ಸಿರಿಕನ್ನಡ ‘ಲಿಟ್ಲ್ ಸೂಪರ್ ಸ್ಟಾರ್’ ನಿಶ್ಚಿತಾ ಡಿ.ಎಂ. ಅಭಿನಯಕ್ಕೆ ಪ್ರಶಂಸೆ

0

ಪುತ್ತೂರು: ರಾಜ್ಯದ ಪ್ರಮುಖ ಕನ್ನಡ ವಾಹಿನಿಗಳಲ್ಲೊಂದಾದ ಸಿರಿಕನ್ನಡ ಚಾನೆಲ್ ನ ಮಕ್ಕಳ ವಿಶೇಷ ಕಾರ್ಯಕ್ರಮವಾದ  ಕ್ಯಾಡ್‌ಬರಿ ಜೆಮ್ಸ್ ಪ್ರಾಯೋಜಿತ ‘ಲಿಟ್ಲ್ ಸೂಪರ್ ಸ್ಟಾರ್’ ಕಾರ್ಯಕ್ರಮದಲ್ಲಿ  ಕಡಮಜಲು ಸುಭಾಸ್ ರೈಯವರ ಮೊಮ್ಮಗಳು ಬೇ.ನಿಶ್ಚಿತಾ ಡಿ.ಎಂ. ರವರು ಕಾಣಿಸಿಕೊಂಡಿದ್ದು, ಜು. 6 ರಂದು ಸಂಜೆ 6 ಗಂಟೆಗೆ ಪ್ರಸಾರವಾದ ಎಪಿಸೋಡ್ ನಲ್ಲಿ ಆಕೆ ಅಭಿನಯಿಸಿದ್ದಾರೆ. ಇವರ ಅಭಿನಯಕ್ಕೆ ನಾಡಿನೆಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗಿದೆ. ಮಂಜೇಶ್ ರವರ ನಿರ್ದೇಶನದಲ್ಲಿ, ಮೇಘನಾ ನಾಗರಾಜ್ ರವರ ನಿರೂಪಣೆಯಲ್ಲಿ ಸಿರಿಕನ್ನಡ ಚಾನೆಲ್ ನಲ್ಲಿ ಈ ಕಾರ್ಯಕ್ರಮ ಪ್ರತೀ ಶನಿವಾರ ಪ್ರಸಾರಗೊಳ್ಳುತ್ತಿದೆ. ಕಾರ್ಯಕ್ರಮವು ಜು.7ರ ಭಾನುವಾರ ರಾತ್ರಿ ಮರುಪ್ರಸಾರಗೊಂಡಿತ್ತು. ನಿಶ್ಚಿತಾ ಮತ್ತು ಇತರ ಈರ್ವರು ಈ ಎಪಿಸೋಡ್ ನಲ್ಲಿ ಭಾಗವಹಿಸಿದ್ದರು. ಬೆಂಗಳೂರಿನ‌ ಡಿ.ಆರ್.ಡಿ.ಒ. ವಿಜ್ಞಾನಿ ದುರ್ಗಾಪ್ರಸಾದ್ ಎಂ. ಮತ್ತು ವಿಂಧ್ಯಾ ದುರ್ಗಾಪ್ರಸಾದ್ ದಂಪತಿಯ ಪುತ್ರಿಯಾಗಿರುವ ಈಕೆ ಬೆಂಗಳೂರು ಡಿಆರ್‌ಡಿಒ ಕೇಂದ್ರೀಯ ವಿದ್ಯಾಲಯದ ಯುಕೆಜಿ ತರಗತಿಯ ಪ್ರತಿಭಾನ್ವಿತ ಪುಟಾಣಿಯಾಗಿದ್ದಾರೆ. ಎಪಿಸೋಡ್‌ನಲ್ಲಿ ಕಡಮಜಲು ಸುಭಾಸ್ ರೈ, ಪ್ರೀತಿ ಎಸ್. ರೈ ಮತ್ತು ವಿಂಧ್ಯಾ ದುರ್ಗಾಪ್ರಸಾದ್ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here