ಬಡಗನ್ನೂರು:ಕೊಯಿಲ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ನಡೆಯಿತು. ಸ್ವಾತಂತ್ರ್ಯ ಆಚರಣೆ ಅಂಗವಾಗಿ ಸ.ಹಿ.ಪ್ರಾ.ಶಾಲೆ ಕೊಯಿಲ ಅತಿಥಿಗಳಿಗೆ ವಿದ್ಯಾರ್ಥಿಗಳಿಂದ ಪೆರೇಡ್ ಮೂಲಕ ಗೌರವ ವಂದನೆ ನಡೆಯಿತು. ಕೊಯಿಲದ ರಾಜ ಬೀದಿಯಲ್ಲಿ ಸ್ವಾತಂತ್ರ್ಯದ ಘೋಷಣೆಗಳೊಂದಿಗೆ ಮೆರವಣಿಗೆ ನಡೆಯಿತು. ಎಸ್ ಡಿ ಎಂ ಸಿ ಅಧ್ಯಕ್ಷ ಸತೀಶ್ ನಾಯ್ಕ, ಧ್ವಜಾರೋಹಣ ನೆರವೇರಿಸಿದರು ಶುಭಾಶಯ ಸಲ್ಲಿಸಿದರು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆ ಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.ದೇಶಕ್ಕಾಗಿ ಹೋರಾಡಿ ಮಡಿದ ಮಹನೀಯರನ್ನು ನಾವು ಸ್ಮರಿಸಬೇಕು. ದೇಶದ ಅಖಂಡತೆ ವೈವಿಧ್ಯತೆಯನ್ನು ಗೌರವಿಸಿ ದೇಶದ ಸಮಗ್ರ ಅಭಿವೃದ್ಧಿಗೆ ನಾವೆಲ್ಲರೂ ಶ್ರಮಿಸಬೇಕು.ಎಂದು ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಾಜಿ ಗ್ರಾಮ ಪಂಚಾಯತ್ ಸದಸ್ಯ ಗುರುಪ್ರಸಾದ್ ರೈ ಕುದ್ಕಾಡಿ ಹೇಳಿದರು. ಗ್ರಾಮ ಪಂಚಾಯತ್ ಸದಸ್ಯರಾದ ಸುಶೀಲ ವೆಂಕಪ್ಪ ಗೌಡ ,ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಬಹುಮಾನ ದಾನಿಗಳಾದ ಪ್ರಕಾಶ್ ರೈ ,ಉಪಾಧ್ಯಕ್ಷರಾದ ನಯನ ರೈ,ಅನ್ನದಾನ ದಾನಿಗಳಾದ ಸವಿತಾ ರಾಮಣ್ಣ ನಾಯ್ಕ ಕೊಯಿಲ ಅಂಗನವಾಡಿ ಕಾರ್ಯಕರ್ತೆ ಹೇಮಾವತಿ,ಉಪಸ್ಥಿತರಿದ್ದರು. ವಿವಿಧ ಸಂಘಗಳ ಪದಾಧಿಕಾರಿಗಳು,ಸದಸ್ಯರು ಉಪಸ್ಥಿತರಿದ್ದರು ಮುಖ್ಯೋಪಾಧ್ಯಾಯರಾದ ಪುಷ್ಪಾವತಿ ಸ್ವಾಗತಿಸಿ, ಶಿಕ್ಷಕಿ ಸರಳ ವಂದಿಸಿದರು. ಗಿರೀಶ್ ನಿರೂಪಿಸಿದರು. ಕು ಪೂರ್ಣಿಮಾ ಸಹಕರಿಸಿದರು.