ಪುತ್ತೂರು: ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕ ಮತ್ತು ಜ್ಞಾನಗಂಗಾ ಪುಸ್ತಕ ಮಳಿಗೆ ಪುತ್ತೂರು ಇದರ ಸಹಯೋಗದಲ್ಲಿ ನಡೆದ ಪುಸ್ತಕ ಹಬ್ಬ, ಪುಸ್ತಕ ದಾನಿಗಳ ಮೇಳ, ಸಾಹಿತ್ಯ ವೈಭವ ಕಾರ್ಯಕ್ರಮದ ಪ್ರಯುಕ್ತ ಆ.13 ರಂದು ಗಣೇಶ್ ಪ್ರಸಾದ್ ಪಾಂಡೇಲು ನೇತೃತ್ವದಲ್ಲಿ ನಡೆದ ಕವಿಗೋಷ್ಠಿಯನ್ನು ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಗ್ರಾಮ ಸಾಹಿತ್ಯ ಸಂಭ್ರಮದ ಸಂಚಾಲಕ ನಾರಾಯಣ ಕುಂಬ್ರ ದೀಪ ಪ್ರಜ್ವಲನೆ ಮೂಲಕ ಉದ್ಘಾಟಿಸಿದರು. “ಸಾಹಿತ್ಯ ಕ್ಷೇತ್ರದಲ್ಲಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಮತ್ತು ಘನತೆ ಗೌರವ ಸಿಗಲು ಕಾರಣ ಕನ್ನಡ ಸಾಹಿತ್ಯ ಪರಿಷತ್ತು.ಆದ್ದರಿಂದ ಇನ್ನೂ ಸಾಹಿತ್ಯ ಪರಿಷತ್ತಿನ ಸದಸ್ಯರಾಗದೇ ಇರುವ ಯುವ ಬರಹಗಾರರು ಕ.ಸಾ.ಪ ಸದಸ್ಯತನ ಪಡಕೊಳ್ಳಬೇಕು ನಾನು ಸಾಹಿತ್ಯ ಪರಿಷತ್ ಸದಸ್ಯರಾಗಿರುವ ಕಾರಣ ಇವತ್ತು ಇಂತಹ ವೇದಿಕೆಯಲ್ಲಿ ಅವಕಾಶ ದೊರೆತಿದೆ. ಅದಕ್ಕಾಗಿ ನಾನು ಸಾಹಿತ್ಯ ಪರಿಷತ್ತಿಗೆ ಸದಾ ಚಿರಋಣಿ ಎಂದು ಅವರು ಹೇಳಿದರು.
ಕವಿಗೋಷ್ಠಿ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿಗಳಾದ ನರಸಿಂಹ ಭಟ್ ಕಟ್ಟದಮೂಲೆ ಏತಡ್ಕ ವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಸಂದರ್ಭೋಚಿತವಾಗಿ ಮಾತನಾಡಿದರು. ಗಣೇಶ್ ಪ್ರಸಾದ್ ಪಾಂಡೇಲು ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು.
ಕವಿಗೋಷ್ಠಿಯಲ್ಲಿ ವಿಶ್ವನಾಥ ಕುಲಾಲ್ ಮಿತ್ತೂರು, ಪರಮೇಶ್ವರಿ ಪ್ರಸಾದ್ , ಭಾರತಿ ಸುರತ್ಕಲ್, ಮಂಜುನಾಥ ಎನ್. ಪುತ್ತೂರು, ಪ್ರೇಮಾ ಶ್ರೀಕೃಷ್ಣ, ವಿಷ್ಣುಗುಪ್ತ ಪುಣಚ, ಗೀತಾ ಕೋಂಕೋಡಿ, ಕೆ. ಶಶಿಕಲಾ ಭಾಸ್ಕರ ದೈಲಾ, ಸೋನಿತಾ ನೇರಳಕಟ್ಟೆ , ರಶ್ಮಿ ಸನಿಲ್, ಸದಾಶಿವ ಪೆರುವಾರು, ಮಂಜುಳಾ ಶಾಂತರಾಜ್, ನವ್ಯಶ್ರೀ ಸ್ವರ್ಗ, ವಿದ್ಯಾಶ್ರೀ ಅಡೂರು, ಸೌಮ್ಯಾ ಭಟ್ ಅಂಗ್ರಾಜೆ, ಶಾಂತಾ ವಿಘ್ನೇಶ್ವರ, ರಜನಿ ಚಿಕ್ಕಯಮಠ, ಉಷಾ ಭಟ್ ಪುತ್ತೂರು,
ಜಯಶ್ರೀ ಶೆಣೈ ಬಂಟ್ವಾಳ, ಸಾರ್ಥಕ್ ಟಿ ರೈ, ಚಂದ್ರಮೌಳಿ ಕಡಂದೇಲು, ಚಿತ್ರಾ ಎಸ್. ಬೆಟ್ಟಂಪಾಡಿ, ಪ್ರಿಯಾ ಸುಳ್ಯ, ರಶ್ಮಿತಾ ಸುರೇಶ್ ಜೋಗಿಬೆಟ್ಟು, ಸುಪ್ರಿತಾ ಚರಣ್ ಪಾಲಪ್ಪೆ ಕಡಬ, ಯಶೋದಾ ಬೆಳ್ಳಿಪ್ಪಾಡಿ, ಪೂವಪ್ಪ ನೇರಳಕಟ್ಟೆ, ರೇಣುಕಾ ಅರಸಿನಮಕ್ಕಿ, ಶರತ್ ಆಳ್ವ ಚನಿಲ, ಮಲ್ಲಿಕಾ ಜೆ ರೈ ಮುಂತಾದವರು ಭಾಗವಹಿಸಿದ್ದರು.ಗೀತಾ ಕೊಂಕೋಡಿ ಅವರ ನಿರೂಪಣೆಯಲ್ಲಿ ಕವಿಗೋಷ್ಠಿ ನಡೆಯಿತು.