ವಿಟ್ಲದ ಸಪ್ತ ಜ್ಯುವೆಲ್ಸ್ ನಲ್ಲಿ ಹಬ್ಬಗಳ ಕೊಡುಗೆ-ಆ.26 ರಂದು ಕೊನೆ

0

ಖರೀದಿಸಿದ ಚಿನ್ನಾಭರಣ ತೂಕದಷ್ಟೇ ಬೆಳ್ಳಿ ಖಚಿತ – ಕೊಡುಗೆಗಳಿಗೆ ಗ್ರಾಹಕರಿಂದ ಉತ್ತಮ ಸ್ಪಂದನೆ

ವಿಟ್ಲ: ಅತ್ಯಲ್ಪ ಅವಧಿಯಲ್ಲೇ ಚಿನ್ನಾಭರಣ ಮಾರಾಟ ಮಳಿಗೆಯಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿ ಗ್ರಾಹಕರ ಮನಗೆದ್ದ ವಿಟ್ಲ – ಪುತ್ತೂರು ರಸ್ತೆಯಲ್ಲಿರುವ ಸ್ಮಾರ್ಟ್ ಸಿಟಿ ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ಸಪ್ತ ಜ್ಯುವೆಲ್ಸ್ ಚಿನ್ನಾಭರಣ ಮಳಿಗೆಯಲ್ಲಿ ಸ್ವಾತಂತ್ರೋತ್ಸವ, ನಾಗರಪಂಚಮಿ, ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಗ್ರಾಹಕರಿಗೆ ವಿಶೇಷ ಕೊಡುಗೆ ನೀಡಲಾಗುತ್ತಿದ್ದು, ಈ ಕೊಡುಗೆಗಳು ಆ.26ರಂದು ಕೊನೆಗೊಳ್ಳಲಿದೆ. ಸಂಸ್ಥೆಯಲ್ಲಿ ಯಾವುದೇ ಚಿನ್ನದ ಆಭರಣವನ್ನು ಕೊಳ್ಳುವಾಗ ಅಷ್ಟೇ ತೂಕದ ಬೆಳ್ಳಿಯನ್ನು ಪಡೆಯುವ ಅವಕಾಶವನ್ನು ಸಂಸ್ಥೆ ಕಲ್ಪಿಸಿದೆ. ಆರಂಭದ ದಿನಗಳಿಂದಲೂ ಗ್ರಾಹಕರಿಂದ ಉತ್ತಮ ಸ್ಪಂಧನೆ ಲಭಿಸಿದ್ದು, ಈ ಕೊಡುಗೆಗಳು ಆ.26 ರಂದು ಕೊನೆಗೊಳ್ಳಲಿದೆ‌ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ವಿವಿಧ ವಿನ್ಯಾಸದ ಚಿನ್ನಾಭರಣಗಳು:
ಸಪ್ತ ಜ್ಯುವೆಲ್ಸ್‌ನಲ್ಲಿ ಸ್ಥಳೀಯ ನುರಿತ ಕುಶಲ ಕರ್ಮಿಗಳಿಂದ ತಯಾರಿಸಲ್ಪಟ್ಟ ವಿವಿಧ ವಿನ್ಯಾಸದ ಚಿನ್ನಾಭರಣಗಳ ಬೃಹತ್ ಸಂಗ್ರಹವಿದೆ. ಪಾರಂಪರಿಕ ಆಭರಣಗಳು, ಮಾಂಗಲ್ಯ ಸರ, ನವರತ್ನದ ಉಂಗುರ, ಲೈಟ್ ವೈಟ್ ರಿಂಗ್, ಕಾಸ್ಟಿಂಗ್ ರಿಂಗ್, ಕಪಲ್ ರಿಂಗ್, ಕ್ಲೋಸೆಟ್ಟಿಂಗ್ ರಿಂಗ್, ಬರ್ತ್ ಸ್ಟೋನ್ ರಿಂಗ್, ಪವಿತ್ರ ರಿಂಗ್, ಕರ್ಟ್ಸ್ ಬಳೆಗಳು, ಬೆಂಡೋಲೆಗಳು, ಹವಳ – ಮುತ್ತಿನ ಸರಗಳು, ಕೊತ್ತಂಬರಿಸರ, ಮೋಹನಸರ, ಕನಕಸರ, ರೇಡಿಯೋ ಚೈನ್, ಲೈಟ್ ವೈಟ್ ಸಿರಾಮಿಕ್ ಸ್ಟಡ್ಸ್, ಕೊಡಗು ಶೈಲಿಯ ಕೊಕ್ಕೆತಾತಿ ಪೆಂಡೆಂಟ್ ಗಳು, ಕೊಕ್ಕೆತಾತಿ ಕಿವಿಯೋಲೆಗಳು, ಟೆಂಪಲ್ ಕಲೆಕ್ಷನ್ ನಲ್ಲಿ ವಿವಿಧ ರೀತಿಯ ಮೆರುಗನ್ನು ಕೊಡುವ ವಿನ್ಯಾಸಗಳು, ಫೈ ಇನ್ ವನ್ ಹಾರಗಳು, ಫ್ಯೂಜನ್ ಕಲೆಕ್ಷನ್, ಚೆಟ್ಟಿನಾಡ್ ಕಲೆಕ್ಷನ್, ನಕ್ಷಿ ಓರ್ನಮೆಂಟ್ಸ್ ಇವುಗಳಲ್ಲಿ ವೆಡ್ಡಿಂಗ್ ಸೆಟ್ ಹಾಗೂ ಡಿವೈನ್ ಸೆಟ್ ಗಳು ಲಭ್ಯವಿದೆ. ರಿಚ್ ಲುಕ್ ನೀಡುವ ರೂಬಿ, ಎಮ್ರೋಲ್ಡ್ ಸಿಝೆಡ್ ಸ್ಟೋನ್ ಗಳಲ್ಲಿ ಮಾಡಿದ‌ ಚನ್ನಾಭರಣಗಳ ಸಂಗ್ರಹವಿದೆ. ಉತ್ತಮ ಕಾರ್ಯ ಕೌಶಾಲ್ಯತೆ ಹೊಂದಿರುವ ಕೊಲ್ಕತ್ತಾ, ಬೆಂಗಾಳಿ, ಬಾಂಬೆ ಶೈಲಿಯ ವೆಡ್ಡಿಂಗ್ ಸೆಟ್ಟ್ ಗಳು ಸಹ ದೊರೆಯುತ್ತಿರುವುದು ಸಂಸ್ಥೆಯ ವಿಶೇಷತೆಯಾಗಿದೆ. ಕೊಲ್ಲಾಪುರ ಲೈಟ್ ವೈಟ್ ವ್ಯಾಕ್ಸ್ ಮಾಲೆಗಳ ಬೃಹತ್ ಸಂಗ್ರಹವೇ ಇಲ್ಲಿದೆ. ಬೆಂಗಾಲಿ ಹ್ಯಾಂಡ್ ಮೇಡ್ ಚೈನ್, ಕೊಯಮುತ್ತೂರು ಸ್ಪೆಷಲ್ ಕಟ್ಟಿಂಗ್ ಚೈನ್, ಕೇರಳ ಹ್ಯಾಂಡ್ ಮೇಡ್ ಚೈನ್ಸ್, ಇಂಡೋ ಇಟೇಲಿಯನ್ ಚೈನ್ಸ್ ಸಹಿತ ಹಲವಾರು ಬಗೆಯ ವಿನೂತನ ಶೈಲಿಯ ಚಿನ್ನಾಭರಣಗಳು ಲಭ್ಯವಿದೆ. ಇಷ್ಟು ಮಾತ್ರವಲ್ಲದೆ ವಿವಿಧ ವಿನ್ಯಾಸದ ಪೆಂಡೆಂಟ್ ಗಳು, ಬೆಳ್ಳಿಯ ಆಭರಣಗಳು ಸಂಸ್ಥೆಯಲ್ಲಿ ಲಭ್ಯವಿದ್ದು ನಿಮ್ಮ ಆಯ್ಕೆಯ ಡಿಸೈನ್ ಗಳನ್ನು ಅತ್ಯಲ್ಪ ದಿನಗಳಲ್ಲಿ ಮಾಡಿಕೊಡುವ ವ್ಯವಸ್ಥೆಯನ್ನು ಸಂಸ್ಥೆ ಮಾಡುತ್ತಿದೆ.

`ಸಪ್ತ ಅಕ್ಷಯ’ ಆಭರಣ ಖರೀದಿ ಯೋಜನೆ:
ಇದು ಗ್ರಾಹಕರಿಗೆ ಉಪಕಾರಿಯಾಗಿರುವ ಒಂದು ಯೋಜನೆಯಾಗಿದೆ. ಗ್ರಾಹಕರು ಪ್ರತಿ ತಿಂಗಳು ತಮ್ಮ ಆದಾಯದಲ್ಲಿನ ಸಣ್ಣಮೊತ್ತವನ್ನು ವಿನಿಯೋಗಿಸಿ, ಪ್ರತಿ ವರುಷ ಬಂಗಾರವನ್ನು ಖರೀದಿಸುವ ಒಂದು ಉತ್ತಮ ಯೋಜನೆಯಾಗಿದೆ. ಹನ್ನೊಂದು ತಿಂಗಳ ಯೋಜನೆ ಇದಾಗಿದ್ದು, ಪ್ರತೀ ತಿಂಗಳು ೫೦೦ ರೂಪಾಯಿಗಿಂತ ಮೇಲ್ಪಟ್ಟು ಎಷ್ಟು ಹಣ ಬೇಕಾದರೂ ಪಾವತಿಸಬಹುದಾಗಿದೆ. ಆ ಮೊತ್ತದ ಚಿನ್ನಾಭರಣವನ್ನು ತಮ್ಮ ಅಕೌಂಟಿನಲ್ಲಿ ಜಮೆ ಮಾಡಲಾಗುತ್ತದೆ. ತಾವು ಪಾವತಿಸಿದ ಮೊತ್ತಕ್ಕೆ ಕೊನೆಯಲ್ಲಿ ಆವರ್ತನಾ ಪದ್ಧತಿಯಲ್ಲಿ ಬೋನಸ್ ಲಭಿಸಲಿದೆ.

ಸಪ್ತ ಜ್ಯುವೆಲ್ಸ್ ವಿಶೇಷತೆಗಳು:

*ವೆಡ್ಡಿಂಗ್ ಸೆಟ್ಟ್ ಗಳ ಬೃಹತ್ ಸಂಗ್ರಹ

*ವಿಶಾಲವಾದ ವಾಹನ ಪಾರ್ಕಿಂಗ್ ವ್ಯವಸ್ಥೆ

*ದೇವರ-ದೈವಗಳ ಆಭರಣಗಳು ಮತ್ತು ಪರಿಕರಗಳು ಲಭ್ಯ

*916 ಶುದ್ಧತೆಯ ಹೆಚ್.ಯು.ಐ.ಡಿ. ಹಾಲ್ ಮಾರ್ಕ್ ಹೊಂದಿರುವ ಚಿನ್ನಾಭರಣಗಳು

LEAVE A REPLY

Please enter your comment!
Please enter your name here