ಪಾಣಾಜೆ : ಗ್ರಾಮಾಂತರ ವಲಯ ಮಟ್ಟದ ಶಟಲ್ ಬ್ಯಾಡ್ಮಿಂಟನ್

0

ಪಾಣಾಜೆ: ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು ಮತ್ತು ಸರಕಾರಿ ಮಾದರಿ ಉನ್ನತ ಹಿ ಪ್ರಾಥಮಿಕ ಶಾಲೆ ಪಾಣಾಜೆ ಇದರ ಜಂಟಿ ಆಶ್ರಯ ದಲ್ಲಿ ಪುತ್ತೂರು ಗ್ರಾಮಾಂತರ ವಲಯ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆ ಆ. 17 ರಂದು ಆರ್ಲಪದವಿ‌ನಲ್ಲಿ ನಡೆಯಿತು.

ಹುಡುಗರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಸ.ಮಾ.ಉ. ಹಿ. ಪ್ರಾ. ಶಾಲೆ ಪಾಣಾಜೆ, ದ್ವಿತೀಯ ಸ್ಥಾನವನ್ನು ಸ.ಉ.ಹಿ.ಪ್ರಾ.ಶಾಲೆ ಪೇರಲ್ತಡ್ಕ, ಹುಡುಗಿಯರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಸ.ಮಾ. ಉ. ಹಿ. ಪ್ರಾ.‌ಶಾಲೆ ಪಾಣಾಜೆ, ದ್ವಿತೀಯ ಸ್ಥಾನವನ್ನು ಪಾಣಾಜೆ ವಿವೇಕ ಆಂಗ್ಲ ಮಾಧ್ಯಮ ಶಾಲೆಯ ತಂಡಗಳು ಪಡೆದುಕೊಂಡವು.


ಪಾಣಾಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಜಯಶ್ರೀ ಹಾಗೂ ಸದಸ್ಯರು, ಶಾಲಾಬಿವೃಧ್ಧಿ ಸಮಿತಿ ಅಧ್ಯಕ್ಷೆ ಸೀತಾ ಭಟ್ ಮತ್ತು ಸದಸ್ಯರು, ಶಾಲಾ ಮುಖ್ಯಗುರು ಸೀತಾರಾಮ ಭಟ್ ಮತ್ತು ಸಹಶಿಕ್ಷಕರು, ಪೋಷಕರು ಉಪಸ್ಥಿತರಿದ್ದರು. ತೀರ್ಪುಗಾರರಾಗಿ ಸೀತಾರಾಮ ಗೌಡ ಮಿತ್ತಡ್ಕ, ಸುಧೀರ್ ರೈ ಪಾಣಾಜೆ ಹಾಗೂ ಸುಧಾಕರ ರೈ ಗಿಳಿಯಾಲು ಸಹಕರಿಸಿದರು.

LEAVE A REPLY

Please enter your comment!
Please enter your name here