ಪುತ್ತೂರು: ಸರ್ವೆ ಕಲ್ಪಣೆ ಸರಕಾರಿ ಪ್ರೌಢ ಶಾಲೆಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಶಾಲಾಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಸಿದ್ದೀಕ್ ಸುಲ್ತಾನ್ ಧ್ವಜಾರೋಹಣ ನೆರವೇರಿಸಿದರು. ಮುಖ್ಯ ಶಿಕ್ಷಕ ಜಯರಾಮ ಶೆಟ್ಟಿ ಕೆ ಮತ್ತು ಶಿಕ್ಷಕ ಉಮಾಶಂಕರ ಡಿ ಸ್ವಾತಂತ್ರ್ಯ ದಿನಾಚರಣೆಯ ಮಹತ್ವದ ಬಗ್ಗೆ ತಿಳಿಸಿದರು.

ನಿಕಟಪೂರ್ವ ಕಾರ್ಯಾಧ್ಯಕ್ಷ ಕರುಣಾಕರ ಗೌಡ ಎಲಿಯ, ಪತ್ರಕರ್ತ ಯೂಸುಫ್ ರೆಂಜಲಾಡಿ, ಲತೀಫ್ ಟಿ.ಎ ಮೊದಲಾದವರು ಮಾತನಾಡಿ ಶುಭ ಹಾರೈಸಿದರು. ಮುಂಡೂರು ಗ್ರಾ.ಪಂ ಸದಸ್ಯೆ ರಸಿಕ ಶಿವನಾಥ ರೈ ಮೇಗಿನಗುತ್ತು, ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಅಬ್ದುಲ್ ಅಝೀಝ್ ರೆಂಜಲಾಡಿ, ಹರೀಶ್ ಆಚಾರ್ಯ, ಹಸೈನಾರ್, ರೆಂಜಲಾಡಿ, ಝೈನುದ್ದೀನ್ ಜೆ.ಎಸ್, ಅಬೂಬಕ್ಕರ್ ಮುಸ್ಲಿಯಾರ್, ರಾಧಾಕೃಷ್ಣ ರೈ ರೆಂಜಲಾಡಿ, ರಹೀಂ ರೆಂಜಲಾಡಿ, ಹನೀಫ್ ಕಲ್ಪಣೆ, ಮಹಮ್ಮದ್ ಕಲ್ಪಣೆ, ಹಾರಿಸ್ ಕೂಡುರಸ್ತೆ, ಹಸನ್ ರೆಂಜಲಾಡಿ, ಆದರ್ಶ ಸೇವಾ ಸಂಘ ಹಾಗೂ ನೆಕ್ಕಿಲು ಸ್ವಸ್ತಿಕ್ ಗೆಳೆಯರ ಬಳಗ ನೆಕ್ಕಿಲು ಇದರ ಪದಾಧಿಕಾರಿಗಳು, ಊರವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಿಕ್ಷಕ ವೆಂಕಟೇಶ್, ಶಿಕ್ಷಕಿಯರಾದ ಕಾಂಚನ ಕೆ, ಉಮೇರಾ ತಬಸ್ಸಂ, ಹರ್ಷಿತ, ಕಮಲ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕ ಸಹದೇವ್ ಕಾರ್ಯಕ್ರಮ ನಿರೂಪಿಸಿದರು.