗೀತಾ ಬಾಲಕೃಷ್ಣ ದೀಪ ಬೆಳಗಿಸಿ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಕಾರ್ಪಾಡಿ ಶ್ರೀಸುಬ್ರಹ್ಮಣ್ಯ ದೇವಸ್ಥಾನ, ಶ್ರೀ ಸುಬ್ರಹ್ಮಣ್ಯೇಶ್ವರ ಯುವಕ ಮಂಡಲ, ವಿಶ್ವಹಿಂದು ಪರಿಷತ್, ಸೆಲ್ಕೋ ಸೋಲಾರ್ ಸಂಸ್ಥೆಯ ಪುತ್ತೂರು ಶಾಖೆ, ಪಟ್ಟೆ ಶ್ರೀಕೃಷ್ಣ ಯುವಕ ಮಂಡಲ, ಕುಂಬ್ರ ಶ್ರೀರಾಮ ಭಜನಾ ಮಂದಿರ, ವಾಣಿಯನ್/ಗಾಣಿಗ ಸಮಾಜಸೇವಾ ಸಂಘ, ಬಾಲಕೃಷ್ಣರವರ ಮನೆಯವರು, ಕುಟಂಬಸ್ಥರು ಹಾಗೂ ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದ ನೂರಾರು ಮಂದಿ ನಿವೃತ್ತರನ್ನು ಸನ್ಮಾನಿಸಿ, ಗೌರವಿಸಿದರು.
ಹುಟ್ಟೂರ ಸ್ವಾಗತ, ಸನ್ಮಾನ ಸ್ವೀಕರಿಸಿದ ಯೋಧ ಬಾಲಕೃಷ್ಣ ಮಾತನಾಡಿ, ಸರ್ದಾರ್ ವಲ್ಲಭ ಬಾಯಿ ಪಟೇಲ್‌ರವರಿಂದ ಸ್ಥಾಪನೆಗೊಂಡಿದ್ದ ಸಿಆರ್‌ಪಿಎಫ್‌ನಲ್ಲಿ 20 ವರ್ಷಗಳ ಕಾಲ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿದ್ದೇನೆ. ಕಳೆದ ಎರಡು ದಿನಗಳ ಹಿಂದೆ ಸಿಆರ್‌ಪಿಎಫ್‌ನ 80ನೇ ಸಂಸ್ಥಾಪನಾ ದಿನವನ್ನು ಸಂಭ್ರಮಿಸಿ ನಿವೃತ್ತಿಗೊಂಡಿರುವುದು ಸಂತಸ ತಂದಿದೆ. ತನ್ನ ಸೇವೆಯನ್ನು ಗುರುತಿಸಿ ಗೌರವಿಸಿದ ಪ್ರತಿಯೊಬ್ಬರಿಗೂ ಅವರು ಕೃತಜ್ಞತೆ ಸಲ್ಲಿಸಿದರು.
ವಾಣಿಯನ್/ಗಾಣಿಗ ಸಂಘದ ಸ್ಥಾಪಕ ಅಧ್ಯಕ್ಷ ತಿಮ್ಮಪ್ಪ ಪಾಟಾಳಿ ಮೊಟ್ಟೆತ್ತಡ್ಕ, ಕಾರ್ಪಾಡಿ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಆದ್ಯಕ್ಷ ಸುಧಾಕರ ರಾವ್, ಕುಂಬ್ರ ಶ್ರೀರಾಮ ಭಜನ ಮಂದಿರದ ಕಾರ್ಯದರ್ಶಿ ಪದ್ಮನಾಭ ರೈ, ಪಟ್ಟೆ ಯುವಕ ಮಂಡಲದ ಆಧ್ಯಕ್ಷ ಲಿಂಗಪ್ಪ ಗೌಡ ಪಟ್ಟೆ, ನಿವೃತ್ತ ಪೊಲೀಸ್ ಅಧಿಕಾರಿ ನಾರಾಯಣ ಪಾಟಾಳಿ, ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಅಪ್ಪು ಪಾಟಾಳಿ, ಯೂನಿಯನ್ ಬ್ಯಾಂಕ್ ಬೆಳ್ಳಾರೆ ಶಾಖಾ ವ್ಯವಸ್ಥಾಪಕ ಅಶ್ವಿನ್ ಕುಮಾರ್, ನೆಲ್ಲಿಕಟ್ಟೆ ಈಶ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಗೋಪಾಲಕೃಷ್ಣ ಯಂ., ವಾಣಿಯನ್/ಗಾಣಿಗ ಸಮಾಜ ಸೇವಾ ಸಂಘದ ಪೂರ್ವಾಧ್ಯಕ್ಷರಾದ ದಾಮೋದರ ಪಾಟಾಳಿ ಮುಕ್ರಂಪಾಡಿ, ಶಾರದಾ ಕೃಷ್ಣ, ನಾರಾಯಣ ಪಾಟಾಳಿ ಕುಕ್ಕುಪುಣಿ, ಕಲ್ಲರ್ಪೆ ಶ್ರೀ ಸುಬ್ರಹ್ಮಣ್ಯೇಶ್ಚರ ಯುವಕ ಮಂಡಲದ ಸದಸ್ಯ ರೋಹಿತ್, ನಂದನ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಚಂದ್ರಶೇಖರ ಮೂಡಾಯೂರು, ಕೆನರಾ ಬ್ಯಾಂಕ್‌ನ ಜಯಲಕ್ಷ್ಮಿ ಗಣೇಶ್‌ಬಾಗ್, ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಹರಿಪ್ರಸಾದ್, ನಿವೃತ್ತ ಉಪನ್ಯಾಸಕ ಸುಬ್ಬ ಪಾಟಾಳಿ, ಆರ್ಯಾಪು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಇಸ್ಮಾಯಿಲ್, ಸೆಲ್ಕೋ ಸೋಲಾರ್‌ನ ಹಾಸನ ಏರಿಯಾ ಮ್ಯಾನೇಜರ್ ಪ್ರಸಾದ್, ಬಾಲಕೃಷ್ಣರವರ ಸಹೋದರ ವಿದ್ಯಾಧರ ಪಟ್ಟೆ ಯೋಧರ ಸೇವೆಯ ಬಗ್ಗೆ ಗುಣಗಾನ ಮಾಡಿ, ನಿವೃತ್ತರಿಗೆ ಶುಭಹಾರೈಸಿದರು.
ಸೌಮ್ಯ ವಿನಯ ಕುಮಾರ್ ದೇಶ ಭಕ್ತಿಗೀತೆ ಹಾಡಿದರು. ಮಹೇಶ್ ಆಲಂಕಾರು ಕಾರ್ಯಕ್ರಮ ನಿರೂಪಿಸಿದರು. ಸುಬ್ಬಪ್ಪ ಪಾಟಾಳಿ ಸ್ವಾಗತಿಸಿದರು. ಯೋಧ ಬಾಲಕೃಷ್ಣರವರ ಪತ್ನಿ ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಶಿಕ್ಷಕಿ ಗೀತಾ ವಂದಿಸಿದರು. ಬಳಿಕ ಸಹ ಭೋಜನ ನಡೆಯಿತು. ಬಾಲಕೃಷ್ಣರವರ ಕುಟುಂಬಸ್ಥರು ಸೇರಿದಂತೆ ನೂರಾರು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.