ಉಪ್ಪಿನಂಗಡಿ: ವಿದ್ಯಾರ್ಜನೆಗೆ ನೀಡುವ ದಾನ, ಕೊಡುಗೆ ಶ್ರೇಷ್ಟತೆ ಮತ್ತು ಮೌಲ್ಯಯುತವಾಗಿರುತ್ತದೆ. ಈ ರೀತಿಯಲ್ಲಿ ಅಲ್ಲಾಹುವಿನ ಸೇವೆ ಮಾಡುವಾತನಿಗೆ ಅನುಗ್ರಹದ ಫ್ರತಿಫಲ ದೊರಕುವುದರಲ್ಲಿ ಯಾವುದೇ ಸಂದೇಹ ಇಲ್ಲ. ಆ ಮೂಲಕ ಅಲ್ಲಾಹುವಿನ ಸಂಪ್ರೀತಿ ಪಡೆಯಬಹುದು ಎಂದು ಜಂ-ಇಯ್ಯತುಲ್ ಉಲಮಾ ಕರ್ನಾಟಕ ಇದರ ಅಧ್ಯಕ್ಷ ಖಾಝಿ ಝೈನುಲ್ ಉಲಮಾ ಮಾಣಿ ಉಸ್ತಾದ್ ಹೇಳಿದರು.
ಆ.13ರಂದು 34-ನೆಕ್ಕಿಲಾಡಿ ಉಮರುಲ್ ಫಾರೂಕ್ ಜುಮಾ ಮಸೀದಿ ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಖುವ್ವತುಲ್ ಇಸ್ಲಾಂ ಸೆಕೆಂಡರಿ ಮದ್ರಸದ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಸೇವೆಯನ್ನು ಅಲ್ಲಾಹುವಿಗೆ ಅರ್ಪಣೆ ಮಾಡುವ ಮಾತ್ರಕ್ಕೆ ನಾವು ಸಂತ್ರಪ್ತರಾಗಲಾರೆವು, ಅಲ್ಲಿ ನಡೆಯುವ ಸಂತ್ಕರ್ಮಗಳು ನಮ್ಮನ್ನು ಒಳಿತಿನ ಕಡೆಗೆ ಕೊಂಡೊಯ್ಯಲಿದೆ. ಇದರ ಪರಿಪಾಲನೆ ನಮ್ಮಿಂದ ಆಗಬೇಕು ಎಂದರು.
ಸರಳಿಕಟ್ಟೆ ಮಸೀದಿಯ ಮುದರ್ರಿಸ್ ಅಬ್ಬಾಸ್ ಸಹದಿ ಉಸ್ತಾದ್ ದುವಾಃ ಆಶೀರ್ವಚನ ನೀಡಿದರು. ಉಪ್ಪಳ್ಳಿ ಮಸೀದಿ ಮುದರ್ರಿಸ್ ಇಸ್ಮಾಯಿಲ್ ಸಅದಿ ಅಲ್ ಅಫ್ಳಲಿ ಮಾಚಾರ್, ನೆಕ್ಕಿಲಾಡಿ ಮಸೀದಿ ಖತೀಬ್ ಇಬ್ರಾಹಿಂ ಸಹದಿ ಅಲ್ ಅಫ್ಳಲಿ ಮಾತನಾಡಿದರು.
34-ನೆಕ್ಕಿಲಾಡಿ ಮಸೀದಿ ಅಧ್ಯಕ್ಷ ಮಹಮ್ಮದ್ ಹಾಜಿ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಜುನೈದ್ ಮುಸ್ಲಿಯಾರ್, ಖಬೀರ್ ಮುಸ್ಲಿಯಾರ್, ರಫೀಕ್ ಮುಸ್ಲಿಯಾರ್, ಅಬ್ದುಲ್ ಅಜೀಜ್ ಮುಸ್ಲಿಯಾರ್, ಅಶ್ರಫ್ ಸಖಾಫಿ, ಮಸೀದಿ ಆಡಳಿತ ಸಮಿತಿ ಪದಾಧಿಕಾರಿಗಳಾದ ಹಾಜಿ ಸಿದ್ದಿಕ್ ಅರಫಾ, ಹಾಜಿ ಶೇಕಬ್ಬ, ಹಸೈನಾರ್ ಹಾಜಿ, ಇಸ್ಮಾಯಿಲ್ ಮೇದರಬೆಟ್ಟು, ಸಿದ್ದಿಕ್ ಮೇದರಬೆಟ್ಟು, ಝಕರಿಯಾ ಕೊಡಿಪ್ಪಾಡಿ, ಆದರ್ಶನಗರ ಮದ್ರಸ ಸಮಿತಿ ಅಧ್ಯಕ್ಷ ಅಮೀರ್ ಜಾನ್ ಸಾಹೇಬ್, ಝಾಕಿರ್ ಹುಸೇನ್ ಅರಫ, ಇಬ್ರಾಹಿಂ ಅಗ್ನಾಡಿ, ಖಾದರ್,
ಜಿ. ಶಾನ್ ಮತ್ತಿತರರು ಉಪಸ್ಥಿತರಿದ್ದರು.
ಕಟ್ಟಡ ಸಮಿತಿ ಅಧ್ಯಕ್ಷ ಹಾಜಿ ಇಸಾಕ್ ಮೇದರಬೆಟ್ಟು ಸ್ವಾಗತಿಸಿ, ಅಜೀಜ್ ಪಿ.ಟಿ. ವಂದಿಸಿದರು. ಅಬ್ದುಲ್ ರಹಿಮಾನ್ ಯುನಿಕ್ ಕಾರ್ಯಕ್ರಮ ನಿರೂಪಿಸಿದರು.