ರಾಜ್ಯ ಮಟ್ಟದ ಈಜು ಸ್ಪರ್ಧೆ ಗೆ ಸುದಾನ ಶಾಲೆಯ ಇಬ್ಬರು ವಿದ್ಯಾರ್ಥಿಗಳು ಆಯ್ಕೆ

0

ಪುತ್ತೂರು: ಶಿಕ್ಷಣ ಇಲಾಖೆ ಮತ್ತು ಲೇಡಿಹಿಲ್ ವಿಕ್ಟೋರಿಯ ಶಾಲೆ ಮಂಗಳೂರು ಇವರ ಪ್ರಾಯೋಜಕತ್ವದಲ್ಲಿ ನಡೆದ ಜಿಲ್ಲಾ ಮಟ್ಟದ ಈಜು ಸ್ಪರ್ಧೆಯಲ್ಲಿ ಸುದಾನ ವಸತಿ ಶಾಲೆಯ ನಿಕೋಲಸ್ ರೋನಿನ್ ಮಥಾಯಿಸ್ (9ನೇ) ಇವರು 50ಮೀ ಬ್ರೆಸ್ಟ್ ಸ್ಟ್ರೋಕ್, 100 ಮೀ ಬ್ರೆಸ್ಟ್ ಸ್ಟ್ರೋಕ್ ನಲ್ಲಿ ಎರಡು ಬೆಳ್ಳಿ ಪದಕ ಮತ್ತು ಅನಿಕಾ ಯು (9ನೇ) 50ಮೀ ಬಟರ್ ಪ್ಲೈ, ೫೦ಮೀ ಬ್ರೆಸ್ಟ್‌ಸ್ಟ್ರೋಕ್, 100 ಮೀ ಬ್ರೆಸ್ಟ್ ಸ್ಟ್ರೋಕ್‌ಗಳಲ್ಲಿ ಎರಡು ಬೆಳ್ಳಿ ಮತ್ತು ಒಂದು ಕಂಚು ಪಡೆದು ರಾಜ್ಯ ಮಟ್ಟದ ಈಜು ಸ್ಪರ್ಧೆಗೆ ಆಯ್ಕೆಗೊಂಡಿರುತ್ತಾರೆ.

ಹಾಗೆಯೇ ಮಾನ್ವಿ ಡಿ (7ನೇ) 50ಮೀ ಬ್ರೆಸ್ಟ್ ಸ್ಟ್ರೋಕ್, 50ಮೀ ಫ್ರೀ ಸ್ಟ್ರೋಕ್‌ನಲ್ಲಿ ಎರಡು ಕಂಚಿನ ಪದಕಗಳನ್ನು ಪಡೆದಿದ್ದಾರೆ. ಬಾಲವನ ಈಜು ತರಬೇತುದಾರ ದೀಕ್ಷಿತ್ ರವರು ತರಬೇತಿಯನ್ನು ನೀಡಿದ್ದು, ದೈಹಿಕ ಶಿಕ್ಷಕರು ಮಾರ್ಗದರ್ಶನ ಮಾಡಿದ್ದಾರೆ. ವಿಜೇತ ವಿದ್ಯಾರ್ಥಿಗಳನ್ನು ಶಾಲಾ ಸಂಚಾಲಕರಾದ ರೆ. ವಿಜಯ ಹಾರ್ವಿನ್ ಮತ್ತು ಮುಖ್ಯ ಶಿಕ್ಷಕಿ . ಶೋಭಾ ನಾಗರಾಜ್ ಅಭಿನಂದಿಸಿದ್ದಾರೆ.

LEAVE A REPLY

Please enter your comment!
Please enter your name here