ಪುತ್ತೂರು: ಪುತ್ತೂರು ಲ್ಯಾಂಪ್ಸ್ ಸಹಕಾರಿ ಸಂಘದ ಪ್ರಧಾನ ಕಛೇರಿಯಲ್ಲಿ ಆ.15ರಂದು ದೇಶದ 77ನೇ ಸ್ವಾತಂತ್ರ್ಯೋವವನ್ನು ಆಚರಿಸಿದರು.
ಸಂಘದ ಅಧ್ಯಕ್ಷ ಪೂವಪ್ಪ ನಾಯ್ಕ ಎಸ್ ಆಲಂಕಾರುರವರು ಧ್ವಜಾರೋಹಣ ನೆರವೇರಿದರು. ಮುಖ್ಯ ಅತಿಥಿಯಾಗಿ ಪ್ರವೀಣ್ ಭಂಡಾರಿ ಆಗಮಿಸಿದ್ದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಣಪಣ್ಣ ಎಚ್ ಕಾರ್ಯಕ್ರಮ ಸ್ವಾಗತಿಸಿದರು. ಸಿಬಂದಿ ಹೊನ್ನಪ್ಪ ನಾಯ್ಕ ವಂದಿಸಿದರು. ಸಂಘದ ಆಡಳಿತ ಮಂಡಳಿಯ ಉಪಾಧ್ಯಕ್ಷರು, ನಿರ್ದೇಶಕರುಗಳು,ನೌಕರವೃಂದದವರು ಉಪಸ್ಥಿತರಿದ್ದರು.