ಸರ್ವೆ ಒಕ್ಕಲಿಗ ಗೌಡ ವಿವಿಧ ಸಂಘಟನೆಗಳಿಂದ ಆಟಿ ಆಚರಣೆ – ಪದಗ್ರಹಣ ಕಾರ್ಯಕ್ರಮ

0

ಪುತ್ತೂರು : ಒಕ್ಕಲಿಗ ಸ್ವ – ಸಹಾಯ ಟ್ರಸ್ಟ್ ರಿ.ಪುತ್ತೂರು, ಇದರ ಪ್ರಾಯೋಜಕತ್ವದಲ್ಲಿ ಸರ್ವೆ ಒಕ್ಕಲಿಗ ಗೌಡ ಸೆವಾ ಸಂಘ ,ಒಕ್ಕಲಿಗ ಸ್ವ ಸಹಾಯ ಸಂಘ ಒಕ್ಕೂಟ ,ಒಕ್ಕಲಿಗ ಮಹಿಳಾ ಘಟಕ ಮತ್ತು ಯುವ ಒಕ್ಕಲಿಗ ಗೌಡ ಸೇವಾ ಸಂಘಗಳ ಸಹಕಾರದಿಂದ ಆಟಿ ಆಚರಣೆ ಮತ್ತು ಒಕ್ಕೂಟದ ಪದ ಗ್ರಹಣ ಕಾರ್ಯಕ್ರಮವು ಸರ್ವೆ ಭಕ್ತಕೋಡಿ ಇಲ್ಲಿನ ಶ್ರೀರಕ್ಷಾ ಸಭಾಭಾವನದಲ್ಲಿ ಆ.13 ರಂದು ಜರುಗಿತು.


ಕಾರ್ಯಕ್ರಮದ ಉದ್ಘಾಟನೆಯನ್ನು ಒಕ್ಕಲಿಗ ಸ್ವ ಸಹಾಯ ಒಕ್ಕೂಟದ ಅಧ್ಯಕ್ಷ ವಸಂತ ಬಿ. ಯೆನ್ ದೀಪ ಪ್ರಜ್ವಲನೆ ಮೂಲಕ ಉದ್ಘಾಟಿಸಿ , ಹಾರೈಸಿದರು.
ಸಂಪನ್ಮೂಲ ವ್ಯಕ್ತಿ ಪ್ರಮೀಳಾರವರು ಮಾತನಾಡಿ , ಸಾಂಪ್ರದಾಯಿಕವಾಗಿ ಬೆಳೆದು ಬಂದಿರುವಂತಹ ಆಟಿ ಆಚರಣೆಯನ್ನು ಮುಂದಿನ ಪೀಳಿಗೆಗಾಗಿ ಉಳಿಸಿ ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಆಟಿ ಆಚರಣೆ ತುಳುನಾಡಿನ ಅತ್ಯಂತ ಶ್ರೇಷ್ಠವಾದ ಆಚರಣೆಯಾಗಿದೆ ಎಂದು ಹಾರೈಸಿ , ಆಟಿ ಆಚರಣೆ ಮತ್ತು ಅದರ ಮಹತ್ವ ತಿಳಿಸಿದರು. ಮುಖ್ಯ ಅತಿಥಿಗಳಾಗಿ ಡಾ. ಡಿ. ವಿ ಮನೋಹರ್ ಹಾಗೂ ಜನಾರ್ಧನ ಗೌಡ, ಭಕ್ತಕೋಡಿ ರವರು ಕೂಡ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಅನಿತಾ ಲಕ್ಷ್ಮಣ ಗೌಡ, ಪದ್ಮನಾಭ, ಭಾಗೀರಥಿ ಹಾಗೂ ಶ್ರೀ ಅಶೋಕರವರು ವೇದಿಕೆಯಲ್ಲಿ ಹಾಜರಿದ್ದರು. ಹರ್ಷಾವತಿ. ಕೆ ಹಾಗೂ ಸೌಮ್ಯರವರು ಪ್ರಾರ್ಥನೆ ನೆರವೇರಿಸಿ , ಒಕ್ಕೂಟದ ಪ್ರೇರಕಿ ಹೇಮಾವತಿ ವರದಿ ವಾಚಿಸಿದರು.


ಆ ಬಳಿಕ ಪುಟಾಣಿ ಮಕ್ಕಳಿಗೆ, ಹಿರಿಯರಿಗೆ ಪ್ರತ್ಯೇಕವಾಗಿ ವಿವಿಧ ರೀತಿಯ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಅಕ್ಷತಾ ವಿವಿಧ ಸ್ಪರ್ಧೆಗಳನ್ನು ನಡೆಸಿಕೊಟ್ಟರು.
ಸಂಘದ ಪ್ರೇರಕರಾಗಿದ್ದ ಉದಯ್ ಇವರಿಗೆ ಬೀಳ್ಕೊಡುಗೆ , ಸನ್ಮಾನ ಕಾರ್ಯಕ್ರಮ ನಡೆಯಿತು.


ಎಸ್. ಎಸ್. ಎಲ್. ಸಿ, ಪಿ. ಯು. ಸಿ ಯಲ್ಲಿ ಗರಿಷ್ಟ ಅಂಕಗಳನ್ನು ಪಡೆದ ಸಂಘದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಆಟಿಯ ವಿವಿಧ ರೀತಿಯ ಖಾದ್ಯಗಳೊಂದಿಗೆ, ಮಧ್ಯಾಹ್ನದ ಭೋಜನ ವ್ಯವಸ್ಥೆಯನ್ನು ಮಾಡಲಾಯಿತು. ಒಕ್ಕೂಟದ ಮೇಲ್ವಿಚಾರಕರಾದ ವಿಜಯ್ ಕುಮಾರ್ ರವರು ಕಾರ್ಯಕ್ರಮಕ್ಕೆ ಉತ್ತಮ ರೀತಿಯ ಮಾರ್ಗದರ್ಶನ ನೀಡಿದರು. ಒಕ್ಕಲಿಗ ಭಕ್ತಕೋಡಿ ಸಂಘವನ್ನು ಉತ್ತಮ ಸಂಘವೆಂದು ಗುರುತಿಸಲಾಯಿತು. ವಸಂತ್. ಬಿ. ಎನ್ ಸ್ವಾಗತಿಸಿ, ಜಯಾಕರ್ ನಿರೂಪಿಸಿ, ಭವ್ಯರವರು ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here