ಪೆರ್ನೆ ಮುಚ್ಚಿಲೋಟ್ ಕ್ಷೇತ್ರದ ಕಳಿಯಾಟ ಮಹೋತ್ಸವದ ಅಂಗವಾಗಿ ಬೃಹತ್ ಗಿಡನಾಟಿ

0

ವಾಣಿಯನ್/ಗಾಣಿಗ ಸಮಾಜ ಬಾಂಧವರ ಮನೆಗಳಲ್ಲಿ ಏಕಕಾಲಕ್ಕೆ 400 ಫಲವೃಕ್ಷ ಸಸಿಗಳ ನಾಟಿ

ಪುತ್ತೂರು: ಪೆರ್ನೆ ಶ್ರೀ ಮುಚ್ಚಿಲೋಟ್ ಭಗವತಿ ಕ್ಷೇತ್ರದಲ್ಲಿ 21 ವರ್ಷಗಳ ನಂತರ ಅಂದರೆ 2024ರ ಕುಂಭಮಾಸದಲ್ಲಿ ನಡೆಯಲಿರುವ ಕಳಿಯಾಟ ಮಹೋತ್ಸವವನ್ನು ಅವಿಸ್ಮರಣೀಯಗೊಳಿಸುವ ನಿಟ್ಟಿನಲ್ಲಿ `ಪ್ರಕೃತಿಗೆ ಹಸಿರು ಹೊದಿಸಿ ಒಂದು ಕಳಿಯಾಟ ಕಾಲ’ಎಂಬ ವಿಶೇಷ ಪರಿಕಲ್ಪನೆಯೊಂದಿಗೆ ಏಕಕಾಲಕ್ಕೆ 3000 ಫಲವೃಕ್ಷ ಸಸಿಗಳನ್ನು ನೆಡುವ ಕಾರ್ಯಕ್ರಮವನ್ನು ಪೆರ್ಣೆ ಕಳಿಯಾಟ ಮಹೋತ್ಸವ ಸಮಿತಿ ಮತ್ತು ಕ್ಷೇತ್ರದ ವತಿಯಿಂದ ಹಮ್ಮಿಕೊಂಡಿದ್ದು ಆ.20ರಂದು ಪುತ್ತೂರಿನಲ್ಲಿಯೂ ವಾಣಿಯನ್/ಗಾಣಿಗ ಸಮಾಜ ಬಾಂಧವರ ಮನೆಗಳಲ್ಲಿ ಏಕ ಕಾಲಕ್ಕೆ 400 ಫಲ ವೃಕ್ಷಗಳನ್ನು ನಾಟಿ ಮಾಡಿದರು.


ಕ್ಷೇತ್ರದ ವತಿಯಿಂದ ಹಮ್ಮಿಕೊಂಡಿರುವ ಯೋಜನೆಗೆ ಪುತ್ತೂರು ವಾಣಿಯನ್/ಗಾಣಿಗ ಸಮಾಜ ಸೇವಾ ಸಂಘದ ವ್ಯಾಪ್ತಿಯಲ್ಲಿ ಯಶಸ್ವಿಯಾಗಿ ಅನುಷ್ಠಾನ ಮಾಡಲಾಯಿತು. ಪುತ್ತೂರು ಸಂಘದ ವ್ಯಾಪ್ತಿಗೊಳಪಟ್ಟ ಪುತ್ತೂರು ಹಾಗೂ ಕಡಬ ತಾಲೂಕಿನ ಸುಮಾರು 400ಕ್ಕೂ ಅಧಿಕ ವಾಣಿಯನ್/ಗಾಣಿಗ ಸಮಾಜ ಬಾಂಧವರ ಮನೆಯಲ್ಲಿ ಏಕಕಾಲದಲ್ಲಿ 400ಕ್ಕೂ ಅಧಿಕ ಫಲವೃಕ್ಷ ಸಸಿಗಳನ್ನು ನೆಡಲಾಯಿತು.


ಪುತ್ತೂರು ವಾಣಿಯನ್/ಗಾಣಿಗ ಸಮಾಜ ಸೇವಾ ಸಂಘದ ಅಧ್ಯಕ್ಷ ಕಲ್ಲರ್ಪೆ ನಿವಾಸಿ ಪ್ರಸಾದ್ ಬಿ.ಯವರ ಮನೆಯಲ್ಲಿ ತೆಂಗಿನ ಸಸಿ ನೆಡುವ ಮೂಲಕ ಚಾಲನೆ ನೀಡಲಾಯಿತು. ಸಂಘದ ನಿಕಟಪೂರ್ವ ಅಧ್ಯಕ್ಷ ಸುಬ್ಬಪ್ಪ ಪಟ್ಟೆ, ಸ್ಥಾಪಕಾಧ್ಯಕ್ಷ ಹಾಗೂ ಕಳಿಯಾಟ ಮಹೋತ್ಸವ ಸಮಿತಿಯ ಉಪಾಧ್ಯಕ್ಷ ತಿಮ್ಮಪ್ಪ ಪಾಟಾಳಿ, ಕಳಿಯಾಟ ಸಮಿತಿ ಕಾರ್ಯದರ್ಶಿ ದಾಮೋದರ ಪಾಟಾಳಿ, ನಿವೃತ್ತ ಯೋಧ ಬಾಲಕೃಷ್ಣ ಪಾಟಾಳಿ, ಸಂಘದ ಪೂರ್ವಾಧ್ಯಕ್ಷ ಶಂಕರ ಪಾಟಾಳಿ, ಕಾರ್ಯದರ್ಶಿ ಜಯಲಕ್ಷ್ಮೀ ಡಿ.ಎಸ್., ಸಂಘಟನಾ ಕಾರ್ಯದರ್ಶಿ ಮನೋಹರ್ ಪುತ್ತೂರು, ಉದ್ಯಮಿ ಅರವಿಂದ ಜಾಲ್ಸೂರು ಸೇರಿದಂತೆ ಸಂಘದ ಸದಸ್ಯರು ಹಾಗೂ ಸಮಾಜ ಬಾಂಧವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here