ಸೆ.6: ಭಕ್ತಕೋಡಿಯಲ್ಲಿ 22ನೇ ವರ್ಷದ ಮೊಸರು ಕುಡಿಕೆ ಉತ್ಸವ-ಆಮಂತ್ರಣ ಪತ್ರಿಕೆ ಬಿಡುಗಡೆ

0

ಪುತ್ತೂರು: ಶ್ರೀ ಷಣ್ಮುಖ ಯುವಕ ಮಂಡಲ ಸರ್ವೆ ಹಾಗೂ ಶ್ರೀ ಗೌರಿ ಮಹಿಳಾ ಮಂಡಲ ಸರ್ವೆ ಇದರ ಸಂಯುಕ್ತ ಆಶ್ರಯದಲ್ಲಿ ಸೆ.6ರಂದು ನಡೆಯುವ 22ನೇ ವರ್ಷದ ಮೊಸರು ಕುಡಿಕೆ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಎಸ್.ಜಿ.ಎಂ ಪ್ರೌಢಶಾಲೆಯ ಸಭಾಂಗಣದಲ್ಲಿ ನಡೆಯಿತು. ಯುವಕ ಮಂಡಲದ ಗೌರವಾಧ್ಯಕ್ಷರಾದ ವಸಂತ ಎಸ್.ಡಿ. ಸರ್ವೆದೋಳಗುತ್ತು ಅವರು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು.
ವೇದಿಕೆಯಲ್ಲಿ ಯುವಕ ಮಂಡಲದ ಗೌರವ ಸಲಹೆಗಾರರಾದ ಸೀತಾರಾಮ ಭಟ್ ಕಲ್ಲಮ, ಶ್ರೀನಿವಾಸ್ ಹೆಚ್.ಬಿ, ಜಿ.ಕೆ. ಪ್ರಸನ್ನ ಕಲ್ಲಗುಡ್ಡೆ, ಶಶಿಧರ್ ಎಸ್.ಡಿ,
ಗೌರಿ ಮಹಿಳಾ ಮಂಡಲದ ಗೌರವಾಧ್ಯಕ್ಷೆ ರತ್ನಾವತಿ ಎಸ್.ಡಿ, ಮೊಸರು ಕುಡಿಕೆ ಉತ್ಸವ ಕಾರ್ಯಕ್ರಮ ಸಂಯೋಜಕ ಸುಬ್ರಹ್ಮಣ್ಯ ಕರುಂಬಾರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಖಜಾಂಜಿ ಗುರುರಾಜ್ ಪಟ್ಟೆಮಜಲು, ಪದಾಧಿಕಾರಿಗಳಾದ ಗೌತಮ್ ಪಟ್ಟೆಮಜಲು, ನಂದನ್ ಕುಮಾರ್ ಕೈಯೊಲುಂಕು, ಪ್ರಮೋದ್ ಅಲೇಕಿ, ಕಿರಣ್ ಎಸ್.ಡಿ, ಹರೀಶ್ ಅಲೇಕಿ, ನಾಗೇಶ್ ಪಟ್ಟೆಮಜಲು, ಚಿರಾಗ್ ರೈ ಮೇಗಿನಗುತ್ತು, ಕಾರ್ಯಕಾರಿ ಸಮಿತಿಯ ಸಂಚಾಲಕ ರಾಮಣ್ಣ ಪೂಜಾರಿ, ಕಾರ್ಯಕಾರಿ ಸಮಿತಿ ಸದಸ್ಯರಾದ ತಿಲಕ್‌ರಾಜ್ ಕರುಂಬಾರು, ಕಮಲೇಶ್ ಸರ್ವೆದೋಳಗುತ್ತು, ರಾಜೇಶ್ ಎಸ್.ಡಿ, ಎಸ್.ಎಂ ಶರೀಫ್ ಸರ್ವೆ, ಸದಸ್ಯರಾದ ಶರತ್ ಕಾಯರ್‌ಮೊಗೆರ್, ವಸಂತ್ ಕೈಪಂಗಳದೋಳ, ಲಕ್ಷಣ ಆಚಾರ್ಯ, ಪ್ರಕಾಶ್ ಅಲೇಕಿ, ಜಯಂತ್ ಎಸ್.ಡಿ. ಉಮೇಶ್ ಎಸ್.ಡಿ, ಶ್ರೀ ಗೌರಿ ಮಹಿಳಾ ಮಂಡಲದ ಅಧ್ಯಕ್ಷೆ ಮೋಹಿನಿ, ಉಪಾಧ್ಯಕ್ಷೆ ಭವ್ಯ ಸುಬ್ರಹ್ಮಣ್ಯ, ಸದಸ್ಯೆ ಲಲಿತಾ ಲಕ್ಷಣ ಉಪಸ್ಥಿತರಿದ್ದರು.
ಸ್ವಾಗತಿಸಿದ ಯುವಕ ಮಂಡಲದ ಅಧ್ಯಕ್ಷ ಗೌತಮ್‌ರಾಜ್ ಕರುಂಬಾರು ಮಾತನಾಡಿ ನಮ್ಮ ಯುವಕ ಮಂಡಲದ ವತಿಯಿಂದ ಸೆ.6ರಂದು 22ನೇ ವರ್ಷದ ಮೊಸರು ಕುಡಿಕೆ ಉತ್ಸವ ಭಕ್ತಕೋಡಿಯಲ್ಲಿ ವಿವಿಧ ಆಟೋಟ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನೆರವೇರಲಿದ್ದು, ಈ ಬಾರಿಯೂ ಕಾರ್ಯಕ್ರಮವನ್ನು ಯಶಸ್ವಿಯಾಗಿ ಸಂಘಟಿಸಲು ಸಂಘಟಿತರಾಗಿದ್ದೇವೆ ಎಂದು ತಿಳಿಸಿದರು. ಯುವಕ ಮಂಡಲ ಪ್ರಧಾನ ಕಾರ್ಯದರ್ಶಿ ಮನೋಜ್ ಸುವರ್ಣ ವಂದಿಸಿದರು.

LEAVE A REPLY

Please enter your comment!
Please enter your name here