ಪುತ್ತೂರು: ಒಳಮೊಗ್ರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪರ್ಪುಂಜ, ಕೊಲತ್ತಡ್ಕ ಪರಿಸರದಲ್ಲಿ ಕಳ್ಳರ ಹಾವಳಿ ಕಂಡುಬಂದಿದ್ದು ಈಗಾಗಲೇ ಕೆಲವು ಅಂಗಡಿಗಳಿಂದ ಸಣ್ಣಪುಟ್ಟ ಕಳ್ಳತನ ನಡೆದಿರುವ ಬಗ್ಗೆ ವರದಿಯಾಗಿದೆ. ಕೆಲವು ದಿನಗಳ ಹಿಂದೆ ಕುಟ್ಟಿನೋಪಿನಡ್ಕದಲ್ಲಿ ಮನೆಯೊಂದರ ಅಂಗಳದಲ್ಲಿ ಕಳ್ಳನೊಬ್ಬ ನಿಂತಿರುವುದರನ್ನು ಗಮನಿಸಿದ ಮನೆಯವರು ಬಾಗಿಲು ತೆಗೆದು ಹೊರಗೆ ಬರುವಷ್ಟರಲ್ಲಿ ಕಳ್ಳ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದ್ದು ಈ ಬಗ್ಗೆ ಮನೆಯವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕೆಲವು ದಿನಗಳಲ್ಲಿ ಈ ಪರಿಸರದಲ್ಲಿ ಸಣ್ಣಪುಟ್ಟ ಕಳ್ಳತನ ನಡೆಯುತ್ತಿದ್ದು ಚಿಲ್ಲರೆ ಕಳ್ಳರ ಹಾವಳಿ ಹೆಚ್ಚಾಗಿದೆ ಎಂದು ವರ್ತಕರು ತಿಳಿಸಿದ್ದು ಈ ಬಗ್ಗೆ ವರ್ತಕರ ಸಂಘಕ್ಕೆ ಮನವಿಯೊಂದನ್ನು ನೀಡಿದ್ದಾರೆ.
ವರ್ತಕರ ಸಂಘದಿಂದ ಪೊಲೀಸ್ ಇಲಾಖೆಗೆ ಮನವಿ
ಈ ಬಗ್ಗೆ ಜಾಗೃತಗೊಂಡ ವರ್ತಕರ ಸಂಘದ ಅಧ್ಯಕ್ಷ ಅಧ್ಯಕ್ಷ ರಫೀಕ್ ಅಲ್ರಾಯರವರು ಪುತ್ತೂರು ಗ್ರಾಮಾಂತರ ಠಾಣೆಗೆ ಮನವಿಯೊಂದನ್ನು ನೀಡಿದ್ದು ಕಳ್ಳತನದ ಬಗ್ಗೆ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿಯಲ್ಲಿ ತಿಳಿಸಿದ್ದಾರೆ. ಮನವಿ ಸಲ್ಲಿಸುವ ಸಂದರ್ಭದಲ್ಲಿ ವರ್ತಕರ ಸಂಘದ ಸ್ಥಾಪಕ ಅಧ್ಯಕ್ಷ ಶ್ಯಾಮಸುಂದರ ರೈ ಕೊಪ್ಪಳ ಉಪಸ್ಥಿತರಿದ್ದರು.