ತೆಂಗಿನ ಕಾಯಿ ಒಡೆದು ಉದ್ಘಾಟಿಸಿದ ಶಾಸಕ ಅಶೋಕ್ ಕುಮಾರ್ ರೈ
ಒಡೆದ ಚೂರುಗಳನ್ನು ಹೆಕ್ಕಿ ತೆಂಗಿನ ಕಾಯಿ ಮಹತ್ವ ಗೌರವಿಸಿದ ಶಾಸಕರು !
ಪುತ್ತೂರು: ಮಾಣಿಲ ಶ್ರೀಧಾಮದಲ್ಲಿ ಆ.25ರವರೆಗೆ ನಡೆಯುವ 48 ದಿನಗಳ ಪರ್ಯಂತ ಸಾಮೂಹಿಕ ಶ್ರೀ ಲಕ್ಷ್ಮೀಪೂಜೆ ಹಾಗೂ ಆ.25 ರಿಂದ ಆ. 27ರವರೆಗೆ ಶ್ರೀ ವರಮಹಾಲಕ್ಷ್ಮೀ ವೃತಾಚರಣೆ ಬೆಳ್ಳಿ ಹಬ್ಬದ ಕಾರ್ಯಕ್ರಮದ ಅಂಗವಾಗಿ ಪುತ್ತೂರು ಹೊರೆಕಾಣಿಕೆ ಸಮಿತಿ ನೇತೃತ್ವದಲ್ಲಿ ಭಕ್ತ ಜನರ ಸಹಕಾರದೊಂದಿಗೆ ಆ.20ರಂದು ಬೃಹತ್ ಹೊರೆಕಾಣಿಕೆ ಮೆರವಣಿಗೆ ನಡೆಯಿತು.
ಹೊರೆಕಾಣಿಕೆ ಸಮಿತಿ ಗೌರವಾಧ್ಯಕ್ಷರಾಗಿರುವ ಶಾಸಕ ಅಶೋಕ್ ಕುಮಾರ್ ರೈ ಅವರು ತೆಂಗಿನ ಕಾಯಿ ಒಡೆಯುವ ಮೂಲಕ ಹೊರೆಕಾಣಿಕೆ ಮೆರವಣಿಗೆಯನ್ನು ಉದ್ಘಾಟಿಸಿಸಿದರು. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಅವರು ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸಮಿತಿ ಇನ್ನೋರ್ವ ಗೌರವಾಧ್ಯಕ್ಷ ಡಾ. ಸುರೇಶ್ ಪುತ್ತೂರಾಯ, ಗೌರವ ಮಾರ್ಗದರ್ಶಕರಾದ ಮಾಜಿ ಶಾಸಕ ಸಂಜೀವ ಮಠಂದೂರು, ಮುರಳೀಕೃಷ್ಣ ಹಸಂತಡ್ಕ, ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಶೇಖರ್ ನಾರಾವಿ, ರವೀಂದ್ರನಾಥ ರೈ ಬಳ್ಳಮಜಲು, ಬಿ.ಐತ್ತಪ್ಪ ನಾಯ್ಕ್, ವೀಣಾ ಬಿ.ಕೆ, ರಾಮದಾಸ್ ಗೌಡ, ಹೊರೆಕಾಣಿಕೆ ಪುತ್ತೂರು ವಲಯ ಸಮಿತಿ ಗೌರವಾಧ್ಯಕ್ಷ ಡಾ. ಸುರೇಶ್ ಪುತ್ತೂರಾಯ, ಅಧ್ಯಕ್ಷ ಸೀತಾರಾಮ ರೈ ಕೆದಂಬಾಡಿಗುತ್ತು, ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿ, ಕೋಡಿಂಬಾಡಿ ಗ್ರಾ.ಪಂ ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರು, ಹೊರೆಕಾಣಿಕೆ ಸಮಿತಿ ಸಂಚಾಲಕ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ, ಶ್ಯಾಮ ಸುದರ್ಶನ್, ಪ್ರಧಾನ ಕಾರ್ಯದರ್ಶಿ ನವೀನ್ ಕುಲಾಲ್, ಉಪಾಧ್ಯಕ್ಷರಾದ ಕೃಷ್ಣ ಎಂ.ಅಳಿಕೆ, ನಯನ ರೈ, ಹರಿಣಾಕ್ಷೆ ಜೆ ಶೆಟ್ಟಿ, ಶಾರದಾ ಕೇಶವ್, ಸಂಘಟನಾ ಕಾರ್ಯದರ್ಶಿಗಳಾದ ಅಜಿತ್ ರೈ ಹೊಸಮನೆ, ದಿನೇಶ್ ಪಂಜಿಗ, ಧನ್ಯ ಕುಮಾರ್ ಬೆಳಂದೂರು, ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜನಾರ್ದನ ಮೂಲ್ಯ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ, ವಿಶ್ವನಾಥ ಗೌಡ ಬನ್ನೂರು, ಪ್ರಕಾಶ್, ರಾಜೇಶ್ ಬನ್ನೂರು, ರತ್ನಾಕರ ರೈ ತಿಂಗಳಾಡಿ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.
ಒಡೆದ ಚೂರುಗಳನ್ನು ಹೆಕ್ಕಿ ತೆಂಗಿನ ಕಾಯಿ ಮಹತ್ವ ಗೌರವಿಸಿದ ಶಾಸಕರು !
ಹಸಿರು ಹೊರೆಕಾಣಿಕೆ ಮೆರವಣಿಗೆಯನ್ನು ತೆಂಗಿನ ಕಾಯಿ ಒಡೆಯುವ ಮೂಲಕ ಶಾಸಕರು ಉದ್ಘಾಟಿಸಿದರು. ಈ ಸಂದರ್ಭ ನೆರೆದವರೆಲ್ಲ ತೆಂಗಿನ ತೆಂಗಿನ ಕಾಯಿ ಒಡೆದರು. ತೆಂಗಿನ ಕಾಯಿ ಒಡೆದ ಚೂರುಗಳು ದೇವಳ ರಥ ಬೀದಿಯಲ್ಲೆಲ್ಲಾ ಹರಡಿಕೊಂಡಿರುವುದನ್ನು ಗಮನಿಸಿದ ಶಾಸಕರು ತೆಂಗಿನ ಕಾಯಿಗೆ ಧಾರ್ಮಿಕ ಭಾವನೆ ಇದೆ. ಅದಕ್ಕೆ ಅದರದ್ದೇ ಆದ ಮಹತ್ವವಿದೆ. ಕೆಳಗಡೆ ಬಿದ್ದ ತೆಂಗಿನ ಕಾಯಿ ಚೂರುಗಳನ್ನು ತಾನೆ ಸ್ವತಃ ಹೆಕ್ಕಲು ಆರಂಭಿಸಿದರು. ಈ ಸಂದರ್ಭ ಜೊತೆಯಲ್ಲಿದ್ದವರೆಲ್ಲ ತೆಂಗಿನ ಕಾಯಿಯ ಚೂರುಗಳನ್ನು ಹೆಕ್ಕಿದರು.