ಪುತ್ತೂರು: ದ.ಕ ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ ಪುತ್ತೂರು ಇದರ ವತಿಯಿಂದ ಈದ್ ಮಿಲಾದ್ ಆಚರಣೆ ಬಗ್ಗೆ ಸಮಾಲೋಚನಾ ಸಭೆ ಯುವಜನ ಪರಿಷತ್ ಅಧ್ಯಕ್ಷ ಅಶ್ರಫ್ ಕಲ್ಲೇಗ ಅಧ್ಯಕ್ಷತೆಯಲ್ಲಿ ಆ.18ರಂದು ಪುತ್ತೂರು ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಿತು.
ಈದ್ ಮಿಲಾದ್ ಸಮಿತಿಯ ಅಧ್ಯಕ್ಷರಾಗಿ ಬಶೀರ್ ಪರ್ಲಡ್ಕ, ಉಪಾಧ್ಯಕ್ಷರಾಗಿ ಖಾದರ್ ಕಬಕ ಹಾಗೂ ಅಬ್ದುಲ್ ರಝಾಕ್ ಆರ್.ಪಿ, ಪ್ರಧಾನ ಕಾರ್ಯದರ್ಶಿಯಾಗಿ ಇಫಾಝ್ ಬನ್ನೂರು ಅವರನ್ನು ಆಯ್ಕೆ ಮಾಡಲಾಯಿತು. ಜೊತೆ ಕಾರ್ಯದರ್ಶಿಯಾಗಿ ರಶೀದ್ ಮುರ, ಅಶ್ರಫ್ ಕಲೆಂಬಿ ಹಾಗೂ ಇಸ್ಮಾಯಿಲ್ ಬೊಲ್ವಾರ್, ಕೋಶಾಧಿಕಾರಿಯಾಗಿ ಅಬ್ದುಲ್ ಅಝೀಝ್ ಬಪ್ಪಳಿಗೆ, ಸಂಘಟನಾ ಕಾರ್ಯದರ್ಶಿಯಾಗಿ ಹಂಝ ಕಬಕ, ಹನೀಫ್ ಬಗ್ಗುಮೂಲೆ ಹಾಗೂ ಅಲ್ತಾಫ್ ಬೆಟ್ಟಂಪಾಡಿ ಆಯ್ಕೆಯಾದರು. ಸಮಿತಿ ಸದಸ್ಯರುಗಳಾಗಿ ಶಿಹಾಬ್ ಪಿ.ಕೆ, ಶಿಹಾಬ್ ಮುಕ್ವೆ, ಹಫೀಝ್ ರಹಿಮಾನ್ ಮುಕ್ವೆ, ಇಮ್ತಿಯಾಝ್ ಮುಕ್ವೆ, ನುಹ್ಮಾನ್ ಮುಕ್ವೆ, ಶೇಖ್ ಇಮ್ತಿಯಾಝ್, ಜಲಾಲುದ್ದೀನ್ ಬಪ್ಪಳಿಗೆ, ಶಾಕಿರ್ ಬಪ್ಪಳಿಗೆ ಹಾಗೂ ರಫೀಕ್ ಬಪ್ಪಳಿಗೆ ಅವರುಗಳನ್ನು ಆಯ್ಕೆ ಮಾಡಲಾಯಿತು.
ಮುಸ್ಲಿಂ ಯುವಜನ ಪರಿಷತ್ ಸಂಚಾಲಕರಾದ ಖಾಸಿಂ ಹಾಜಿ ಮಿತ್ತೂರು, ಅಡ್ವೊಕೇಟ್ ನೂರುದ್ದೀನ್ ಸಾಲ್ಮರ, ಉಪಾಧ್ಯಕ್ಷರಾದ ಹಾಜಿ ಇಬ್ರಾಹಿಂ ಸಾಗರ್, ಶರೀಫ್ ಸಾಲ್ಮರ, ಪ್ರಧಾನ ಕಾರ್ಯದರ್ಶಿ ಅಶ್ರಫ್ ಬಾವು ಪಡೀಲ್, ಕಾರ್ಯದರ್ಶಿ ನೌಶಾದ್ ಹಾಜಿ ಬೊಳ್ವಾರ್, ಸಂಘಟನಾ ಕಾರ್ಯದರ್ಶಿ ಹಮೀದ್ ಸೋಂಪಾಡಿ, ಸೂಫಿ ಬಪ್ಪಳಿಗೆ, ಮೂಸಾ ಮಾಣಿ, ಮೌಲಾ ಕಬಕ, ಹಸೈನಾರ್ ಬನಾರಿ, ಸಮಿತಿ ಸದಸ್ಯರಾದ ಅದ್ದು ಪಡೀಲ್, ಇಕ್ಬಾಲ್ ಬಪ್ಪಳಿಗೆ, ಶರೀಫ್ ಮುಕ್ರಂಪಾಡಿ, ಮೋನು ಬಪ್ಪಳಿಗೆ ಹಾಗೂ ಮುಖಂಡರು ಉಪಸ್ಥಿತರಿದ್ದರು. ಅಶ್ರಫ್ ಬಾವು ಪಡೀಲ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.