ಕಡಬ :ಶೌರ್ಯ ಬಳಗವು ಶೂರರ ಬಳಗ ಇವರು ಯಾವುದೇ ವಿಪತ್ತು ನಿರ್ವಹಣೆಗೂ ಸಿದ್ದವಾಗಿದ್ದಾರೆ- ಕಡಬ ಉಪ ತಹಶಿಲ್ದಾರ್ ಗೊಪಾಲ್ ಕೆ
ಪುತ್ತೂರು : ಕಡಬ ದುರ್ಗಾಂಬಿಕಾ ಸಭಾಭವನದಲ್ಲಿ ನಡೆದ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆ ಹಾಗೂ ಜನಜಾಗೃತಿ ವೇದಿಕೆಯ ಕಡಬ ತಾಲೂಕಿನ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಸಮಿತಿಯ ಮಾಸಿಕ ಸಭೆ ನಡೆಯಿತು.ಕಾರ್ಯಕ್ರಮವನ್ನು ಉಧ್ಘಾಟಿಸಿ ಮಾತನಾಡಿದ ಕಡಬ ತಾಲೂಕು ಉಪ ತಹಶಿಲ್ದಾರ್ ಗೊಪಾಲ್ ಕೆ ಧರ್ಮಸ್ಥಳ ಯೋಜನೆಯು ಪೂಜ್ಯ ವೀರೇಂದ್ರ ಹೆಗ್ಗಡೆಯವ ದೂರದೃಷ್ಟಿತ್ವದ ವಿಪತ್ತು ನಿರ್ವಹಣಾ ಶೌರ್ಯ ಬಳಗವು ನಡೆಸುತ್ತಿರುವ ಸಾಮಾಜಿಕ ಕಳಕಳಿಯ ಹಾಗೂ ವಿಪತ್ತು ನಿರ್ವಹಣಾ ಸೇವೆ ಶ್ಲಾಘನೀಯ ಈ ಬಳಗವು ಶೂರರನ್ನು ಒಳಗೊಂಡಿರುವ ಬಳಗವಾಗಿದೆ. ಸರಕಾರದ ವಿಪತ್ತು ನಿರ್ವಹಣಾ ಬಳಗದೊಂದಿಗೆ ಜೊತೆಯಾಗಿ ವಿಪತ್ತು ನಿರ್ವಹಣೆಯಲ್ಲಿ ಸೇರಿಕೊಂಡಲ್ಲಿ ಪ್ರಾಕೃತಿಕವಾಗಿ ಬರುವ ಆಪತ್ತುಗಳಿಂದ ಸಮಾಜಕ್ಕೆ ರಕ್ಷಣೆ ನೀಡಬಹುದು ಎಂದರು.
ಜನಜಾಗೃತಿಯ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೇಂಟ್ ಪಾಯ್ಸ್ ಕಡಬ ತಾಲೂಕಿನ ಆರು ಶೌರ್ಯ ಘಟಕಕ್ಕೆ ನಿರ್ಣಯ ಪುಸ್ತಕ ವಿತರಿಸಿ ಮಾರ್ಗದರ್ಶನ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಜನಜಾಗೃತಿ ವೇದಿಕೆ ಅಧ್ಶಕ್ಷರ ಮಹೇಶ್ ಕೆ. ಸವಣೂರು ವಹಿಸಿದ್ದರು. ವೇದಿಕೆಯಲ್ಲಿ ಜಿಲ್ಲಾ ನಿರ್ದೆಶಕ ಪ್ರವೀಣ್ ಕುಮಾರ್ ವಿಪತ್ತು ನಿರ್ವಹಣಾ ಘಟಕ ಯೋಜನಾಧಿಕಾರಿ ಜೈವಂತ್ ಪಟಗಾರ್, ತಾಲೂಕು ಕೇಂದ್ರ ಒಕ್ಕೂಟದ ಅಧ್ಯಕ್ಷ ಸಂತೋಷ್ ಕೆ, ತಾಲೂಕು ಜನಜಾಗೃತಿ ವೇದಿಕೆ ಸದಸ್ಯ ಶಿವಪ್ರಸಾದ್ ರೈ ಮೈಲೇರಿ ಉಪಸ್ಥಿತರಿದ್ದರು.
ತಾಲೂಕು ಯೋಜನಾಧಿಕಾರಿ ಮೇದಪ್ಪ ಯನ್ ಸ್ವಾಗತಿಸಿ ಮೇಲ್ವೀಚಾರಕ ವಿಜೇಶ್ ಜೈನ್ ವಂದಿಸಿದರು, ತಾಲೂಕು ಜ್ಞಾನವಿಕಾಶ ಸಮನ್ವಯಾಧಿಕಾರಿ ಚೇತನಾ ವರದಿ ವಾಚಿಸಿದರು. ಪ್ರಶಾಂತ್ ಯನ್ ಯಸ್ ಪ್ರಾರ್ಥಿಸಿದರು.
ತಾಲೂಕಿನ ಶೌರ್ಯ ವಿಪತ್ತು ಘಟಕದ ಮಾಸ್ಟರ್ ಆಗಿ ಪ್ರಶಾಂತ್ ಯನ್ ಯಸ್ ಹಾಗೂ ಕ್ಯಾಪ್ಟನ್ ಆಗಿ ಭವಾನಿಶಂಕರ ಆಯ್ಕೆಯಾದರು.
ಕಡಬ ವಲಯ ಮೇಲ್ವೀಚಾರಕ ರವಿಪ್ರಸಾದ್ ಆಲಾಜೆ ಕಾರ್ಯಕ್ರಮ ನಿರೂಪಿಸಿದರು..