ಪ್ರಿಯದರ್ಶಿನಿ ವಿದ್ಯಾಸಂಸ್ಥೆಯಲ್ಲಿ ವಿದ್ಯಾಭಾರತಿ ಜಿಲ್ಲಾಮಟ್ಟದ ವಾಲಿಬಾಲ್ ಪಂದ್ಯಾಟದ ಸಮಾರೋಪ 

0

ಬೆಟ್ಟಂಪಾಡಿ: ವಿದ್ಯಾ ಭಾರತಿ ಕರ್ನಾಟಕ ದಕ್ಷಿಣ ಕನ್ನಡ ಜಿಲ್ಲೆ ಇದರ ಜಿಲ್ಲಾಮಟ್ಟದ ವಾಲಿಬಾಲ್ ಪಂದ್ಯಾಟದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ  ಮನಮೋಹನ ರೈ ಚೆಲ್ಯಡ್ಕ ಬ್ರೈಟ್ ವೇ ಇಂಡಿಯಾ ಕನ್ಸಲ್ಟೆನ್ಸಿ ಅಂಡ್ ಎಲೈಡ್ ಸರ್ವಿಸಸ್ ಮಂಗಳೂರು ಇವರು ಯಶಸ್ವಿ ಪಂದ್ಯಾಟದ ಕುರಿತು ಮಾತನಾಡುತ್ತಾ ದೈಹಿಕ ದೃಢತೆ ಹಾಗೂ ಮಾನಸಿಕ ಸ್ಥಿರತೆಗೆ ಈ ತೆರನಾದ ದೈಹಿಕ ಕಸರತ್ತುಗಳು ಅವಶ್ಯಕ. ಬಹಳ ಉತ್ತಮ ರೀತಿಯಲ್ಲಿ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟ ಆಯೋಜನೆಗೊಂಡಿದೆ ಎಂದು ಹೇಳಿದರು. ಮುಖ್ಯ ಅತಿಥಿಗಳಾದ ಚಿದಾನಂದ ಬೈಲಾಡಿ ನೋಟರಿ ವಕೀಲರು ಪುತ್ತೂರು ಇವರು ಪಂದ್ಯಾಟವು ಬಹಳ ಅಚ್ಚುಕಟ್ಟಾಗಿ ಅದ್ಭುತವಾಗಿ ಮೂಡಿಬಂದಿದೆ. ರಾಜ್ಯ ರಾಷ್ಟ್ರಮಟ್ಟದ ಪಂದ್ಯಾಟದ ಆಯೋಜನೆಗಳು ಪ್ರಿಯದರ್ಶಿನಿ ವಿದ್ಯಾ ಸಂಸ್ಥೆಯಲ್ಲಿ ಇನ್ನಷ್ಟು ಹೆಚ್ಚು ಮೂಡಿ ಬರಲಿ ಎಂದರು. ಕಾರ್ಯಕ್ರಮದ ಇನ್ನೋರ್ವ ಅತಿಥಿಯಾದ ಪೊಲೀಸ್ ಇಲಾಖೆ ಮಂಗಳೂರು ಇದರ ಶ್ರೀಹರಿ ಪಾಣಾಜೆ ನನ್ನ ಯಶಸ್ಸಿಗೆ ಬಿಲ್ವಗಿರಿ ಕ್ರೀಡಾಂಗಣವೇ ಪ್ರೇರೇಪಣೆ ಎಂದು ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ವೆಂಕಟೇಶ್ವರ ಪವರ್ ಸೊಲ್ಯೂಷನ್ಸ್ ಬೆಂಗಳೂರು ಇದರ ಮ್ಯಾನೇಜಿಂಗ್ ಡೈರೆಕ್ಟರ್ ಆದ ಸತ್ಯ ಎನ್, M far construction pvt Ltd  ಇದರ  ಜನರಲ್ ಮ್ಯಾನೇಜರ್ ಆದ  ಸಂತೋಷ್ ಕುಮಾರ್ ಜಿ , ನವೋದಯ ಪ್ರೌಢಶಾಲೆಯ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ  ದಯಾನಂದ ರೈ.ಕೋರ್ಮಂಡ, ಆಡಳಿತ ಮಂಡಳಿ ಅಧ್ಯಕ್ಷ ರಂಗನಾಥ ರೈ ಗುತ್ತು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸುಮಾರು 18 ಶಾಲೆಗಳ 40 ತಂಡಗಳು ಪಂದ್ಯಾಟದಲ್ಲಿ ಭಾಗವಹಿಸಿದ್ದರು. ಮುಖ್ಯಗುರು ರಾಜೇಶ್ ನೆಲ್ಲಿತಡ್ಕ ಸ್ವಾಗತಿಸಿ ವಂದಿಸಿದರು. ಶಾಂತಿಮಂತ್ರದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

ಫಲಿತಾಂಶ

ತರುಣ ವರ್ಗ 

ಬಾಲಕರು – ಪ್ರಥಮ – ಶಾರದಾ ಗಣಪತಿ ಕೈರಂಗಳ,ಮಂಗಳೂರು

ದ್ವಿತೀಯ – ಶಕ್ತಿ ಪಿ.ಯು ಕಾಲೇಜು ಮಂಗಳೂರು

—-

ತರುಣ ವರ್ಗ ಬಾಲಕಿಯರು

ಪ್ರಥಮ- ಮುಂಡಾಜೆ ಪಿ ಯು ಕಾಲೇಜು ಮುಂಡಾಜೆ

ದ್ವಿತೀಯ – ಶಾರದಾ ವಿದ್ಯಾನಿಕೇತನ, ತಲಪಾಡಿ ,ಮಂಗಳೂರು

—–

ಕಿಶೋರ ಬಾಲಕರು

ಪ್ರಥಮ- ಶಾರದಾ ಗಣಪತಿ

ದ್ವಿತೀಯ – ಶಕ್ತಿ ರೆಸಿಡೆನ್ಶಿಯಲ್ ಸ್ಕೂಲ್ ,ಮಂಗಳೂರು

ಕಿಶೋರ ಬಾಲಕಿಯರು 

ಪ್ರಥಮ – ಮುಂಡಾಜೆ ಹೈಸ್ಕೂಲ್ ಮುಂಡಾಜೆ

ದ್ವಿತೀಯ – ಶಕ್ತಿ

——

ಬಾಲ ವರ್ಗದ ಬಾಲಕರು

ಪ್ರಥಮ – ಇಂದ್ರಪ್ರಸ್ಥ ವಿದ್ಯಾಲಯ ಉಪ್ಪಿನಂಗಡಿ

ದ್ವಿತೀಯ – ಸರಸ್ವತಿ ಇಂಗ್ಲಿಷ್ ಮೀಡಿಯಂ ಮುಂಡಾಜೆ

—-

ಬಾಲವರ್ಗ ಬಾಲಕಿಯರು 

ಪ್ರಥಮ – ಶಾರದಾ ವಿದ್ಯಾನಿಕೇತನ ,ತಲಪಾಡಿ,ಮಂಗಳೂರು

LEAVE A REPLY

Please enter your comment!
Please enter your name here