ಪುತ್ತೂರು: ಮಂಗಳೂರಿನ ಹಂಪನಕಟ್ಟೆ ಯಲ್ಲಿರುವ ನಲಪ್ಪಾಡ್ ಅಪ್ಸರ ಛೇಂಬರ್‍ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪರಿವಾರ ಕ್ರೆಡಿಟ್ ಕೋ- ಓಪರೇಟಿವ್ ಸೊಸೈಟಿಯು ಸ್ಥಳಾಂತರಗೊಂಡು ಎನ್‌ಫೋರ್ಸ್ ಲೇಜೋರಿನ್ ಕಾಂಪ್ಲೆಕ್ಸ್, ನಂದಿಗುಡ್ಡೆ ಬಸ್ ನಿಲ್ದಾಣದ ಹತ್ತಿರ, ಮಂಗಳೂರಿನಲ್ಲಿ ಶುಭಾರಂಭಗೊಳ್ಳಲಿದೆ ಎಂದು ಸೊಸೈಟಿಯ ಅಧ್ಯಕ್ಷ ಸಂತೋಷ್ ಕುಮಾರ್ ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪರಿವಾರ ಕ್ರೆಡಿಟ್ ಕೋ ಓಪರೇಟಿವ್ ಸೊಸೈಟಿ ಕಳೆದ 23 ವರ್ಷಗಳಿಂದ ವ್ಯವಹಾರ ನಡೆಸಿಕೊಂಡು ಬರುತ್ತಿದ್ದು 4 ಶಾಖೆಗಳನ್ನು ಹೊಂದಿದೆ. ಪ್ರಧಾನ ಕಚೇರಿ ಪುತ್ತೂರಿನಲ್ಲಿ ವ್ಯವಹರಿಸುತ್ತಿದೆ. ಮಂಗಳೂರು, ಕಡಬ, ಕೊಕ್ಕಡ, ಸುಳ್ಯದಲ್ಲಿ ಶಾಖೆಯಿದ್ದು ಆಡಿಟ್ ವರ್ಗೀಕರಣದಲ್ಲಿ ಎ ತರಗತಿ ಹೊಂದಿದ್ದು ವರ್ಷದಿಂದ ವರ್ಷಕ್ಕೆ ಪ್ರಗತಿ ಪಥದಲ್ಲಿ ಮುಂದುವರಿಸಿಕೊಂಡು ಬಂದಿರುವುದಾಗಿ ತಿಳಿಸಿದರು.
ಉದ್ಘಾಟನಾ ಸಮಾರಂಭವು ಬೆಳಗ್ಗೆ ಗಂಟೆ 11.30 ಕ್ಕೆ ನಡೆಯಲಿದ್ದು, ಶ್ರೀ ಗೋಪಾಲಕೃಷ್ಣ ದೇವಸ್ಥಾನ ಶಕ್ತಿನಗರ ಇದರ ಆಡಳಿತ ಮುಕ್ತೇಸರ ಕೆ.ಸಿ. ನಾಯಕ್ ರವರು ಸಂಸ್ಥೆಯನ್ನು ಉದ್ಘಾಟಿಸಲಿದ್ದಾರೆ. ಪರಿವಾರ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಸಂತೋಷ್ ಕುಮಾರ್ ಕೆ . ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅಬ್ಯಾಗತರಾಗಿ ಮಂಗಳೂರು ಮಹಾನಗರ ಪಾಲಿಕೆಯ 59 ಅತ್ತಾವರ ವಾರ್ಡ್‌ನ ಕಾರ್ಪೋರೇಟರ್ ಶೈಲೇಶ್ ಶೆಟ್ಟಿ, ಮಂಗಳೂರು ಮಹಾನಗರ ಪಾಲಿಕೆಯ 59 ಜೆಪ್ಪುಬಪ್ಪಲ್ ವಾರ್ಡ್‌ನ ಕಾರ್ಪೋರೇಟರ್ ಭರತ್ ಕುಮಾರ್ ಮತ್ತು ಎನ್‌ಫೋರ್ಸ್ ಲೇಜೋರಿನ್ ಕಾಂಪ್ಲೆಕ್ಸ್, ನಂದಿಗುಡ್ಡೆ ಇದರ ಮಾಲಕರಾದ ಸುರೇಶ್ ಶೆಟ್ಟಿ ಉಪಸ್ಥಿತರಿರುತ್ತಾರೆ ಎಂದು ಮುಖ್ಯ ಕಾರ್ಯದರ್ಶಿ ಸುಧಾಕರ್ ಕೆ.ಪಿ .ವಿವರ ನೀಡಿದರು.
ಸಂಸ್ಥೆಯಲ್ಲಿ ಆಕರ್ಷಕ ಬಡ್ಡಿಯೊಂದಿಗೆ ವಿವಿಧ ಠೇವಣಿಗಳನ್ನು ಸ್ವೀಕರಿಸಲಾಗುವುದು. ಅಲ್ಲದೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯಗಳು ದೊರಕುವುದು. ಕಳೆದ ಅವಧಿಯಲ್ಲಿ 2022-23 ನೇ ಸಾಲಿನಲ್ಲಿ ನಮ್ಮ ಸಂಸ್ಥೆಯ ವತಿಯಿಂದ ಶೇ. 14% ಡಿವಿಡೆಂಡ್ ಸದಸ್ಯರಿಗೆ ವಿತರಿಸಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕರಾದ ಕೊಡಂಗೆ ಬಾಲಕೃಷ್ಣ ನಾಯ್ಕ್ ತಿಳಿಸಿದರು, ನಿರ್ದೇಶಕಿ ಗುಲಾಬಿ ಕೆ. ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಶುಭಾರಂಭದ ಪ್ರಯುಕ್ತ ಮಂಗಳೂರು ಶಾಖೆಯಲ್ಲಿ ಠೇವಣಿಗಳ ಮೇಲೆ ವಿಶೇಷವಾದ ಕೊಡುಗೆಗಳನ್ನು ನೀಡಲಾಗುತ್ತಿದೆ.
ಸೆ.30ರ ಒಳಗೆ ಒಂದು ವರ್ಷಕ್ಕೆ ಮೇಲ್ಪಟ್ಟ ಠೇವಣಿಗಳಿಗೆ ಶೇ 9% ಹಾಗೂ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಶೇ. 9.5%, ದ್ವಿಚಕ್ರ ಮತ್ತು ಕಾರು ಸಾಲದ ಬಡ್ಡಿ ದರ ಶೇ. 11% ರಂತೆ ನೀಡಲಾಗುವುದು.