ಆಲಡ್ಕ ಶ್ರೀ ಸದಾಶಿವ ದೇವಸ್ಥಾನದಲ್ಲಿ ವರಮಹಾಲಕ್ಷ್ಮಿ ಪೂಜೆ, ಪುಷ್ಪಕನ್ನಡಿ ಸಮರ್ಪಣಾ ಕಾರ್ಯಕ್ರಮ

0

ಪಾರದರ್ಶಕ ವ್ಯವಹಾರವಿದ್ದಲ್ಲಿ ದೇವರ ಆಶೀರ್ವಾದ ಮತ್ತು ಭಕ್ತರಿಂದ ವಿಶ್ವಾಸಗಳಿಸಲು ಸಾಧ್ಯ: ಹೇಮನಾಥ ಶೆಟ್ಟಿ


ಪುತ್ತೂರು: ಆಲಡ್ಕ ಸದಾಶಿವ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಒಂದೂವರೆ ಕೋಟಿಗೂ ಮಿಕ್ಕಿ ಅಭಿವೃದ್ದಿ ಕಾಮಗಾರಿಗಳು ನಡೆದಿದೆ, ದೇವಸ್ಥಾನದ ಜೀರ್ಣೋದ್ದಾರ ಸಂದರ್ಭದಲ್ಲಿ ಸಾವಿರಾರು ಭಕ್ತಾದಿಗಳು ದೇಣಿಗೆಯನ್ನು ನೀಡಿದ್ದರು, ದೇವಸ್ಥಾನದ ಆಯವ್ಯಯ ಪಾರದರ್ಶಕವಾಗಿ ನಡೆದಿದೆ ಎಂಬುದಕ್ಕೆ ಬ್ರಹ್ಮಕಲಶೋತ್ಸವ ಬಳಿಕ ಭಕ್ತರ ಸಂಖ್ಯೆ ಅಧಿಕವಾಗಿರುವುದೇ ಸಾಕ್ಷಿ ಎಂದು ಆಲಡ್ಕ ಶ್ರೀ ಸದಾಶಿವ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾದ ಕಾವು ಹೇಮನಾಥ ಶೆಟ್ಟಿ ಹೇಳಿದರು.


ಅವರು ದೇವಸ್ಥಾನದಲ್ಲಿ ನಡೆದ ವರಮಹಾಲಕ್ಷ್ಮೀ ಪೂಜೆ ಹಾಗೂ ದೇವರಿಗೆ ಪುಷ್ಪಕನ್ನಡಿ ಸಮರ್ಪಣಾ ಕಾರ್ಯಕ್ರಮದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ದೇವಸ್ಥಾನದ ಆಯವ್ಯಯ ಪಾರದರ್ಶಕವಾಗಿರಬೇಕು ಹಾಗಿದ್ದಲ್ಲಿ ಮತ್ರ ದೇವರ ಆಶೀರ್ವಾದ ಮತ್ತು ಭಕ್ತರ ವಿಶ್ವಾಸ ಗಳಿಸಲು ಸಾಧ್ಯವಾಗುತ್ತದೆ. ವರ್ಷದಿಂದ ವರ್ಷಕ್ಕೆ ಸದಾಶಿವ ದೇವರ ಭಕ್ತರ ಸಂಖ್ಯೆ ವೃದ್ದಿಸುತ್ತಲೇ ಇರುವುದರಿಂದ ಸೇವೆ ಮಾಡಿದ ನಮಗೆಲ್ಲರಿಗೂ ದೇವರ ಆಶೀರ್ವಾದ ಭಕ್ತರ ರೂಪದಲ್ಲಿ ಬಾಸವಾಗುತ್ತಿದೆ ಎಂದು ಹೇಳಿದರು.

ದೇವಸ್ಥಾನದಲ್ಲಿ ಅರ್ಚಕರಿಂದ ನಿತ್ಯ ಪೂಜೆ ನಡೆಯುತ್ತಿದೆ, ಬಾರಿ ಸಂಖ್ಯೆಯಲ್ಲಿ ಭಕ್ತರು ನಿತ್ಯ ಪೂಜೆಯಲ್ಲಿ ಭಾಗವಹಿಸುತ್ತಿದ್ದಾರೆ. ಒಂದು ಕಾಲದಲ್ಲಿ ನೆನೆಗುದಿಗೆ ಬಿದ್ದಿದ್ದ ದೇವಸ್ಥಾನ ಇಂದು ಜಿಲ್ಲೆಯ ಜನತರ ಗುರುತಿಸುವ ಮಟ್ಟಕ್ಕೆ ಬೆಳದಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಚಾರವಾಗಿದೆ ಎಂದು ಹೇಳಿದ ಅವರು ಇಲ್ಲಿ ನಡೆಯುವ ವರಮಹಾ ಲಕ್ಷ್ಮಿ ಪೂಜೆಗೆ ಅತ್ಯಧಿಕ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವರ ಆಶೀರ್ವಾದ ಪಡೆದುಕೊಳ್ಳುತ್ತಿರುವುದು ನಮಗೆಲ್ಲರಿಗೂ ಸಾರ್ಥಕತೆಯನ್ನು ತಂದಿದೆ ಎಂದು ಹೇಳಿದರು.


ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಅರುಣ್‌ಕುಮಾರ್ ಆಳ್ವ ಬೋಳೋಡಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.ದೇವಸ್ಥಾನದ ಅರ್ಚಕರಾದ ಸುಬ್ರಹ್ಮಣ್ಯ ಎನ್ ಕೆ ಯವರು ವರಮಹಾಲಕ್ಷ್ಮೀ ಪೂಜೆಯ ಮಹತ್ವದ ಬಗ್ಗೆ ಭಕ್ತರಿಗೆ ಪ್ರವಚನ ನೀಡಿದರು.


ವೇದಿಕೆಯಲ್ಲಿ ಜೀರ್ಣೋದ್ದಾರ ಸಮಿತಿ ಅಧ್ಯಕ್ಷರಾದ ಶೀನಪ್ಪ ರೈ ಕೊಡೆಂಕಿರಿ, ಆಲಡ್ಕ ಶ್ರೀ ಸದಾಶಿವ ಭಜನಾಮಂಡಳಿಯ ಅಧ್ಯಕ್ಷರಾದ ಶಂಕರ್ ಕಡ್ಯ, ಮಾಜಿ ವ್ಯವಸ್ಥಪನಾ ಸಮಿತಿ ಸದಸ್ಯೆ ಮಾಲತಿ ಬೈಂಕಿ ರೈ, ವರಮಹಾಲಕ್ಷ್ಮೀ ಪೂಜಾ ಸಮಿತಿ ಅಧ್ಯಕ್ಷೆ ಜಯಂತಿ ವಿಠಲ್ ರೈ, ಮಾಜಿ ವರಮಹಾಲಕ್ಷ್ಮಿ ಪೂಜಾ ಸಮಿತಿ ಅಧ್ಯಕ್ಷೆ ವೀಣಾ ಕಿಟ್ಟಣ್ಣ ರೈ ಬೋಳೋಡಿ, ಕುಕ್ಕಿನಡ್ಕ ಸ್ರೀ ಸುಬ್ರಯ ದೇವಸ್ಥಾನದ ಭಜನಾಮಂಡಳಿ ಅಧ್ಯಕ್ಷೆ ಲಲಿತಾ ಪಜಿಮಣ್ಣು ಸೇರಿದಂತೆ ವ್ಯವಸ್ಥಾಪನಾ ಸಮಿತಿ ಪದಾಧಿಕಾರಿಗಳು, ಸದಸ್ಯರು, ಆಲಡ್ಕ ಸದಾಶಿವ ಭಜನಾಮಂಡಳಿಯ ಪದಾಧಿಕಾರಿಗಳು ಮತ್ತು ಸದಸ್ಯರು ಹಾಗೂ ಆಲಡ್ಕ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು ಹಾಗೂ ಭಕ್ತ ವೃಂದ ಉಪಸ್ತಿತರಿದ್ದರು. ಸುಮಾರು ೫೦೦ ಕ್ಕೂ ಹೆಚ್ಚು ಮಂದಿ ಪೂಜಾ ಕಾರ್ಯದಲ್ಲಿ ಭಾಗವಹಿಸಿದ್ದರು. ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ದನಂಜಯಕುಲಾಲ್ ಕಂಪ ಸ್ವಾಗತಿಸಿ, ವರಮಹಾಲಕ್ಷ್ಮೀ ಪೂಜಾ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರಜ್ಞಾ ರವಿರಾಜ್ ರೈ ಗುತ್ತು ವಂದಿಸಿದರು.

LEAVE A REPLY

Please enter your comment!
Please enter your name here