ಆ.26:ವಿವಿಧ ಸಂಘ-ಸಂಸ್ಥೆಗಳಿಂದ ಬಿರುಮಲೆಗೊಂದು ಸುತ್ತು ಸ್ಪರ್ಧೆಯ ನಡಿಗೆ ನಮ್ಮ ಜೀವನ ಅರೋಗ್ಯದೆಡೆಗೆ-ಪೂರ್ವಭಾವಿ ಸಭೆ

0

ಪುತ್ತೂರು:ಬಿರುಮಲೆ ಬೆಟ್ಟ ಅಭಿವೃದ್ಧಿ ಯೋಜನೆ ಪುತ್ತೂರು, ರೋಟರಿ ಕ್ಲಬ್ ಪುತ್ತೂರು, ರೋಟರಿ ಕ್ಲಬ್ ಪುತ್ತೂರು ಈಸ್ಟ್, ರೋಟರಿ ಕ್ಲಬ್ ಪುತ್ತೂರು ಸಿಟಿ, ರೋಟರಿ ಕ್ಲಬ್ ಪುತ್ತೂರು ಯುವ, ರೋಟರಿ ಕ್ಲಬ್ ಪುತ್ತೂರು ಸ್ವರ್ಣ, ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್, ರೋಟರಿ ಕ್ಲಬ್ ಪುತ್ತೂರು ಎಲೈಟ್, ಪುತ್ತೂರು ಬಿರುಮಲೆ ಹಿಲ್, ಜೇಸಿಐ ಪುತ್ತೂರು ಹಾಗೂ ವರ್ತಕ ಸಂಘ ಪುತ್ತೂರು ಇವುಗಳ ಸಹಯೋಗದೊಂದಿಗೆ ಆ.26 ರಂದು ಸಂಜೆ ಬಿರುಮಲೆ ಹಿಲ್‍ನ ಗಾಂಧಿ ಮಂಟಪದಲ್ಲಿ `ಬಿರುಮಲೆಗೊಂದು ಸುತ್ತು ಸ್ಪರ್ಧೆಯ ನಡಿಗೆ ನಮ್ಮ ಜೀವನ ಅರೋಗ್ಯದೆಡೆಗೆ’ ಕಾರ್ಯಕ್ರಮ ಜರಗಲಿದ್ದು ಈ ಕಾರ್ಯಕ್ರಮದ ಪೂರ್ವಭಾವಿ ಸಭೆಯು ಆ.21 ರಂದು ಬಿರುಮಲೆ ಹಿಲ್‍ನ ಗಾಂಧಿ ಮಂಟಪದಲ್ಲಿ ಜರಗಿತು.

ಕಾರ್ಯಕ್ರಮವನ್ನು ಶಾಸಕರಾದ ಅಶೋಕ್ ಕುಮಾರ್ ರೈಯವರು ಫ್ಲ್ಯಾಗ್ ಆಫ್ ನೆರವೇರಿಸಲಿದ್ದಾರೆ. ಗೌರವ ಉಪಸ್ಥಿತಿಯಾಗಿ ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತರಾದ ಗಿರೀಶ್ ನಂದನ್, ಪುತ್ತೂರು ಉಪವಿಭಾಗದ ಡಿ.ವೈ.ಎಸ್.ಪಿ ಡಾ|ಗಾನಾ ಪಿ.ಕುಮಾರಿ, ಪುತ್ತೂರು ಉಪವಿಭಾಗದ ಸುಬ್ಬಯ್ಯ, ಪುತ್ತೂರು ನಗರಸಭೆಯ ಪೌರಾಯುಕ್ತರಾದ ಮಧು ಮನೋಹರ್‍ರವರು ಭಾಗವಹಿಸಲಿದ್ದಾರೆ.

ಸಂಜೆ ನಡೆದ ಪೂರ್ವಭಾವಿ ಸಭೆಯಲ್ಲಿ ರೋಟರಿ ಜಿಲ್ಲೆ 3181, ವಲಯ ನಾಲ್ಕರ ಅಸಿಸ್ಟೆಂಟ್ ಗವರ್ನರ್ ಲಾರೆನ್ಸ್ ಗೊನ್ಸಾಲ್ವಿಸ್, ವರ್ತಕ ಸಂಘದ ಕಾರ್ಯದರ್ಶಿ ಉಲ್ಲಾಸ್ ಪೈ, ಸಂತ ಫಿಲೋಮಿನಾ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಎಲ್ಯಾಸ್ ಪಿಂಟೋ, ಬಿರುಮಲೆ ಬೆಟ್ಟ ಅಭಿವೃದ್ಧಿ ಯೋಜನೆ ಪುತ್ತೂರು ಕಾರ್ಯದರ್ಶಿ ಬಿ.ಎಸ್ ಅಮ್ಮಣ್ಣಾಯ, ಕೋಶಾಧಿಕಾರಿ ಪ್ರೊ|ದತ್ತಾತ್ರೇಯ ರಾವ್, ಸದಸ್ಯೆ ಡಾ.ಸತ್ಯವತಿ ಆಳ್ವ, ರೋಟರಿ ಸೆಂಟ್ರಲ್ ಸ್ಥಾಪಕಾಧ್ಯಕ್ಷ ಸಂತೋಷ್ ಶೆಟ್ಟಿ, ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಜೈರಾಜ್ ಭಂಡಾರಿ, ರೋಟರಿ ಎಲೈಟ್‍ನ ಕಾರ್ಯದರ್ಶಿ ಆಸ್ಕರ್ ಆನಂದ್ ಉಪಸ್ಥಿತರಿದ್ದು ಕಾರ್ಯಕ್ರಮದ ರೂಪುರೇಷೆ ಬಗ್ಗೆ ಚರ್ಚಿಸಲಾಯಿತು. ಹೆಚ್ಚಿನ ಮಾಹಿತಿಗೆ ದತ್ತಾತ್ರೇಯ ರಾವ್(9481761375), ಎ.ಜೆ. ರೈ(9483944754), ಪಶುಪತಿ ಶರ್ಮ(9845522020)ರವರನ್ನು ಸಂಪರ್ಕಿಸಬಹುದಾಗಿದೆ.

ಪುತ್ತೂರಿನ ನಾಗರಿಕರು ಈ ನಡಿಗೆ ಸ್ಪರ್ಧೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕಾರ ನೀಡಬೇಕು ಎಂದು ಬಿರುಮಲೆ ಬೆಟ್ಟ ಅಭಿವೃದ್ಧಿ ಯೋಜನೆ ಪುತ್ತೂರು ಅಧ್ಯಕ್ಷ ಎ.ಜೆ ರೈ, ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಜೈರಾಜ್ ಭಂಡಾರಿ, ರೋಟರಿ ಕ್ಲಬ್ ಪುತ್ತೂರು ಈಸ್ಟ್ ಅಧ್ಯಕ್ಷ ಬೂಡಿಯಾರು ರಾಧಾಕೃಷ್ಣ ರೈ, ರೋಟರಿ ಕ್ಲಬ್ ಪುತ್ತೂರು ಸಿಟಿ ಅಧ್ಯಕ್ಷೆ ಗ್ರೇಸಿ ಗೊನ್ಸಾಲ್ವಿಸ್, ರೋಟರಿ ಕ್ಲಬ್ ಪುತ್ತೂರು ಯುವ ಅಧ್ಯಕ್ಷ ಪಶುಪತಿ ಶರ್ಮ, ರೋಟರಿ ಕ್ಲಬ್ ಪುತ್ತೂರು ಸ್ವರ್ಣ ಅಧ್ಯಕ್ಷ ಬಲ್ಕಾಡಿ ಸುಂದರ್ ರೈ, ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ಅಧ್ಯಕ್ಷ ಡಾ|ರಾಜೇಶ್ ಬೆಜ್ಜಂಗಳ, ರೋಟರಿ ಕ್ಲಬ್ ಪುತ್ತೂರು ಎಲೈಟ್ ಅಧ್ಯಕ್ಷ ಅಬ್ದುಲ್ ರಝಾಕ್ ಕಬಕಕಾರ್ಸ್, ಜೇಸಿಐ ಪುತ್ತೂರು ಅಧ್ಯಕ್ಷ ಸುಹಾಸ್ ಹಾಗೂ ವರ್ತಕ ಸಂಘ ಪುತ್ತೂರು ಅಧ್ಯಕ್ಷ ಜೋನ್ ಕುಟಿನ್ಹಾ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೀಗಿರಲಿದೆ ನಡಿಗೆ ಸ್ಪರ್ಧೆ..
*ಸಾರ್ವಜನಿಕರಿಗೆ ಮುಕ್ತ ಅವಕಾಶ *ಬಿರುಮಲೆ ಬೆಟ್ಟದ ಗಾಂಧಿ ಮಂಟಪದಿಂದ ಪ್ರಾರಂಭ *3.30 ಗಂಟೆಗೆ ಎಲ್ಲರೂ ಹಾಜರಿರಬೇಕು *4.00ಕ್ಕೆ ಶಾಸಕರಿಂದ ಚಾಲನೆ *ಸಾಲುಮರ ತಿಮ್ಮಕ್ಕ ಉದ್ಯಾನವನದ ದ್ವಾರದ ಬಳಿ ಮುಕ್ತಾಯ *ಸಮಾರೋಪ 5.00ಗಂಟೆಗೆ *ನಡಿಗೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಸರ್ಟಿಫಿಕೇಟ್ ನೀಡಲಾಗುವುದು *ಭಾಗವಹಿಸಿದ ಒಬ್ಬ ಅದೃಷ್ಟಶಾಲಿಗೆ ಬಹುಮಾನ *ರಿಜಿಸ್ಟ್ರೇಷನ್‍ಗೇ ಕೊನೆ ದಿನಾಂಕ 25-08-2023, ಸಂಜೆ ಗಂಟೆ 5.30ರ ತನಕ *ರಿಜಿಸ್ಟ್ರೇಷನ್ ಶುಲ್ಕ ಇರುವುದಿಲ್ಲ

ಸ್ಪರ್ಧಾ ವಿಭಾಗ..
ಪುರುಷರ ವಿಭಾಗ: 60ರ ಮೇಲಿನ, 45-60, 30-45, 18-30, 18ರ ಕೆಳಗಿನ ವಿದ್ಯಾರ್ಥಿಗಳಿಗೆ
ಮಹಿಳಾ ವಿಭಾಗ: 45ರ ಮೇಲಿನ, 30-45, 18-30, 18ರ ಕೆಳಗಿನ ವಿದ್ಯಾರ್ಥಿಗಳಿಗೆ
ಎಲ್ಲಾ ವಿಭಾಗಗಳಲ್ಲಿ ಪ್ರಥಮ ಮತ್ತು ದ್ವಿತೀಯ ಬಹುಮಾನ ಆಕರ್ಷಕ ಟ್ರೋಫಿ

LEAVE A REPLY

Please enter your comment!
Please enter your name here