ಲ್ಯಾಂಪ್ಸ್ ಸಹಕಾರ ಸಂಘದ ವಾರ್ಷಿಕ ಮಹಾಸಭೆ

0
  • ರೂ.22.50ಕೋಟಿ ವ್ಯವಹಾರ
  • ರೂ.18.53ಲಕ್ಷ ಲಾಭ
  • ಶೇ.98 ಸಾಲ ವಸೂಲಾತಿ

ಪುತ್ತೂರು: ಪುತ್ತೂರು ತಾಲೂಕು ಪರಿಶಿಷ್ಟ ವರ್ಗಗಳ ದೊಡ್ಡ ಪ್ರಮಾಣದ ವಿವಿಧೋದ್ದೇಶ(ಲ್ಯಾಂಪ್ಸ್) ಸಹಕಾರಿ ಸಂಘವು 2022-23ನೇ ಸಾಲಿನಲ್ಲಿ ರೂ.22.50ಕೋಟಿ ವ್ಯವಹಾರ ನಡೆಸಿ, ರೂ.18.53ಲಕ್ಷ ಲಾಭಗಳಿಸಿದೆ. ಶೇ.98 ಸಾಲ ವಸೂಲಾತಿಯಾಗಿದೆ. ಲೆಕ್ಕಪರಿಶೋಧನೆಯಲ್ಲಿ ಸಂಘವು ಸತತವಾಗಿ ಎ ಶ್ರೇಣಿಯನ್ನು ಪಡೆದುಕೊಂಡಿದೆ ಎಂದು ಸಂಘದ ಅಧ್ಯಕ್ಷ ಪೂವಪ್ಪ ನಾಯ್ಕ ಎಸ್ ಆಲಂಕಾರು ವಾರ್ಷಿಕ ಮಹಾಸಭೆಯಲ್ಲಿ ಘೋಷಣೆ ಮಾಡಿದರು.


ಸಂಘದ ಮಹಾಸಭೆಯು ಆ.20ರಂದು ಕೊಂಬೆಟ್ಟು ಮರಾಟಿ ಸಮಾಜ ಸೇವಾ ಸಂಘದ ಸಭಾಂಗಣದಲ್ಲಿ ನಡೆಯಿತು. ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಘವು ವರದಿ ವರ್ಷದಲ್ಲಿ ಸದಸ್ಯರಿಂದ ರೂ.40,87,938.50ಪಾಲು ಬಂಡವಾಳ, ಸರಕಾರದಿಂದ ರೂ.24,14,616 ಪಾಲು ಬಂಡವಾಳ ಹೊಂದಿರುತ್ತದೆ. ಸಂಘದಲ್ಲಿ ಸಂಚಯ ಠೇವಣಿ ರೂ.92,52,609, ಮಾಸಿಕ ಠೇವಣಿ ರೂ.9,11,900, ನಿರಖು ಠೇವಣಿ ರೂ.3,35,76,451 ಮತ್ತು ಸ್ವರ್ಣ ನಿತ್ಯ ನಿಧಿ ಠೇವಣಿ ರೂ.57,64,815, ಕ್ಷೇಮನಿಧಿ ರೂ.64,42,996.89, ಹಾಗೂ ರೂ.1,30,03,216.54 ಇತರ ನಿಧಿಗಳನ್ನು ಹೊಂದಿರುತ್ತದೆ. ಸಹಾಯಧನ ರೂ.1.83.69.196, ನಗದು ಶಿಲ್ಕು ರೂ.60,098.43 ಮತ್ತು ವಿವಿಧ ಬ್ಯಾಂಕ್‌ಗಳಲ್ಲಿ ರೂ.42,67,941.32 ಹೊಂದಿರುತ್ತದೆ. ಇತರ ಬ್ಯಾಂಕ್‌ಗಳಲ್ಲಿ ಒಟ್ಟು ರೂ.2.24,07,970.89 ಧನ ವಿನಿಯೋಗ ಮಾಡಿದೆ. ರೂ.61,500 ಇತರ ಸಹಕಾರಿ ಸಂಘಗಳಲ್ಲಿ ಪಾಲ ಬಂಡವಾಳ ಹೊಂದಿದೆ. ವರದಿ ಸಾಲಿನಲ್ಲಿ ಒಟ್ಟು ರೂ.3,49,04,685 ಸಾಲ ವಿತರಿಸಲಾಗಿದ್ದು ವರ್ಷಾಂತ್ಯಕ್ಕೆ ರೂ.10,68,703 ಸುಸ್ತಿಯಾಗಿದೆ. ಸಾಲ ವಸೂಲಾತಿಯಲ್ಲಿ ಸಂಘವು ಶೇ.97.96 ರಷ್ಟು ಸಾಧನೆ ಮಾಡಿದೆ. ಸಂಘದ ಗಳಿಸಿದ ಲಾಭಾಂಶವನ್ನು ನಿಯಮಾವಳಿಯಂತೆ ವಿಂಗಡಣೆ ಮಾಡಲಾಗಿದೆ ಎಂದು ಅಧ್ಯಕ್ಷರು ತಿಳಿಸಿದರು.

ಸಂಘದ ಸಾಧನೆಗೆ ಪುರಸ್ಕಾರ:
ಸಂಘದ ಸಾಧನೆಯನ್ನು ಗುರುತಿಸಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಿಂದ ಕಳೆದ ಎರಡು ವರ್ಷಗಳಿಂದ ಅತ್ಯುತ್ತಮ ಸಹಕಾರಿ ಸಂಘ ಪುರಸ್ಕಾರ ಹಾಗೂ ರೂ.10,000 ಪಾಲುಬಂಡವಾಳವನ್ನು ನೀಡಿರುತ್ತದೆ. 2022ರಲ್ಲಿ ಮಂಗಳೂರಿನಲ್ಲಿ ನಡೆದ 69ನೇ ಅಖಿಲ ಭಾರತ ಸಹಕಾರ ಸಪ್ತಾಹದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲವು ಉತ್ತಮ ಸಹಕಾರಿ ಸಂಘ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ ಎಂದು ಅಧ್ಯಕ್ಷ ಪೂವಪ್ಪ ನಾಯ್ಕ ಹೇಳಿದರು.

ಕಡಬದಲ್ಲಿ ಶಾಖೆ ಪ್ರಾರಂಭ:
ಸಂಘದ ವ್ಯವಹಾರವನ್ನು ಕಡಬಕ್ಕೂ ವಿಸ್ತರಿಸುವುದು ಹಾಗೂ ಕಡಬ ಭಾಗದಲ್ಲಿರುವ ಸದಸ್ಯರಿಗೆ ಸಂಘದ ಮೂಲಕ ವ್ಯವಹರಿಸಲು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕಡಬ ತಾಲೂಕು ಕೇಂದ್ರದಲ್ಲಿ ಸಂಘದ ಶಾಖೆ ಪ್ರಾರಂಭಿಸಲಾಗುವುದು. ಸಿಬ್ಬಂದಿಗಳ ನೇಮಕಾತಿ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ಶಾಖೆ ಪ್ರಾರಂಭಿಸಲಾಗುವುದು ಎಂದು ಅಧ್ಯಕ್ಷ ಪೂವಪ್ಪ ನಾಯ್ಕ ತಿಳಿಸಿದರು.
ನಿರ್ದೇಶಕರಾದ ಮಂಜುನಾಥ ಎನ್.ಎಸ್., ಪೂವಪ್ಪ ನಾಯ್ಕ ಕೆ. ಮಾಡ್ನೂರು, ಅಪ್ಪಯ್ಯ ನಾಯ್ಕ ತಳೆಂಜಿ, ಕೃಷ್ಣ ನಾಯ್ಕ ಪಿ.ಎಂ ಕೃಷ್ಣನಗರ, ನೇತ್ರಾಕ್ಷ ಏಣಿತ್ತಡ್ಕ, ಶೇಷಪ್ಪ ನಾಯ್ಕ ದೊಡ್ಡಡ್ಕ, ಅಶ್ವಿನಿ ಬಿ.ಕೆ ಮುಂಡೂರು, ಭವ್ಯ ಚಿಕ್ಕಮುಡ್ನೂರು, ರೇವತಿ ನಿಡ್ಪಳ್ಳಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಹಿರಿಯ ಸದಸ್ಯರಿಗೆ ಸನ್ಮಾನ:
ಸಂಘದ ಹಿರಿಯ ಸದಸ್ಯರಾದ ಸುಂದರ ನಾಯ್ಕ ಹಳೆಯೂರು 34 ನೆಕ್ಕಿಲಾಡಿ, ಸೇಷಪ್ಪ ನಾಯ್ಕ ತಾಳೆಹಿತ್ಲು 34 ನೆಕ್ಕಿಲಾಡಿ, ಚನಿಯಪ್ಪ ನಾಯ್ಕ ಗುರಿಕುಮೇರಿ ಒಳಮೊಗ್ರು ಹಾಗೂ ನೀಲಪ್ಪ ನಾಯ್ಕ ಬೋಲೋಡಿ ಕೆದಂಬಾಡಿಯವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಮಂಜುನಾಥ ಎನ್.ಎಸ್, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಣಪಣ್ಣ ಹೆಚ್. ಹಾಗೂ ಕೊರಗ ಸಮುದಾಯದ ಅಧ್ಯಕ್ಷ ತುಕ್ರಪ್ಪರವರನ್ನು ಗೌರವಿಸಲಾಯಿತು.

ಸದಸ್ಯರಾದ ಜನಾರ್ದನ ಪೆರಾಜೆ, ಉಮೇಶ್ ದಾಸರಮೂಲೆ, ಕರುಣಾಕರ ಆಲೆಟ್ಟಿ, ಯು.ಕೆ ನಾಯ್ಕ ಸೇರಿದಂತೆ ಹಲವು ಮಂದಿ ಸಲಹೆ ಸೂಚನೆಗಳನ್ನು ನೀಡಿದರು. ಸಿಬಂದಿ ಭವ್ಯ ಪ್ರಾರ್ಥಿಸಿದರು. ಅಧ್ಯಕ್ಷ ಪೂವಪ್ಪ ನಾಯ್ಕ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಣಪಣ್ಣ ಹೆಚ್. ವರದಿ ಹಾಗೂ ಲೆಕ್ಕಪತ್ರ ಮಂಡಿಸಿದರು. ಉಪಾಧ್ಯಕ್ಷ ಧರ್ಣಪ್ಪ ನಾಯ್ಕ ಉಪ್ಪಿನಂಗಡಿ ವಂದಿಸಿದರು. ಸಿಬಂದಿಗಳಾದ ಹೊನ್ನಪ್ಪ ನಾಯ್ಕ, ಸೇಸಪ್ಪ ನಾಯ್ಕ, ಬಾಬು ನಾಯ್ಕ ಹೆಚ್., ನಾಣ್ಯಪ್ಪ ಪಿ., ಪೂವಪ್ಪ ನಾಯ್ಕ, ರವಿಕಲಾ ಟಿ.ನಾಯ್ಕ, ಕೃಷ್ಣಪ್ಪ ನಾಯ್ಕ, ಪಿಗ್ಮಿ ಸಂಗ್ರಾಹಕರಾದ ರಾಮಣ್ಣ ನಾಯ್ಕ ಹಾಗೂ ಶೇಖರ ನಾಯ್ಕ ಸಹಕರಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಹಭೋಜನ ನಡೆಯಿತು.

LEAVE A REPLY

Please enter your comment!
Please enter your name here