ಬಸ್‌ನಿಂದ ಇಳಿದ ವ್ಯಕ್ತಿ ಸ್ವಲ್ಪ ಹೊತ್ತಲ್ಲೇ ಕುಸಿದು ಮೃತ್ಯು

0

ಪುತ್ತೂರು: ಬಸ್‌ನಿಂದ ಇಳಿದ ಅಪರಿಚಿತ ವ್ಯಕ್ತಿಯೊಬ್ಬರು ಸ್ವಲ್ಪ ಹೊತ್ತು ನಡೆದು ಬಳಿಕ ಅಲ್ಲಿಯೇ ಕುಸಿದು ಬಿದ್ದು ಮೃತಪಟ್ಟ ಘಟನೆ ಆ.23ರಂದು ಮಧ್ಯಾಹ್ನ ಪುತ್ತೂರು ಲೋಕೋಪಯೋಗಿ ಇಲಾಖೆ ಕಚೇರಿಯ ಬಳಿಯ ರಸ್ತೆಯಲ್ಲಿ ನಡೆದಿದೆ.


ಲುಂಗಿ ಮಾತ್ರ ಧರಿಸಿದ್ದ ವ್ಯಕ್ತಿಯೊಬ್ಬರು ಚಿಣ್ಣರ ಪಾರ್ಕ್ ಬಳಿ ಬಸ್‌ನಿಂದ ಇಳಿದು ಲೋಕೋಪಯೋಗಿ ಇಲಾಖಾ ಕಚೇರಿ ಬಳಿ ನಡೆದು ಹೋಗುತಿದ್ದ ವೇಳೆ ಕುಸಿದು ಬಿದಿದ್ದಾರೆ. ರಸ್ತೆಯಲ್ಲಿ ಬಿದ್ದಿರುವ ವ್ಯಕ್ತಿಯನ್ನು ಅದೇ ದಾರಿಯಲ್ಲಿ ಹೋಗುತ್ತಿದ್ದ ಕಾಂಗ್ರೆಸ್ ಮುಖಂಡ ಕಾವು ಹೇಮನಾಥ ಶೆಟ್ಟಿಯವರು ಗಮನಿಸಿ ಕಾರನ್ನು ನಿಲ್ಲಿಸಿದರು. ಬಳಿಕದ ಬೆಳವಣಿಗೆಯಲ್ಲಿ ಆ ಸ್ಥಳದಲ್ಲಿ ಜನ ಗುಂಪು ಸೇರಿದರು. ಕೊನೆಗೆ ಆ್ಯಂಬುಲೆನ್ಸ್ ಮೂಲಕ ವ್ಯಕ್ತಿಯನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಲ್ಲಿ ವೈದ್ಯರು ಪರೀಕ್ಷಿಸಿ ವ್ಯಕ್ತಿ ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ. ಅಪರಿಚಿತ ವ್ಯಕ್ತಿಯ ಬಲ ಕೈಯ ತೋಳಿನಲ್ಲಿ ಪೂರ್ಣಿಮಾ ಎಸ್ ಎಂಬ ಅಚ್ಚು ಇದೆ, ಇದನ್ನು ಹೊರತು ಪಡಿಸಿ ಮೃತ ವ್ಯಕ್ತಿಯ ಗುರುತು ಪರಿಚಯ ಲಭ್ಯವಾಗಿಲ್ಲ.

LEAVE A REPLY

Please enter your comment!
Please enter your name here