ಪುತ್ತೂರು ಕಮ್ಯುನಿಟಿ ಸೆಂಟರ್ ವಿದ್ಯಾರ್ಥಿಗಳನ್ನು ಗುರಿ ಮುಟ್ಟಿಸಲು ಗುರು ವಿನ ಸ್ಥಾನ ದಲ್ಲಿರುವುದು ಶ್ಲಾಘನಾರ್ಹ: ಸಯ್ಯದ್ ಬ್ಯಾರಿ
ಪುತ್ತೂರು: ಜೀವನದಲ್ಲಿ ಸವಾಲುಗಳನ್ನುಎದುರಿಸಿ ಅವಕಾಶ ಗಳನ್ನು ಬಳಸಿಕೊಂಡಾಗ ಯಶಸ್ಸು ಸಾಧ್ಯ, ಪುತ್ತೂರು ಕಮ್ಯೂನಿಟಿ ಸೆಂಟರ್ ನಂತಹ ಸಂಸ್ಥೆ ಗಳ ಮಾರ್ಗದರ್ಶನ ವಿದ್ಯಾರ್ಥಿಗಳ ಗುರಿ ಮುಟ್ಟಿಸುವಲ್ಲಿ ಯಶಸ್ವಿಯಾಗಿದೆ ಎಂದು ಸಯ್ಯದ್ ಬ್ಯಾರಿ ಹೇಳಿದರು. ಬೆಂಗಳೂರಿಗೆ ಅಧ್ಯಯನ ಪ್ರವಾಸ ತೆರಳಿದ ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಪದಾಧಿಕಾರಿಗಳಿಗೆ ಬೆಂಗಳೂರಿನ ತಮ್ಮ ನಿವಾಸ ದಲ್ಲಿ ಏರ್ಪಡಿಸಲಾಗಿದ್ದ ಸ್ನೇಹ ಕೂಟ ಕಾರ್ಯಕ್ರಮದಲ್ಲಿ ನೀಟ್ ಮೂಲಕ ಮೆಡಿಕಲ್ ಸೀಟ್ ಪಡೆದ ವಿದ್ಯಾರ್ಥಿಗಳಾದ ಮಹಮ್ಮದ್ ಬಿಲಾಲ್ (ನೀಟ್ 645), ಮಹಮ್ಮದ್ ನಸ್ವೀಫ್ ಚೊಕ್ಕಬೆಟ್ಟು (580), ಫಾತಿಮಾ
(ಅಮ್ನಾಜ್ 550) ನಫೀಸ್ ಸಹಾಬ್ (545), ಮೆರಿಟ್ ಮೆಡಿಕಲ್ ಸೀಟ್ 5 ವಿದ್ಯಾರ್ಥಿಗಳ ಪೈಕಿ ಇಬ್ಬರಿಗೆ ಲ್ಯಾಪ್ ಟಾಪ್,3 ವಿದ್ಯಾರ್ಥಿಗಳಿಗೆ ಕಾಲೇಜು ಫೀಸ್ ನ ಸ್ಕಾಲರ್ ಶಿಪ್ ಸಯ್ಯದ್ ಬ್ಯಾರಿ ವಿತರಿಸಿದರು.
ವಿಷಯ ಪ್ರಸ್ತಾವನೆಗೈದ ಪುತ್ತೂರು ಕಮ್ಯುನಿಟಿ ಸೆಂಟರ್ ನ ವ್ಯವಸ್ಥಾಪಕ ಹನೀಫ್ ಮಾತನಾಡಿ 11 ವಿದ್ಯಾರ್ಥಿಗಳಿಗೆ ಸರಕಾರಿ ಕೋಟಾದಡಿಯಲ್ಲಿ ವೈದ್ಯಕೀಯ ವ್ಯಾಸಂಗಕ್ಕೆ ಪ್ರವೇಶಾತಿ ದೊರಕಿರುತ್ತದೆ ಎಂದರು.
ಈ ಸಂದರ್ಭದಲ್ಲಿಪ್ರೆಸಿಡೆನ್ಸಿ ಯುನಿವರ್ಸಿಟಿ ಕುಲಪತಿ ನಿಸಾರ್ ಅಹ್ಮದ್,ದ. ಕ. ಮತ್ತು ಉಡುಪಿ ಜಿಲ್ಲಾ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಗೌರವಾಧ್ಯಕ್ಷ ಉಮ್ಮರ್ ಟಿ. ಕೆ., ಅಧ್ಯಕ್ಷ ಮೂಸಬ್ಬ ಪಿ. ಬ್ಯಾರಿ, ಉಪಾಧ್ಯಕ್ಷ ಕೆ. ಎಂ. ಮುಸ್ತಫ ಸುಳ್ಯ, ಪ್ರದಾನ ಕಾರ್ಯದರ್ಶಿ ರಿಯಾಜ್ ಟ್ಯಾಲೆಂಟ್, ಖಜಾಂಚಿ ನಿಸಾರ್ ಕೋಸ್ಥಲ್, ಶಿಕ್ಷಣ ಸಂಸ್ಥೆ ಮುಖ್ಯಸ್ಥ ಇಕ್ಬಾಲ್, ಕಮ್ಯುನಿಟಿ ಸೆಂಟರ್ ನ ಇಮ್ತಿಯಾಜ್ ಮೊದಲಾದವರು ಉಪಸ್ಥಿತರಿದ್ದರು.