ಪುತ್ತೂರು: ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನಲ್ಲಿ 77ನೇ ಸ್ವಾತಂತ್ರೋತ್ಸವ ಆಚರಿಸಲಾಯಿತು.
ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅರಿಯಡ್ಕ ಅಬ್ದುರ್ರಹ್ಮಾನ್ ಹಾಜಿಯವರು ವಿದ್ಯಾರ್ಥಿಗಳು ದೇಶಪ್ರೇಮ ಬೆಳೆಸಿಕೊಳ್ಳಬೇಕು. ದೇಶಕ್ಕಾಗಿ ಹೋರಾಡಿ ಮಡಿದ ವೀರ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸುವುದು ದೇಶಪ್ರೇಮದ ಭಾಗ ಎಂದು ಹೇಳಿದರು.
ಸಂಸ್ಥೆಯ ಮ್ಯಾನೇಜರ್ ಉಮರ್ ಅಮ್ಜದಿ ಕುಕ್ಕಿಲ ಮಾತನಾಡಿ ಹಿಂದು-ಮುಸ್ಲಿಂ ಎಂಬ ಬೇಧ ಭಾವ ಸ್ವಾತಂತ್ರ್ಯ ಸಮರ ಸೇನಾನಿಗಳಿಗೆ ಇರಲಿಲ್ಲ. ಸ್ವಾತಂತ್ರ್ಯ ಹೋರಾಟಗಾರ ಆಲಿ ಮುಸ್ಲಿಯಾರ್ ರವರ ಆತ್ಮೀಯ ಮಿತ್ರರು ಪುರಳಿಶ್ಶೇರಿ ಉಣ್ಣಿಮೂಪನ್ ಹಾಗೂ ಎಂ.ಪಿ ನಾರಾಯಣ್ ಮೆಮನ್ ಆಗಿದ್ದರು. ಅವರಲ್ಲಿ ಪ್ರೀತಿಯ ಬಾಂಧವ್ಯವಿತ್ತು. ಆದ್ದರಿಂದ ನಮ್ಮಲ್ಲೂ ಸರ್ವರನ್ನು ಸಮನಾಗಿ ಕಾಣುವ ದೊಡ್ಡ ಗುಣ ಇರಬೇಕು ಎಂದರು
ಪದವಿಪೂರ್ವ ವಿಭಾಗದ ಪ್ರಾಂಶುಪಾಲರಾದ ಸಂಧ್ಯಾ ಪಿ ಶೆಟ್ಟಿ ಮಾತನಾಡಿ, ಸ್ವಾತಂತ್ರ್ಯ ಹೋರಾಟಗಾರರ ಜೀವನ ನಮಗೆ ಮಾದರಿ ಎಂದರು.
ವಿದ್ಯಾರ್ಥಿಗಳು ರಾಷ್ಟ್ರಗೀತೆ ಮತ್ತು ದೇಶಭಕ್ತಿ ಗೀತೆ ಹಾಡಿದರು. ಈ ಸಂದರ್ಭ ಮರ್ಕಝುಲ್ ಹುದಾ ಮಹಿಳಾ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಮುಹಮ್ಮದ್ ಮನ್ಸೂರ್ ಇತರ ಅಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.