ಬೆಟ್ಟಂಪಾಡಿ: ಪ್ರಿಯದರ್ಶಿನಿ ವಿದ್ಯಾ ಸಂಸ್ಥೆ ಬೆಟ್ಟಂಪಾಡಿ ಇಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆ ಬಹಳ ಅದ್ದೂರಿಯಿಂದ ನಡೆಯಿತು. ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷ ಶ್ರೀರಂಗನಾಥ ರೈ ಗುತ್ತು ಧ್ವಜಾರೋಹಣಗೈದರು.
ಸಭಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ನವೋದಯ ಪ್ರೌಢಶಾಲೆ ಬೆಟ್ಟಂಪಾಡಿ ಇಲ್ಲಿನ ಶಿಕ್ಷಕ ರಾಧಾಕೃಷ್ಣ ಕೋಡಿ ಮಾತನಾಡಿ ದೇಶ ಮುಂದುವರಿಯಲು ನಮ್ಮಲ್ಲಿ ರಾಷ್ಟ್ರಪ್ರೇಮ ಅವಶ್ಯಕ. ನಮ್ಮ ಕೆಲವು ಸೋಲುಗಳಿಗೆ ಸಂಘಟನೆಯ ಕೊರತೆ ಕಾರಣ ಎಂದರು.
ಅಂತರಾಷ್ಟ್ರೀಯ ಯೋಗ ಕ್ರೀಡಾಪಟು ತೃಪ್ತಿ ಮಾಡಾವು ಇವರಿಂದ ಅದ್ಭುತ ಯೋಗ ಪ್ರದರ್ಶನ ನಡೆಯಿತು. ಕಲಾವಿದ ಪಟ್ಟಾಭಿರಾಂ ಸುಳ್ಯ ಇವರಿಂದ ಸುದೀರ್ಘ ಒಂದು ಗಂಟೆಯ ಕಾಲ ಹಾಸ್ಯ ಭರಿತ ಮಿಮಿಕ್ರಿ ಕಾರ್ಯಕ್ರಮ ನಡೆಯಿತು. ಗಡಿನಾಡ ಸಾಂಸ್ಕೃತಿಕ ಅಕಾಡೆಮಿ ಕಾಸರಗೋಡು. ಕೇರಳ. ಇದರ ಅಧ್ಯಕ್ಷ ಚನಿಯಪ್ಪ ನಾಯ್ಕ .ಎನ್. ಇವರು ಮಿಮಿಕ್ರಿ ಕಾರ್ಯಕ್ರಮದ ಪ್ರಾಯೋಜಕತ್ವವನ್ನು ವಹಿಸಿಕೊಂಡರು. ಭಾಷಣ, ಚಿತ್ರಕಲೆ, ದೇಶಭಕ್ತಿ ಗೀತೆ ಮುಂತಾದ ಸಾಂಸ್ಕೃತಿಕ ಸ್ಪರ್ಧೆಗಳು ಶಿಕ್ಷಕ ತಂಡದ ನೇತೃತ್ವದಲ್ಲಿ ನಡೆದು ವಿಜೇತರಿಗೆ ಬಹುಮಾನ ವಿತರಣೆಯು ನಡೆಯಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಮುಖ್ಯ ಗುರು ರಾಜೇಶ್ ಎನ್ ಸ್ವಾಗತಿಸಿ, ಸಹ ಶಿಕ್ಷಕಿ ಭವ್ಯ ವಂದಿಸಿದರು. ರಕ್ಷಿತಾ ಕಾರ್ಯಕ್ರಮ ನಿರೂಪಿಸಿದರು.