ಬಜತ್ತೂರು ಗ್ರಾ.ಪಂ.: ಅಧ್ಯಕ್ಷರಾಗಿ ಗಂಗಾಧರ ಪಿ.ಎನ್., ಉಪಾಧ್ಯಕ್ಷರಾಗಿ ವಿಮಲ ಬೆದ್ರೋಡಿ ಅವಿರೋಧ ಆಯ್ಕೆ

0

ನೆಲ್ಯಾಡಿ: ಬಜತ್ತೂರು ಗ್ರಾ.ಪಂ.ನ 2ನೇ ಅವಧಿಗೆ ಅಧ್ಯಕ್ಷರಾಗಿ ಗಂಗಾಧರ ಪಿ.ಎನ್.ನೆಕ್ಕರಾಜೆ ಹಾಗೂ ಉಪಾಧ್ಯಕ್ಷರಾಗಿ ವಿಮಲ ಬೆದ್ರೋಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇಬ್ಬರೂ ಬಿಜೆಪಿ ಬೆಂಬಲಿತ ಸದಸ್ಯರಾಗಿದ್ದಾರೆ.


ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಪ್ರಕ್ರಿಯೆ ಆ.19ರಂದು ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು. 15 ಸದಸ್ಯ ಬಲದ ಬಜತ್ತೂರು ಗ್ರಾ.ಪಂ.ನಲ್ಲಿ 13 ಬಿಜೆಪಿ ಹಾಗೂ 2 ಕಾಂಗ್ರೆಸ್ ಬೆಂಬಲಿತ ಸದಸ್ಯರಿದ್ದಾರೆ. ಸಾಮಾನ್ಯ ಸ್ಥಾನಕ್ಕೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ೪ನೇ ವಾರ್ಡ್‌ನ ಬಿಜೆಪಿ ಬೆಂಬಲಿತ ಸದಸ್ಯ ಗಂಗಾಧರ ಪಿ.ಎನ್.,ಹಾಗೂ ಹಿಂದುಳಿದ ವರ್ಗ ಎ ಮಹಿಳೆಗೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ 1ನೇ ವಾರ್ಡ್‌ನ ಬಿಜೆಪಿ ಬೆಂಬಲಿತ ಸದಸ್ಯೆ ವಿಮಲ ಬೆದ್ರೋಡಿಯವರು ನಾಮಪತ್ರ ಸಲ್ಲಿಸಿದ್ದರು. ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಂದೊಂದೇ ನಾಮಪತ್ರ ಸಲ್ಲಿಕೆಯಾದುದರಿಂದ ಅವಿರೋಧ ಆಯ್ಕೆ ನಡೆದಿದೆ. ಸದಸ್ಯರಾದ ಮೋನಪ್ಪ ಗೌಡ ಬೆದ್ರೋಡಿ, ರತ್ನಾ ಮಣಿಕ್ಕಳ, ಪ್ರೆಸಿಲ್ಲಾ ಡಿ.ಸೋಜ ಬೆದ್ರೋಡಿ, ಉಮೇಶ್ ಓಡ್ರಪಾಲು, ಯಶೋಧ ಪಿ.ಎನ್.ಬಿದಿರಾಡಿ, ಮಾಧವ ಪೂಜಾರಿ ಒರುಂಬೋಡಿ, ಸ್ಮಿತಾ ಪುಯಿಲ, ಗಂಗಾಧರ ಕೆ.ಎಸ್.ಮೇಲೂರು, ಪ್ರೇಮ ಬಿ.ಬೀಟಿಗೆ, ಭಾಗೀರಥಿ ಓಡ್ಲ, ಸಂತೋಷ್‌ಕುಮಾರ್ ಪಿ.ಪಂರ್ದಾಜೆ ಆಯ್ಕೆ ಪ್ರಕ್ರಿಯೆಯಲ್ಲಿ ಉಪಸ್ಥಿತರಿದ್ದರು. ಸದಸ್ಯರಾದ ಅರ್ಪಿತಾ ಎನ್.ವಿ.ಬೆದ್ರೋಡಿ, ನಝೀರ್ ಬೆದ್ರೋಡಿ ಗೈರು ಹಾಜರಿಯಾಗಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್.ಚುನಾವಣಾಧಿಕಾರಿಯಾಗಿದ್ದರು. ಪಿಡಿಒ ದಿನೇಶ್ ಶೆಟ್ಟಿ, ಕಾರ್ಯದರ್ಶಿ ಗಿರಿಯಪ್ಪ ಗೌಡ ಸಹಕರಿಸಿದರು.

ಬಿಜೆಪಿ ಮುಖಂಡರಿಂದ ಅಭಿನಂದನೆ:
ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಿಗೆ ಬಿಜೆಪಿ ಮುಖಂಡರು ಹಾರಾರ್ಪಣೆ ಮಾಡಿ ಅಭಿನಂದನೆ ಸಲ್ಲಿಸಿದರು. ಮಾಜಿ ಶಾಸಕ ಸಂಜೀವ ಮಠಂದೂರು, ಪುರುಷೋತ್ತಮ ಮುಂಗ್ಲಿಮನೆ, ಮುಕುಂದ ಬಜತ್ತೂರು, ಸುನೀಲ್ ದಡ್ಡು, ಯಶವಂತ ಗುಂಡ್ಯ, ವಸಂತ ಪಿಜಕ್ಕಳ, ದಾಮೋದರ ಗೌಡ ಶೇಡಿ, ರಾಜೇಶ್ ಪಿಜಕ್ಕಳ ಮತ್ತಿತರ ಮುಖಂಡರು ಹಾರಾರ್ಪಣೆ ಮಾಡಿ ಅಭಿನಂದನೆ ಸಲ್ಲಿಸಿದರು.

LEAVE A REPLY

Please enter your comment!
Please enter your name here