76ನೇ ಸ್ವಾತಂತ್ರ್ಯೋತ್ಸವ- ತಾಲೂಕು ಮಟ್ಟದ ದೇಶಭಕ್ತಿಗೀತೆ ಸ್ಪರ್ಧೆ-ಫಲಿತಾಂಶ

0

ಪುತ್ತೂರು: ಸಂಸ್ಕಾರ ಭಾರತೀ-ದ.ಕ.ಜಿಲ್ಲೆ ಪುತ್ತೂರು ವಿಭಾಗ ಆಶ್ರಯದಲ್ಲಿ ರೇಡಿಯೋ ಪಾಂಚಜನ್ಯ ಸಮುದಾಯ ಬಾನುಲಿ ಕೇಂದ್ರ, ರೋಟರಿ ಯುವ, ರೋಟರಿ ಕ್ಲಬ್ ಪುತ್ತೂರು ಸಿಟಿ ಮತ್ತು ಇನ್ನರ್ ವ್ಹೀಲ್ ಕ್ಲಬ್ ಸಹಯೋಗದೊಂದಿಗೆ 76ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ತಾಲೂಕು ಮಟ್ಟದ ದೇಶಭಕ್ತಿಗೀತೆ ಸ್ಪರ್ಧೆ ಆ. 10ರಂದು ರೇಡಿಯೋ ಪಾಂಚಜನ್ಯದಲ್ಲಿ ನಡೆಯಿತು.

5 ರಿಂದ 7ನೇ ತರಗತಿ ಮತ್ತು 8 ರಿಂದ 10ನೇ ತರಗತಿ ವಿಭಾಗದಲ್ಲಿ ನಡೆದಂತಹ ಸ್ಪರ್ಧೆಯ ಉದ್ಘಾಟನಾ ಸಮಾರಂಭದಲ್ಲಿ ಸಂಸ್ಕಾರ ಭಾರತೀ ದ.ಕ ಜಿಲ್ಲೆ ಉಪಾಧ್ಯಕ್ಷೆ ಶ್ರೀಮತಿ ರೂಪಲೇಖ, ರೇಡಿಯೋ ಪಾಂಚಜನ್ಯ ಸಮಿತಿ ಅಧ್ಯಕ್ಷೆ ಕೃಷ್ಣವೇಣಿ ಪ್ರಸಾದ್ ಮುಳಿಯ, ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷೆ ಅಶ್ವಿನಿಕೃಷ್ಣ ಮುಳಿಯ, ರೋಟರಿ ಯುವ ಅಧ್ಯಕ್ಷ ಪಶುಪತಿ ಶರ್ಮ ಮತ್ತು ರೋಟರಿ ಸಿಟಿ ಪುತ್ತೂರು ಅಧ್ಯಕ್ಷೆ ಗ್ರೇಸ್ಸಿ ಗೊನ್ಸಾಲ್ವಿಸ್ ಅವರು ದೀಪಬೆಳಗಿಸಿ ಸ್ಪರ್ಧೆಗೆ ಚಾಲನೆ ನೀಡಿದರು.

ಸ್ಫರ್ಧಾ ತೀರ್ಪುಗಾರರಾಗಿ ಶ್ರೀಮತಿ ವತ್ಸಲಾ ರಾಜ್ಞಿ, ಆಶಾ ಭಟ್, ಸುಮನಾ ಪ್ರಶಾಂತ್ ಮತ್ತು ಕು. ಮೇಘನಾ ಪಾಣಾಜೆ ಅವರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ರೇಡಿಯೋ ಪಾಂಚಜನ್ಯದ ಕೋಶಾಧಿಕಾರಿ ಗೌರಿ ಬನ್ನೂರು, ರೋಟರಿ ಸಿಟಿಯ ಶ್ಯಾಮಲಾ, ಸಂಸ್ಕಾರ ಭಾರತೀ ಸಮಿತಿ ಸದಸ್ಯರಾದ ಶಂಕರಿ ಶರ್ಮ, ವಿದುಷಿ ಪ್ರೀತಿಕಲಾ ಇನ್ನರ್ ವ್ಹೀಲ್ ಕ್ಲಬ್‌ನಿಂದ ಶ್ರೀದೇವಿ ರೈ ಹಾಗೂ ವಚನಾ ಜಯರಾಮ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ರೇಡಿಯೋ ಪಾಂಚಜನ್ಯದ ಸಂಯೋಜಕಿ ತೇಜಸ್ವಿನಿ ನಿರೂಪಿಸಿದರು. ತಾಂತ್ರಿಕ ಸಲಹೆಗಾರರಾದ ಪ್ರಶಾಂತ್ ಕೆ.ಎಸ್. ಮತ್ತು ಮುಳಿಯ ಸಿಬ್ಬಂದಿ ಸಂದೇಶ್ ಸಹಕರಿಸಿದರು.

ಸ್ಪರ್ಧಾ ವಿಜೇತರ ವಿವರ
ಪ್ರಾಥಮಿಕ ಶಾಲಾ 5ವಿಭಾಗದಲ್ಲಿ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನೆಹರೂನಗರ(ಪ್ರ), ಪ್ರಿಯದರ್ಶಿನಿ ಆಂಗ್ಲಮಾಧ್ಯಮ ಬೆಟ್ಟಂಪಾಡಿ(ದ್ವಿ), ಸುದಾನ ವಸತಿಯುತ ಶಾಲೆ ಮಂಜಲ್ಪಡ್ಪು(ತೃ) ಹಾಗೂ ಇಂದ್ರಪ್ರಸ್ಥ ವಿದ್ಯಾಲಯ ಮತ್ತು ಉಪ್ಪಿನಂಗಡಿ ಇಲ್ಲಿನ ವಿದ್ಯಾರ್ಥಿಗಳು ಪ್ರೋತ್ಸಾಹಕ ಬಹುಮಾನಗಳನ್ನು ಪಡೆದುಕೊಂಡರು. ಪ್ರೌಢ ಶಾಲಾ ವಿಭಾಗದಲ್ಲಿ ಇಂದ್ರಪ್ರಸ್ಥ ವಿದ್ಯಾಲಯ ಉಪ್ಪಿನಂಗಡಿ(ಪ್ರ), ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ(ದ್ವಿ), ನವೋದಯ ಪ್ರೌಢ ಶಾಲೆ ಬೆಟ್ಟಂಪಾಡಿ(ತೃ) ಹಾಗೂ ಶ್ರೀರಾಮಕೃಷ್ಣ ಪ್ರೌಢ ಶಾಲಾ ವಿದ್ಯಾರ್ಥಿಗಳು ಪ್ರೋತ್ಸಾಹಕ ಬಹುಮಾನವನ್ನು ಪಡೆದುಕೊಂಡರು.

LEAVE A REPLY

Please enter your comment!
Please enter your name here