ಪುತ್ತೂರು: ಕಡಬ ಕುಮಾರಧಾರ ಸಂಜೀವಿನಿ ತಾಲೂಕು ಮಟ್ಟದ ಒಕ್ಕೂಟದ ವತಿಯಿಂದ ಆಟಿ ಕೂಟ ಕಾರ್ಯಕ್ರಮವನ್ನು ಕಡಬ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಕಾರ್ಯಕ್ರಮವನ್ನು ಆ.11ರಂದು ಆಚರಿಸಲಾಯಿತು.
ಆಟಿ ಕೂಟ ಕಾರ್ಯಕ್ರಮದ ಅಂಗವಾಗಿ ವಿವಿಧ ಸ್ಪರ್ಧೆಗಳನ್ನು, ಆಟಿ ತಿಂಗಳಲ್ಲಿ ಮಾಡುವ ತಿಂಡಿಗಳ ಸ್ಪರ್ಧೆಯನ್ನು ಒಕ್ಕೂಟದ ಸ್ವ ಸಹಾಯ ಗುಂಪಿನ ಸದಸ್ಯರಿಗೆ ಮತ್ತು ಸಮುದಾಯ ಸಂಪನ್ಮೂಲ ವ್ಯಕ್ತಿಗಳಿಗೆ ಏರ್ಪಡಿಸಿ ವಿಜೇತರಿಗೆ ಬಹುಮಾನ ನೀಡಲಾಯಿತು. ಸಭಾ ಕಾರ್ಯಕ್ರಮದಲ್ಲಿ ಆಟಿ ಕೂಟ ಕಾರ್ಯಕ್ರಮದ ಮಹತ್ವ, ಹಿಂದಿನ ಕಾಲದ ಆಹಾರ ಪದ್ದತಿಗಳ ಕುರಿತು ಸಹಾಯಕ ನಿರ್ದೇಶಕ ಚೆನ್ನಪ್ಪ ಗೌಡ ಮಾಹಿತಿ ನೀಡಿದರು. ಸಂಪನ್ಮೂಲ ವ್ಯಕ್ತಿಯಾಗಿ ಮರ್ದಾಳ ಸಮುದಾಯ ಆರೋಗ್ಯ ಅಧಿಕಾರಿ ಜ್ಯೋತಿವರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಸಂಜೀವಿನಿ ತಾಲೂಕು ಒಕ್ಕೂಟದ ಅಧ್ಯಕ್ಷರು, ಕಾರ್ಯದರ್ಶಿ & ಪದಾಧಿಕಾರಿಗಳು, ಡೇ ನಲ್ಮ್ ಅಭಿಯಾನ ನಿರ್ವಹಣಾ ಘಟಕ ಕಡಬ ತಾಲೂಕಿನ ಸಿಬ್ಬಂದಿಗಳು, 21ಗ್ರಾಮ ಪಂಚಾಯತ್ ನ ಸಂಜೀವಿನಿ ಒಕ್ಕೂಟಗಳ ಸಮುದಾಯ ಸಂಪನ್ಮೂಲ ವ್ಯಕ್ತಿಗಳು ಉಪಸ್ಥಿತರಿದ್ದರು.