ರಾಮಕುಂಜ: ಅಖಂಡ ಭಾರತ ಸಂಕಲ್ಪ ಸಪ್ತಾಹ-ಪಂಜಿನ ಮೆರವಣಿಗೆ

0

ರಾಮಕುಂಜ: ಕಡಬ ತಾಲೂಕು ಹಿಂದೂ ಜಾಗರಣ ವೇದಿಕೆ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನ, ಪಂಜಿನ ಮೆರವಣಿಗೆ ರಾಮಕುಂಜದ ಗಣೇಶ್ ನಗರದಲ್ಲಿ ಆ.13ರಂದು ಸಂಜೆ ನಡೆಯಿತು.


ದಿಕ್ಸೂಚಿ ಭಾಷಣ ಮಾಡಿದ ಹಿಂದೂ ಜಾಗರಣ ವೇದಿಕೆ ದಕ್ಷಿಣ ಪ್ರಾಂತ ಕಾರ್ಯಕಾರಿಣಿ ಸದಸ್ಯ ಶ್ರೀಕಾಂತ್ ಶೆಟ್ಟಿಯವರು, ಭಾರತದ ನೆಲದಲ್ಲಿ ಹಿಂದೂ ಪುರಾಣಗಳ ಮಹಾಭಾರತ, ರಾಮಾಯಣಗಳ ಹೆಜ್ಜೆ ಗುರುತುಗಳು ಜೀವಂತವಾಗಿದೆ. ಇಂದಿಗೂ ಪ್ರಪಂಚದಲ್ಲಿ ಭಾರತವನ್ನು ಗುರುತಿಸುವುದು ಹಿಂದೂಸ್ಥಾನವೆಂದು. ಆದರೆ ಪ್ರಸಕ್ತ ದಿನಗಳಲ್ಲಿ ಅನ್ಯ ಧರ್ಮಿಯರ ದುಸ್ಕೃತ್ಯದಿಂದ ಹಿಂದುತ್ವದ ಮೂಲಭೇರು ನಲುಗುತ್ತಿದೆ. ಇದನ್ನು ಮಟ್ಟ ಹಾಕಲು ಹಿಂದೂ ಯುಶಕ್ತಿಗಳು ಸನ್ನದರಾಗಬೇಕೆಂದು ಹೇಳಿದರು. ಸ್ವಾತಂತ್ರ್ಯ ಸಿಕ್ಕಿದ ದಿನದಂದು ಮೂರು ದಿಕ್ಕುಗಳಲ್ಲಿ ಹಂಚಿ ಹೋಗಿರುವ ಅಖಂಡ ಭಾರತವನ್ನು ಪುನಃ ಸ್ಥಾಪಿಸುವುದನ್ನು ನೆನಪಿಸುವುದೇ ಅಖಂಡ ಭಾರತ ಸಂಕಲ್ಪ ದಿನ. ಬೆಂಕಿ ನಮ್ಮ ಅಂಗಳದಲ್ಲಿಯೇ ಉರಿಯುತ್ತಿದೆ, ಇದನ್ನು ಉರಿಸುವುದು, ಆರಿಸುವುದು ನಮ್ಮ ಕೈಯಲ್ಲಿದೆ. ಈ ಬಗ್ಗೆ ನಾವು ಜಾಗೃತರಾಗಬೇಕು ಎಂದರು.
ಉದ್ಯಮಿ ಶಿವಪ್ರಸಾದ್ ಇಜ್ಜಾವು ಅಧ್ಯಕ್ಷತೆ ವಹಿಸಿದ್ದರು. ಹಿಂಜಾವೇ ಕಡಬ ತಾಲೂಕು ಸಹ ಸಂಯೋಜಕ ಮಲ್ಲೇಶ್ ಆಲಂಕಾರು ಉಪಸ್ಥಿತರಿದ್ದರು. ನಿವೃತ್ತ ಯೋಧ ರಾಧಕೃಷ್ಣ ಆನ ಅವರನ್ನು ಸನ್ಮಾನಿಸಲಾಯಿತು. ದಕ್ಷಿಣ ಪ್ರಾಂತ ಕಾರ್ಯಕಾರಿಣಿ ಸದಸ್ಯ ರವಿರಾಜ್ ಶೆಟ್ಟಿ ಪ್ರಸ್ತಾವಿಸಿದರು. ಹಿಂಜಾವೇ ಜಿಲ್ಲಾ ಸಮಿತಿ ಸದಸ್ಯ ರವೀಂದ್ರ ದಾಸ್ ಪೂಂಜ ಸ್ವಾಗತಿಸಿದರು. ಕೊಲ ಗ್ರಾಮ ಪಂಚಾಯಿತಿ ಸದಸ್ಯ ಚಿದಾನಂದ ಪಾನ್ಯಾಲು ವಂದಿಸಿದರು. ಜನಾರ್ದನ ಕೊಲ ವೈಯಕ್ತಿಕ ಗೀತೆ ಹಾಡಿದರು. ಹಿಂಜಾವೇ ಮುಖಂಡ ಮೋಹನ್ ಕೊಲ ನಿರೂಪಿಸಿದರು.
ಪಂಜಿನ ಮೆರವಣಿಗೆ:
ಸಭಾ ಕಾರ್ಯಕ್ರಮಕ್ಕೂ ಮೊದಲು ಉಪ್ಪಿನಂಗಡಿ-ಕಡಬ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಆತೂರಿನಿಂದ ಪಂಜಿನಿ ಮೆರವಣಿಗೆ ನಡೆಯಿತು. ಕೊಯಿಲ ಆತೂರು ಶ್ರೀ ಸದಾಶಿವ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಯದುಶ್ರೀ ಆನೆಗುಂಡಿ ದೀಪ ಬೆಳಗಿಸಿ ಚಾಲನೆ ನೀಡಿದರು. ಆತೂರಿನಿಂದ ಗೋಳಿತ್ತಡಿ ತನಕ ಸಾಗಿ ವಾಪಸ್ಸಾಗಿ ಗಣೇಶ್ ನಗರದಲ್ಲಿ ಸಮಾಪನಗೊಂಡಿತ್ತು.

LEAVE A REPLY

Please enter your comment!
Please enter your name here