ಪುಣಚ ಶ್ರೀದೇವಿ ವಿದ್ಯಾಕೇಂದ್ರದಲ್ಲಿ ಜಿಲ್ಲಾ ಪ್ರಾಂತ ಮಟ್ಟದ ಕರಾಟೆ ಸ್ಪರ್ಧೆಗೆ ಚಾಲನೆ

0

ಪುಣಚ: ಕರ್ನಾಟಕ ವಿದ್ಯಾಭಾರತಿ ದ.ಕ ಮತ್ತು ವಿವೇಕಾನಂದ ವಿದ್ಯಾವರ್ಧಕ ಸಂಘದ ವತಿಯಿಂದ ಪುಣಚ ದೇವಿನಗರ ಶ್ರೀದೇವಿ ವಿದ್ಯಾ ಕೇಂದ್ರದಲ್ಲಿ ಜಿಲ್ಲಾ ಹಾಗೂ ಪ್ರಾಂತ ಮಟ್ಟದ 2 ದಿನ ನಡೆಯುವ ಕರಾಟೆ ಸ್ಪರ್ಧೆಯು ಆ.26ರಂದು ಚಾಲನೆಗೊಂಡಿತು.


ಮಹಿಷಮರ್ದಿನಿ ದೇವಸ್ಥಾನದ ಆಡಳಿತ ಸಮಿತಿ ಉಪಾಧ್ಯಕ್ಷ ಮಾರಪ್ಪ ಶೆಟ್ಟಿ ಬೈಲುಗುತ್ತು, ದೀಪ ಬೆಳಗಿಸಿ ಉದ್ಘಾಟಿಸಿ, ಮಾತನಾಡಿ ಜಿಲ್ಲಾಮಟ್ಟದ ಹಾಗೂ ಪ್ರಾಂತ ಮಟ್ಟದ ಕರಾಟೆ ಸ್ಪರ್ಧೆ ನಡೆಯುತ್ತಿರುವುದು ಬಹಳ ಹೆಮ್ಮೆಯ ವಿಷಯ ಇಂತಹ ಕ್ರೀಡೆಗಳಿಗೆ ಉತ್ತಮ ಪ್ರೋತ್ಸಾಹ ಬರಲಿ ಎಂದು ಶುಭ ಹಾರೈಸಿದರು.

ಅಧ್ಯಕ್ಷತೆ ವಹಿಸಿದ್ದ ದ.ಕ ವಿದ್ಯಾಭಾರತಿ ಅಧ್ಯಕ್ಷ ಲೋಕಯ್ಯ ಡಿ, ಮುಖ್ಯ ಅತಿಥಿಗಳಾಗಿ ಮಂಗಳೂರಿನ ಉದ್ಯಮಿ ರಾಕೇಶ್ ಕುಮಾರ್ ಶೆಟ್ಟಿ, ವಿದ್ಯಾಭಾರತಿ ದ.ಕ ಜಿಲ್ಲಾ ಖೇಲ್ ಪ್ರಮುಖ್ ಕರುಣಾಕರ, ಶ್ರೀದೇವಿ ವಿದ್ಯಾ ಕೇಂದ್ರದ ಸಂಚಾಲಕ ಜಯಶ್ಯಾಂ ನೀರ್ಕಜೆರವರು ಮಾತನಾಡಿ ಶುಭ ಹಾರೈಸಿದರು. ದ.ಕ ಕರಾಟೆ ಅಸೋಸಿಯೇಷನ್ ಅಧ್ಯಕ್ಷ ಈಶ್ವರ ಕಟೀಲ್, ದ.ಕ ಟೆಕ್ನಿಕಲ್ ಡೈರೆಕ್ಟರ್ ವಿಕ್ಟರ್ ಡಿ.ಸೋಜಾ, ಕರಾಟೆ ತರಬೇತಿ ಶಿಕ್ಷಕ ದಿನೇಶ್ ನೀರ್ಕಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀದೇವಿ ವಿದ್ಯಾ ಕೇಂದ್ರದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಮುಖ್ಯ ಶಿಕ್ಷಕಿ ರಜನಿ ಸ್ವಾಗತಿಸಿ, ಶಿಕ್ಷಕಿ ಶೀಲಶ್ರೀ ವಂದಿಸಿದರು. ಶಿಕ್ಷಕಿ ಶ್ವೇತಾ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here