ಇಡ್ಕಿದು ಸೇವಾ ಸಹಕಾರಿ ಸಂಘಕ್ಕೆ ಕೆನರಾ ಬ್ಯಾಂಕಿನ ಮುಖ್ಯ ಪ್ರಬಂಧಕರ ತಂಡ ಭೇಟಿ

0

ವಿಟ್ಲ: ನಬಾರ್ಡ್ ಪ್ರಾಯೋಜಿತ ಬ್ಯಾಂಕರ್‍ಸ್ ಇನಸ್ಟಿಟ್ಯೂಟ್ ಆಪ್ ರೂರಲ್ ಡೆವಲಪ್‌ಮೆಂಟ್(ಬಿ.ಐ.ಆರ್.ಡಿ.) ಇದರ ವತಿಯಿಂದ ಕೆನರಾ ಬ್ಯಾಂಕಿನ ಮುಖ್ಯ ಪ್ರಭಂಧಕರ 42 ಜನರ ತಂಡ ನಬಾರ್ಡ್ ಅಧಿಕಾರಿ ಶೀಲಾ ಭಂಡಾರ್‍ಕರ್ ನೇತೃತ್ವದಲ್ಲಿ ಇಡ್ಕಿದು ಸೇವಾ ಸಹಕಾರಿ ಸಂಘಕ್ಕೆ ಭೇಟಿ ನೀಡಿದರು. ಅಧಿಕಾರಿಗಳಾದ ಬೈದ್ಯನಾಥ್ ಸಿಂಗ್, ಅಮಿತಾಬ್ ಶಂಕರ್, ಇವರೊಂದಿಗೆ ತಂಡದ ಸದಸ್ಯರು ಸಂಘದ ಅಧ್ಯಕ್ಷ ಸುಧಾಕರ ಶೆಟ್ಟಿ ಬೀಡಿನಮಜಲು, ಉಪಾಧ್ಯಕ್ಷ ರಾಮ ಭಟ್ ನೀರಪಳಿಕೆ, ನಿರ್ಧೇಶಕರಾದ ಗೋಪಾಲಕೃಷ್ಣ ಭಟ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ ನಾಯ್ಕ್ ಇವರೊಂದಿಗೆ ಸಂವಾದ ನಡೆಸಿದರು. ಸಂಘದ 103 ವರ್ಷಗಳ ಅಭಿವೃದ್ದಿಯ ವಿವಿಧ ಹಂತಗಳು, ಸದಸ್ಯರ ಅಭಿವೃದ್ದಿಗಾಗಿ ಹಾಕಿಕೊಡಿರುವ ವಿವಿಧ ಯೋಜನೆಗಳು. ಭೂಮಿಕಾ ಮೂಲಕ ರೈತರ ಸಂಕಷ್ಟಗಳ ಪರಿಹಾರದ ಪ್ರಯತ್ನಗಳು. ಗ್ರಾಮಾಭಿವೃದ್ದಿಯ ಮಾದರಿಗಳು. ಸದಸ್ಯರ ಅನುಕೂಲಕ್ಕಾಗಿ ಸೂಪರ್ ಬಜಾರ್ ಮುಂತಾದ ವಿವರಣೆಗಳನ್ನು ಪಡೆದರು. ಸಂಘವು 2022-23 ವಾರ್ಷಿಕ ಸಾಲಿನಲ್ಲಿ 473.೦೦ ಕೋಟಿ ವ್ಯವಹಾರ ನಡೆಸಿ 1.2 ಕೋಟಿ ಲಾಭಾಂಶ ಪಡೆದು ಯಶಸ್ವಿಯಾಗಿ ಮುನ್ನಡೆಯುತ್ತಿರುವ ಬಗ್ಗೆ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂಧರ್ಭದಲ್ಲಿ ಸಂಘದ ನಿರ್ದೇಶಕರು, ಮಾಜಿ ಅಧ್ಯಕ್ಷ ಕೊಂಕೋಡಿ ಪದ್ಮನಾಭ ಉಪಸ್ಥತರಿದ್ದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ ನಾಯ್ಕ್ ಸ್ವಾಗತಿಸಿ, ಬೈದ್ಯನಾಥ್ ಸಿಂಗ್ ವಂದಿಸಿದರು.

LEAVE A REPLY

Please enter your comment!
Please enter your name here