ಕಲರ್ಸ್ ಥೆರಪಿಯಿಂದ ಸ್ಟಾಕ್ ಕ್ಲಿಯರೆನ್ಸ್ ಸೇಲ್ ಕೊಡುಗೆ
ನಾಳೆ ಕೊನೆ
ಪುತ್ತೂರು: ಹದಿಹರೆಯದ, ಯುವತಿಯರ, ಮಹಿಳೆಯರ ಮನಸ್ಸಿಗೆ ಒಪ್ಪುವಂಥ ಬಗೆ- ಬಗೆಯ, ಹಲವಾರು ಮಾದರಿಯ, ಬಣ್ಣ-ಬಣ್ಣದ ಬ್ರಾಂಡೆಡ್ ಸೀರೆಗಳು, ಇನ್ನಿತರ ಬಟ್ಟೆ ಜೊತೆಗೆ ಮಕ್ಕಳ ಹಾಗೂ ಪುರುಷರ ನವೀನ ಮಾದರಿಯ ಬಟ್ಟೆಗಳೆಲ್ಲವೂ ಸ್ಟಾಕ್ ಕ್ಲಿಯರೆನ್ಸ್ ಸೇಲ್ ಮೂಲಕ 50% ವರೆಗಿನ ಅಚ್ಚರಿ ರೀತಿಯ ರಿಯಾಯಿತಿ ಕೊಡುಗೆಯೊಂದಿಗೆ ದರ್ಬೆ ಮುಖ್ಯರಸ್ತೆ, ರಾಜೇಶ್ ಪ್ರೆಸ್ ಬಳಿಯ ಕಲರ್ಸ್ ಥೆರಪಿ ಮಳಿಗೆಯಲ್ಲಿ ಆ. 19 ರ ವರೆಗೆ ಲಭ್ಯ.
ಹೆಂಗೆಳೆಯರ ಅಚ್ಚುಮೆಚ್ಚಿನ ಪ್ರಸಿದ್ಧ ಕಂಪೆನಿಯ ಕಾಂಚೀಪುರಂ ಸೀರೆ ಖರೀದಿಗೆ ಶೇಕಡಾ ೨೫ ವರೆಗೆ ರಿಯಾಯಿತಿಯಿದ್ದು , ಮಹಿಳೆಯರ ಕುರ್ತಾಗಳ ಖರೀದಿಗೆ 1+1 ಕೊಡುಗೆಯೂ ಇದೆ. ಗೃಹೋಪಯೋಗಿ ಸೀರೆಗಳು ರೂ.70 ರಿಂದ ಇರಲಿದ್ದು, ಸಾಫ್ಟ್ ಸಿಲ್ಕ್, ಜರಿ, ಕಾಟನ್ ಸಾರಿಗಳಲ್ಲೂ ರಿಯಾಯಿತಿ ಇದ್ದು, ಮಕ್ಕಳ ಹಾಗೂ ಯುವಕರ, ಪುರುಷರ ಉಡುಪುಗಳ ಖರೀದಿಗೆ ರಿಯಾಯಿತಿ ಸಿಗಲಿದೆ. ಇಷ್ಷೇಯಲ್ಲದೇ ಅನ್ಯ ಬಗೆಯ ಉಡುಪುಗಳ ಹಾಗೂ ಸೌಂದರ್ಯ ವರ್ಧಕ ಸಹಿತ ಇತರ ಒಟ್ಟು ಖರೀದಿ ಮೇಲೆ ವಿಶೇಷ ಡಿಸ್ಕೌಂಟ್ ಇದೆ. ಮೇಲಿನ ಎಲ್ಲಾ ಬಗೆಯ ರಿಯಾಯಿತಿಯೂ ಆ.19 ರ ತನಕ ಲಭ್ಯವಿದ್ದು, ಫ್ಯಾಷನ್ ಪ್ರಿಯರು ಮೆಚ್ಚಿನ, ಅಂದ-ಚೆಂದದ ಉಡುಗೆಯೂ ತಾವು ಕಂಡಿರದ ರೀತಿಯಲ್ಲಿ ಅತ್ಯುತ್ತಮ ಗುಣಮಟ್ಟದೊಡನೆ ಪಡೆಯುವವಕಾಶವನ್ನು ಕಲರ್ಸ್ ಥೆರಪಿ ನೀಡಲು ಮುಂದೆ ಬಂದಿದೆ. ಯುವ ಜನತೆ ಸಹಿತ ಎಲ್ಲಾ ವಯೋಮಾನದವರು ಈ ಅದ್ಬುತ ಕೊಡುಗೆ ಲಾಭ ಪಡೆದುಕೊಳ್ಳಬಹುದೆಂದು ಸಂಸ್ಥೆಯ ಮಾಲೀಕರು ತಿಳಿಸಿದ್ದಾರೆ.
*ಕ್ಲಿಯರೆನ್ಸ್ ಸೇಲ್ ಸಲುವಾಗಿ ಮಕ್ಕಳ, ಮಹಿಳೆಯರ, ಪುರುಷರ ರೆಡಿಮೇಡ್ ಮೇಲೆ 50% ರಿಯಾಯಿತಿ
*ಹೆಸರಾಂತ ಕಾಂಚೀಪುರಂ ಸೀರೆ ಖರೀದಿಗೆ 25% ವರೆಗಿನ ಡಿಸ್ಕೌಂಟ್.
*ಲೇಡಿಸ್ ಕುರ್ತಾಗಳು Buy One Get One ಮೂಲಕ ಲಭ್ಯ.