ಸಂಸ್ಕಾರ ಭಾರತೀ ಅಖಿಲ ಭಾರತೀಯ ಸಂಘಟನಾ ಕಾರ್ಯದರ್ಶಿ ಶ್ರೀ ಅಭಿಜಿತ್ ಗೋಖಲೆಯವರ ಸಂವಾದ ಕಾರ್ಯಕ್ರಮ
ಪುತ್ತೂರು: ಭಾರತೀಯ ಸಂಸ್ಕೃತಿಯಲ್ಲಿ ಭೂಮಿಯನ್ನು ಮಾತೆಯ ಸ್ಥಾನದಲ್ಲಿರಿಸಿ ಪೂಜಿಸುವುದರ ಜೊತೆಗೆ ದೇಶದಲ್ಲಿ ಹರಿಯುವ ಪವಿತ್ರ ಜೀವ ನದಿಗಳೆಲ್ಲವೂ ಹೆಣ್ಣಿನ ಹೆಸರಿನಿಂದಲೇ ಕರೆಯಲ್ಪಡುತ್ತವೆ. ಚಂದ್ರಯಾನ-3 ಯಶಸ್ಸಿನಲ್ಲಿ ಕೂಡಾ ವೈಜ್ಞಾನಿಕ ನೆಲೆಯಲ್ಲಿ ಭಾವನಾತ್ಮಕ ಬೆಸುಗೆಯನ್ನು ಕಾಣಬಹುದು. ನಾವು ಭೂಮಾತೆ ಮತ್ತು ಚಂದಿರನಿಗೆ ಸೋದರಿ ಹಾಗೂ ಸೋದರ ಬಾಂಧವ್ಯವನ್ನು ಕಲ್ಪಿಸುತ್ತಾ ಚಂದಿರನನ್ನು ಮಾಮನೆಂದು ಕರೆದೆವು ಎಂದು ಸಂಸ್ಕಾರ ಭಾರತೀ ಅಖಿಲ ಭಾರತೀಯ ಸಂಘಟನಾ ಕಾರ್ಯದರ್ಶಿ ಅಭಿಜಿತ್ ಗೋಖಲೆ ನುಡಿದರು.
ಸಂಸ್ಕಾರ ಭಾರತೀ ದ.ಕ.ಜಿಲ್ಲಾ ಪುತ್ತೂರು ತಾಲೂಕು ಘಟಕವು ನರೇಂದ್ರ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಆ.24ರಂದು ಮಾತನಾಡಿದರು. ಚಂದ್ರಯಾನವನ್ನು ಸೋದರಿಯು ಸೋದರನ ಬಳಿ ರಾಖಿ ಕಟ್ಟಿಸಿಕೊಳ್ಳಲು ತವಕದಿಂದ ಸಾಗಿದಂತೆ ಬಣ್ಣಿಸುತ್ತಾ ಸತ್ಯಂ ಶಿವಂ ಸುಂದರಂ ಎಂಬ ಸುಂದರ ಉಕ್ತಿಯ ಭಾವಾರ್ಥವನ್ನು ವಿಶೇಷ ರೀತಿಯಲ್ಲಿ ಬಣ್ಣಿಸಿದರು. ಅವರು ಮುಂದುವರಿಸುತ್ತಾ, ಚಂದ್ರಯಾನದಲ್ಲಿ ಬಳಕೆಯಾದ ಎಲ್ಲಾ ಭೌತಿಕ ಭಾಗಗಳೂ ಸತ್ಯವೇ..ಅದುವೇ ಸತ್ಯಂ. ಶಿವನ ಶಿರದಲ್ಲಿ ರಾರಾಜಿಸುವ ಚಂದಿರನ ಮೇಲೆ ನೌಕೆಯು ಇಳಿದರೂ ಅವನ ಅಧಿಪತಿ ಆ ಪರಶಿವನೇ ಆಗಿರುವನು…ಅದುವೇ ಶಿವಂ. ಇವೆಲ್ಲವನ್ನೂ ಯಾವುದೇ ಕಲೆಯ ರೂಪದಲ್ಲಿ ಭಾವನಾತ್ಮಕವಾಗಿ ಕಾಣುವುದೇ ಸುಂದರ ಅದುವೇ ಸುಂದರಂ ಎಂದರು.
ಸಂಸ್ಕಾರ ಭಾರತಿಯ ಜಿಲ್ಲಾ ಉಪಾಧ್ಯಕ್ಷೆ ರೂಪಲೇಖಾ ಅತಿಥಿಗಳಿಗೆ ಸ್ಮರಣಿಕೆಯನ್ನಿತ್ತು ಗೌರವಿಸಿ ಮಾತನಾಡಿ ನಿರಂತರವಾಗಿ ಹೊಸತನದತ್ತ ತೆರೆದುಕೊಳ್ಳುವ ಸಂಸ್ಕೃತಿಯು ದಾರಿ ತಪ್ಪದಂತೆ ಅದರೊಂದಿಗೆ ಹಳೆಯ ಸಂಸ್ಕೃತಿಯನ್ನೂ ಮೇಳೈಸಿ ಬೆಸೆದು ಹೊಸ ರೂಪ ಕೊಡುವಲ್ಲಿ ಸಂಸ್ಕಾರ ಭಾರತಿಯು ಮಹತ್ವದ ಪಾತ್ರ ವಹಿಸಬೇಕಾಗಿದೆ ಎಂಬುದಾಗಿ ಸಲಹೆಯನ್ನಿತ್ತರು.
ಕಾರ್ಯಕ್ರಮದಲ್ಲಿ ಸಂಸ್ಕಾರ ಭಾರತೀ ಪ್ರಾಂತ ಉಪಾಧ್ಯಕ್ಷ ಚಂದ್ರಶೇಖರ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿಗಳಾದ ಮಾಧವ ಭಂಡಾರಿ, ಸಹ ಕಾರ್ಯದರ್ಶಿಗಳಾದ ನಾಗರಾಜ ಶೆಟ್ಟಿ,
ದ.ಕ. ಜಿಲ್ಲೆಯ ಪುತ್ತೂರು ಘಟಕದ ಸಂಘಟನಾ ಕಾರ್ಯದರ್ಶಿ ವಿದ್ವಾನ್ ದೀಪಕ್ ಕುಮಾರ್, ವಿದುಷಿ ನಯನಾ ವಿ. ರೈ, ವಿದುಷಿ ಪ್ರೀತಿಕಲಾ, ವಿದ್ವಾನ್ ಗೋಪಾಲಕೃಷ್ಣ,
ಕೃಷ್ಣವೇಣಿ ಮುಳಿಯ, ಶಂಕರಿ ಶರ್ಮ,ಆಶಾ ರಾವ್ ಉಪಸ್ಥಿತರಿದ್ದರು.