ಜಿಲ್ಲಾ ಮಟ್ಟದ ಈಜು ಸ್ಪರ್ಧೆ-ಅಕ್ವಟಿಕ್ ಕ್ಲಬ್ 10 ಮಂದಿ ರಾಜ್ಯ ಮಟ್ಟಕ್ಕೆ ಆಯ್ಕೆ

0

28 ಪದಕಗಳನ್ನು ಮುಡಿಗೇರಿಸಿಕೊಂಡ ಕ್ಲಬ್ ನ 12 ಮಂದಿ ಈಜುಪಟುಗಳು

ಪುತ್ತೂರು: ಮಂಗಳೂರಿನ ಮಂಗಳಾ ಈಜುಕೊಳದಲ್ಲಿ ಆ.11ರಂದು ನಡೆದ ಜಿಲ್ಲಾ ಮಟ್ಟದ ಶಾಲಾ ಕ್ರೀಡಾಕೂಟದ ಈಜು ಸ್ಪರ್ಧೆಯಲ್ಲಿ (SGFI) ಪುತ್ತೂರು ಅಕ್ವಾಟಿಕ್ ಕ್ಲಬ್‌ನ 12 ಈಜುಗಾರರು 28 ಪದಕಗಳನ್ನು ಗೆದ್ದಿದ್ದಾರೆ. ಇದರಲ್ಲಿ 10 ಈಜು ಪಟುಗಳು ಬೆಂಗಳೂರಿನಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಎಸ್.ಜಿ.ಎಫ್.ಐ ಈಜು ಸ್ಪರ್ಧೆಗೆ ಅರ್ಹತೆ ಪಡೆದಿದ್ದಾರೆ.


ದರ್ಬೆ ಬೆಥನಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಪ್ರತೀಕ್ಷಾ ಎನ್.ಶೆಣೈಯವರು 50 ಮೀಟರ್ ಬ್ರೆಸ್ಟ್‌ ಸ್ಟ್ರೋಕ ನಲ್ಲಿ 1 ಚಿನ್ನದ ಪದಕ ಮತ್ತು 100 ಮತ್ತು 200 ಮೀಟರ್ಸ್ ಬ್ರೆಸ್ಟ ಸ್ಟ್ರೋಕ್‌ನಲ್ಲಿ 2 ಬೆಳ್ಳಿ ಪದಕಗಳನ್ನು ಪಡೆದುಕೊಂಡಿದ್ದಾರೆ. 10ನೇ ತರಗತಿ ವಿದ್ಯಾರ್ಥಿನಿ ಪ್ರಾಧಿ ಕ್ಲೇರ್ ಪಿಂಟೋ 50, 100 ಹಾಗೂ 200 ಮೀಟರ್ ಬ್ಯಾಕ್‌ ಸ್ಟ್ರೋಕ್ ‌ನಲ್ಲಿ 3 ಚಿನ್ನದ ಪದಕ ಗಳಿಸಿದ್ದಾರೆ. ಅಲ್ಲದೆ ರಾಜ್ಯ ಮಟ್ಟದಲ್ಲಿ 4100 ಮೀಟರ್ಸ್ ಮೆಡ್ಲೆ ರಿಲೇ ಮತ್ತು 4100 ಮೀಟರ್ಸ್ ಫ್ರೀಸ್ಟೈಲ್ ರಿಲೇಗೆ ಅರ್ಹತೆ ಪಡೆದಿದ್ದಾರೆ.
ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯ 10 ನೇ ತರಗತಿಯ ವಿದ್ಯಾರ್ಥಿ ಅಮನರಾಜ್ ಆರ್ 200 ಮೀಟರ್ ಫ್ರೀಸ್ಟೈಲ್ ನಲ್ಲಿ 1 ಚಿನ್ನದ ಪದಕ ಮತ್ತು 50 ಮೀಟರ್ ಬ್ಯಾಕ್ ಸ್ಟ್ರೋಕ್ ಮತ್ತು 200 ಮೀಟರ್ ವೈಯಕ್ತಿಕ ಮೆಡ್ಲೆಯಲ್ಲಿ 2 ಬೆಳ್ಳಿ ಪದಕಗಳನ್ನು ಗೆಲ್ಲುವ ಮೂಲಕ ರಾಜ್ಯ ಮಟ್ಟಕ್ಕೆ ಅರ್ಹತೆ ಪಡೆದಿದ್ದಾರೆ.
ಸೇಂಟ್ ಫಿಲೋಮಿನಾ ಅನುದಾನಿತ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿ ಅನ್ವಿತ್ ರೈ ಬಾರಿಕೆ 50 ಮತ್ತು 100 ಮೀಟರ್ ಬಟರ್ ಫ್ಲೈನಲ್ಲಿ 2 ಬೆಳ್ಳಿ ಮತ್ತು 50 ಮೀಟರ್ ಫ್ರೀಸ್ಟೈಲ್ ನಲ್ಲಿ 1 ಕಂಚಿನ ಪದಕ ಗೆಲ್ಲುವ ಮೂಲಕ ರಾಜ್ಯ ಮಟ್ಟಕ್ಕೆ ಅರ್ಹತೆ ಪಡೆದಿದ್ದಾರೆ. ಅವರು ರಾಜ್ಯ ಮಟ್ಟದಲ್ಲಿ 4100 ಫ್ರೀಸ್ಟೈಲ್ ರಿಲೇ ತಂಡದ ಭಾಗವಾಗಿರುತ್ತಾರೆ. 9ನೇ ತರಗತಿ ವಿದ್ಯಾರ್ಥಿನಿ ಅಮೀ ಭಟ್ 200 ಫ್ರೀಸ್ಟೈಲ್, 50 ಮೀಟರ್ ಬ್ಯಾಕ್‌ಸ್ಟ್ರೋಕ್ ಮತ್ತು 4100 ಫ್ರೀಸ್ಟೈಲ್ ರಿಲೇಯಲ್ಲಿ 3 ಕಂಚಿನ ಪದಕಗಳನ್ನು ಗೆದ್ದಿದ್ದಾರೆ.
ಸೇಂಟ್ ಫಿಲೋಮಿನಾ ಹಿ.ಪ್ರಾ ಶಾಲಾ 7ನೇ ತರಗತಿಯ ಲಿಕಿತ್ ರಾಮಚಂದ್ರ 100 ಮೀಟರ್ ಬ್ರೆಸ್ಟ್ ಸ್ಟ್ರೋಕ್ ಮತ್ತು 200 ಮೀಟರ್ ಫ್ರೀಸ್ಟೈಲ್ ನಲ್ಲಿ 2 ಚಿನ್ನ ಗೆದ್ದಿದ್ದಾರೆ. 200 ಮೀಟರ್ಸ್ ವೈಯಕ್ತಿಕ ಮೆಡ್ಲೆಯಲ್ಲಿ ಬೆಳ್ಳಿ ಪದಕ ಪಡೆದಿರುವ ಲಿಕಿತ್ 14 ವರ್ಷದೊಳಗಿನವರ ವಿಭಾಗದಲ್ಲಿ 13 ಅಂಕಗಳನ್ನು ಗಳಿಸುವ ಮೂಲಕ ವೈಯಕ್ತಿಕ ಚಾಂಪಿಯನ್ ಆಗಿದ್ದಾರೆ.
ವಿಟ್ಲ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯ 7ನೇ ತರಗತಿ ವಿದ್ಯಾರ್ಥಿ ಚರಿತ್ ಅಮೀನ್ ಕೆ 100 ಮೀಟರ್ ಬಟರ್ ಫ್ಲೈನಲ್ಲಿ 1 ಚಿನ್ನ, 50 ಮೀಟರ್ ಬಟರ್ ಫ್ಲೈನಲ್ಲಿ 1 ಬೆಳ್ಳಿ ಹಾಗೂ 50 ಮೀಟರ್ ಬ್ಯಾಕ್ ಸ್ಟ್ರೋಕ್ ನಲ್ಲಿ 1 ಕಂಚಿನ ಪದಕ ಗೆಲ್ಲುವ ಮೂಲಕ ರಾಜ್ಯ ಮಟ್ಟಕ್ಕೆ ಅರ್ಹತೆ ಪಡೆದಿದ್ದಾರೆ.
ಸುದಾನ ವಸತಿ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಅನಿಕಾ ಯು 50 ಮೀಟರ್ ಬ್ರೆಸ್ಟ್ ಸ್ಟ್ರೋಕ್ ನಲ್ಲಿ 2 ಬೆಳ್ಳಿ ಹಾಗೂ 50 ಮೀಟರ್ ಬಟರ್ ಫ್ಲೈ ಹಾಗೂ 100 ಬ್ರೆಸ್ಟ್ ಸ್ಟ್ರೋಕ್ ನಲ್ಲಿ 1 ಕಂಚಿನ ಪದಕ ಗೆದ್ದು ರಾಜ್ಯ ಮಟ್ಟಕ್ಕೆ ಅರ್ಹತೆ ಪಡೆದಿದ್ದಾರೆ . 9ನೇ ತರಗತಿ ವಿದ್ಯಾರ್ಥಿ ನಿಕೋಲಸ್ ಮಥಾಯಿಸ್ 50 ಮತ್ತು 100 ಮೀಟರ್ಸ್ ಬ್ರೆಸ್ಟ್ ಸ್ಟ್ರೋಕ್ ನಲ್ಲಿ 2 ಬೆಳ್ಳಿ ಪದಕ ಗೆಲ್ಲುವ ಮೂಲಕ ರಾಜ್ಯ ಮಟ್ಟಕ್ಕೆ ಅರ್ಹತೆ ಪಡೆದಿದ್ದಾರೆ. 7ನೇ ತರಗತಿ ವಿದ್ಯಾರ್ಥಿನಿ ಮಾನ್ವಿ 50 ಮೀಟರ್ ಬ್ರೆಸ್ಟ್ ಸ್ಟ್ರೋಕ್ ಮತ್ತು 50 ಮೀಟರ್ ಫ್ರೀಸ್ಟೈಲ್ ನಲ್ಲಿ 2 ಕಂಚಿನ ಪದಕ ಗೆದ್ದಿದ್ದಾರೆ.
ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 10ನೇ ತರಗತಿ ವಿದ್ಯಾರ್ಥಿ ವೇದವ್ರತ ಭಂಡಾರಿ 200 ಬ್ರೆಸ್ಟ್ ಸ್ಟ್ರೋಕ್. ಮತ್ತು 4*100 ಮೆಡ್ಲೆ ರಿಲೇಯಲ್ಲಿ 2 ಕಂಚಿನ ಪದಕ ಗೆದ್ದಿದ್ದಾರೆ.
ಈಜು ತರಬೇತುದಾರಾದ ಪಾರ್ಥ ವಾರಣಾಶಿ, ದೀಕ್ಷಿತ್ ಮತ್ತು ರೋಹಿತ್ ರವರಲ್ಲಿ ತರಬೇತಿ ಪಡೆಯುತ್ತಿರುವ ಈಜು ಪಟುಗಳು ಪರ್ಲಡ್ಕ ಡಾ.ಶಿವರಾಮ ಕಾರಂತ ಬಾಲವನ ಈಜುಕೊಳ ಮತ್ತು ಮಂಗಳೂರಿನ ಸೇಂಟ್ ಅಲೋಶಿಯಸ್ ಈಜುಕೊಳದಲ್ಲಿ ತರಬೇತಿ ಪಡೆಯುತ್ತಿದ್ದಾರೆ ಎಂದು ಪುತ್ತೂರು ಅಕ್ವಾಟಿಕ್ ಕ್ಲಬ್‌ನ ಅಧ್ಯಕ್ಷ ರಾಮಚಂದ್ರ ಎ.ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here