ನೆಕ್ಸೋತ್ಸವ ಮೂಲಕ ಕಾರು ಪ್ರದರ್ಶನ

0

ಇಂದು ,ನಾಳೆ ತೆಂಕಿಲದಲ್ಲಿ ಭಾರತ್ ನೆಕ್ಸಾದಿಂದ ಆಯೋಜನೆ

ಪುತ್ತೂರು: ಕಾರು ತಯಾರಿಕೆ, ಹಾಗೂ ಮಾರಾಟದಲ್ಲಿ ಸದಾ ಮುಂಚೂಣಿಯಲ್ಲಿರುವ ಮಾರುತಿ ನೆಕ್ಸಾ, ತನ್ನ ಡೀಲರ್ ಭಾರತ್ ನೆಕ್ಸಾ ಸಹಭಾಗಿತ್ವದಲ್ಲಿ ಎರಡು ದಿನಗಳ ಬೃಹತ್ ನೆಕ್ಸಾ ಕಾರುಗಳ ಪ್ರದರ್ಶನ `ನೆಕ್ಸೋತ್ಸವ’ವನ್ನು ಇಲ್ಲಿನ ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನ ಮುಂಭಾಗದಲ್ಲಿ ಆ.11 ರಂದು ಪ್ರಾರಂಭಿಸಿದ್ದು , ಅ.12 ರಂದು ಕೊನೆಯಾಗಲಿದೆ. ಯುವ ಪೀಳಿಗೆಯನ್ನು ಹೆಚ್ಚು ಆಕರ್ಷಿಸಿ , ಮನ ಗೆದ್ದಿರುವ ಅಚ್ಚು ಮೆಚ್ಚಿನ ಇಗ್ನೀಸ್ ಕಾರು ಖರೀದಿಗೆ 57 ಸಾವಿರ ರೂಪಾಯಿಗಳವರೆಗಿನ ಬೃಹತ್ ಲಾಭದ ಘೋಷಣೆಯನ್ನು ಮಾಡಿದ್ದು ,ಬೆಲೆನೋ ಕಾರಿನಲ್ಲೂ ರೂಪಾಯಿ 53 ಸಾವಿರಕ್ಕೂ ಮೇಲೂ ಲಾಭದ ಕೊಡುಗೆ ನೀಡಿದೆ.


ಎಲ್ಲಾ ವರ್ಗದ ಗ್ರಾಹಕರ ಸಹಿತ ಶಿಕ್ಷಕ ವೃಂದಕ್ಕೂ ಅದ್ಬುತ ಕೊಡುಗೆಗಳನ್ನೂ ನೀಡಿದ್ದು , ಕಾರ್ಪೋರೆಟ್ ರಿಯಾಯಿತಿ ಮತ್ತು ಹೆಚ್ಚುವರಿ ಲಾಭವೂ ಸಿಗಲಿದೆ. ನೂರರಷ್ಟು ಅತೀ ಸರಳ ಹಾಗೂ ಸುಲಭ ಸಾಲ ಸೌಲಭ್ಯ , ಹಳೇ ಕಾರಿನ ವಿನಿಮಯಕ್ಕೂ ಉತ್ತಮ ಕೊಡುಗೆಯನ್ನೂ ಕೂಡ ನೆಕ್ಸಾ ಭಾರತ್ ಘೋಷಣೆ ಮಾಡಿದೆ.
ಅರ್ಬನ್ ಎಸ್ಯುವಿ ಕಾರು ಖರೀದಿಗೆ ಮತ್ತೊಮ್ಮೆ ಅವಕಾಶ ತೆರೆದುಕೊಂಡಿದ್ದು , ನೌಕರರು , ಶಿಕ್ಷಕರು ಹಾಗೂ ಕಾರ್ಪೊರೇಟ್ ಉದ್ಯೋಗಿಗಳಿಗೆ ಅತ್ಯಧಿಕ ಲಾಭದ ಯೋಜನೆ ಸಂಸ್ಥೆ ಘೋಷಣೆ ಮಾಡಿದ್ದು , ಸದ್ಯವೇ ಕಾರುಗಳ ಬೆಲೆಯೂ ಕೂಡಾ ಏರಿಕೆ ಕಾಣಲಿದ್ದು , ಕಾರು ಪ್ರಿಯರು ಇದರ ಲಾಭ ಪಡೆಯುವಂತೆ ಪ್ರಕಟಣೆ ತಿಳಿಸಿದೆ.

ದಾಖಲೆ ನೀಡಿ ,ಒಂದು ರೂಪಾಯಿ ಕೊಟ್ಟು ,ಕಾರು ಪಡೆಯಿರಿ!
ಭಾರತ್ ನೆಕ್ಸಾ ತನ್ನ ಇಗ್ನ್ನೀಸ್ ,ಬೆಲೆನೋ ಕಾರು ಖರೀದಿಗೆ ಭರಪೂರ ಕೊಡುಗೆ ಜೊತೆಗೆ ಹಲವು ರೀತಿಯ ಯೋಜನೆಗಳನ್ನೂ ಘೋಷಣೆ ಮಾಡಿದ್ದು , ನಿಮ್ಮ ಕೆವೈಸಿ ದಾಖಲೆ ನೀಡಿ ಬರೀ ಒಂದು ರೂಪಾಯಿಗೆ ಕಾರು ಖರೀದಿಸೋ ಅವಕಾಶವನ್ನೂ ಘೋಷಣೆ ಮಾಡಿದ್ದು , ಕೊಡುಗೆ ಸೀಮಿತ ಅವಧಿವರೆಗೆಂದು ಪ್ರಕಟಣೆ ತಿಳಿಸಿದೆ.
ಮಾಹಿತಿಗಾಗಿ –
7624893030, 9620893030 ಕರೆ ಮಾಡಬಹುದು.

LEAVE A REPLY

Please enter your comment!
Please enter your name here