ಕೆಮ್ಮಾರ ಸರಕಾರಿ ಶಾಲೆಯಲ್ಲಿ ಉಪ್ಪಿನಂಗಡಿ ವಲಯ ಮಟ್ಟದ ಪ್ರಾಥಮಿಕ ಶಾಲಾ ಮಕ್ಕಳ ಕಬಡ್ಡಿ ಕ್ರೀಡಾಕೂಟ

0

ಉಪ್ಪಿನಂಗಡಿ: ;ಕೆಮ್ಮಾರ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಪ್ಪಿನಂಗಡಿ ವಲಯ ಮಟ್ಟದ ಪ್ರಾಥಮಿಕ ಶಾಲಾ ಬಾಲಕ/ಬಾಲಕಿಯರ ಕಬಡ್ಡಿ ಕ್ರೀಡಾಕೂಟವು ಆ.28 ರಂದು ಅದ್ದೂರಿಯಾಗಿ ನಡೆಯಿತು.


ಕಾರ್ಯಕ್ರಮದ ಉದ್ಘಾಟನೆಯನ್ನು ಗ್ರಾಮ ಪಂಚಾಯತ್ ಸದಸ್ಯೆ ವಾರಿಜಾಕ್ಷಿ ಬಡ್ಡಮೆ ನೆರವೇರಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ಅಝೀಝ್ ಬಿ.ಕೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕೆಮ್ಮಾರ ಶಾಲಾ ಮುಖ್ಯೋಪಾಧ್ಯಾಯಿನಿ ಜಯಶ್ರೀ ಎಂ. ಸ್ವಾಗತಿಸಿ ಮಾತನಾಡಿ ವಿದ್ಯಾರ್ಥಿಗಳ ದೈಹಿಕ ಕ್ಷಮತೆಯನ್ನು ಹೆಚ್ಚಿಸಲು ಮತ್ತು ಮಕ್ಕಳ ಆರೋಗ್ಯವು ಅದು ರಾಷ್ಟ್ರದ ಶಕ್ತಿಯಾಗಿ ಬೆಳೆಯಲಿದೆ ಎಂದು ಶುಭಹಾರೈಸಿದರು.
ಉಪ್ಪಿನಂಗಡಿ ವಲಯ ಕ್ರೀಡಾಕೂಟದ ನೂಡಲ್ ಅಧಿಕಾರಿ ಚಕ್ರಪಾಣಿ, ಜಾನ್ ಕೆ.ಪಿ, ಕಡಬ ತಾಲೂಕಿನ ದೈಹಿಕ ಶಿಕ್ಷಣ ಶಿಕ್ಷಕ ಸಂಘದ ಅಧ್ಯಕ್ಷ ಬಾಲಕೃಷ್ಣ ಗೌಡ ಕ್ರೀಡೆಯ ಬಗ್ಗೆ ಸಂದರ್ಭೋಚಿತವಾಗಿ ಮಾತನಾಡಿದರು.
ವೇದಿಕೆಯಲ್ಲಿ ಹಿರೆಬಂಡಾಡಿ ಗ್ರಾಮ ಪಂಚಾಯತ್ ಸದಸ್ಯರಾದ ಹೇಮಂತ್ ಮೈತಳಿಕೆ, ವಾರಿಜಾಕ್ಷಿ, ಶಾಲಾ ನಿವೃತ್ತ ಮುಖ್ಯ ಶಿಕ್ಷಕ ಕುಶಾಲಪ್ಪ ಗೌಡ ಉಪಸ್ಥಿತರಿದ್ದರು.
ವಿಶೇಷವಾಗಿ ನಿರ್ಮಿಸಿದ ಕ್ರೀಡಾಂಗಣದಲ್ಲಿ ವಿವಿಧ ಶಾಲಾ ಬಾಲಕ/ಬಾಲಕಿಯರ ಕಬಡ್ಡಿ ಪಂದ್ಯಾಕೂಟ ನಡೆಯಿತು.
ಪಂದ್ಯಾಕೂಟದ ವೀಕ್ಷಣೆಯಲ್ಲಿ ಹಿರೆಬಂಡಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಸದಾಶಿವ ಶೆಟ್ಟಿ, ಮಾಜಿ ಅಧ್ಯಕ್ಷ ಹಮ್ಮಬ್ಬ ಶೌಕತ್ ಅಲಿ ಮತ್ತು ಪಂಚಾಯತ್ ಸದಸ್ಯರು ಭಾಗವಹಿಸಿ ಶುಭ ಹಾರೈಸಿದರು. ವೈದ್ಯಕೀಯ ಸಿಬ್ಬಂದಿಗಳಾದ ಯಕ್ಷಿತ ಮತ್ತು ದಿವ್ಯ ಜೊತೆಗಿದ್ದು ಸಹಕರಿಸಿದರು.
ಸೆಮಿಫೈನಲ್ ಹಂತದಲ್ಲಿ ಕೆಮ್ಮಾರ ಶಾಲಾ ತಂಡವನ್ನು ತೀವ್ರ ಪೈಪೋಟಿಯಿಂದ ಮಣಿಸಿದ ಬೆಳ್ಳಿಪಾಡಿ ಶಾಲಾ ತಂಡ ಫೈನಲ್ ತಲುಪಿತು.
ಕೊನೆಯಲ್ಲಿ ಬಾಲಕರ ವಿಭಾಗದಲ್ಲಿ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ವಲಾಲ್ ಪ್ರಥಮ, ಬೆಳ್ಳಿಪ್ಪಾಡಿ ಸರಕಾರಿ ಶಾಲೆ ದ್ವಿತೀಯ. ಬಾಲಕಿಯರ ವಿಭಾಗದಲ್ಲಿ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಬೆಳ್ಳಿಪ್ಪಾಡಿ ಪ್ರಥಮ, ಬಾಲಕಿಯ ವಿಭಾಗದಲ್ಲಿ ವಳಾಲು ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ದ್ವಿತೀಯ ಸ್ಥಾನವನ್ನು ಗೆದ್ದು ಎರಡು ಶಾಲೆಗಳು ಸಮಾನವಾಗಿ ಹಂಚಿಕೊಂಡಿತು.
ಸಮಾರೋಪ ಸಮಾರಂಭ ಕಾರ್ಯಕ್ರಮವನ್ನು ಶಾಲಾಭಿವೃಧ್ದಿ ಸಮಿತಿ ಅಧ್ಯಕ್ಷ ಅಝೀಝ್ ಬಿ.ಕೆ ಅಧ್ಯಕ್ಷತೆಯಲ್ಲಿ ನೆರವೇರಿತು ಮತ್ತು ವಿಜೇತ ತಂಡಗಳಿಗೆ ಶುಭಹಾರೈಸಿದರು. ವೇದಿಕೆಯಲ್ಲಿ ಉಪಾಧ್ಯಕ್ಷೆ ತೇಜಾವತಿ, ಎಸ್‌ಡಿಎಂಸಿ ಸದಸ್ಯರಾದ ವಾಮನ ಬರಮೇಲು, ಪದ್ಮನಾಭ ಶೆಟ್ಟಿ ನಡುಬಡಿಲ, ಮಹಮ್ಮದ್ ಶರೀಫ್, ಸುಮಯ್ಯ, ಮಾಜಿ ಅಧ್ಯಕ್ಷೆ ಸೆಲಿಕತ್, ಕೆಮ್ಮಾರ ಶಾಲಾ ಮುಖ್ಯೋಪಾಧ್ಯಾಯಿನಿ ಜಯಶ್ರಿ ಎಂ. ದೈಹಿಕ ಶಿಕ್ಷಕರಾದ ಸಂತೋಷ್, ನೇತ್ರಾವತಿ, ವಾರಿಜ, ಅಬ್ದುಲ್ ಗಫ್ಫಾರ್ ಕೆಮ್ಮಾರ, ವಕೀಲರಾದ ಕಬೀರ್ ಕೆಮ್ಮಾರ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಕೆಮ್ಮಾರ ಶಾಲಾ ಶಿಕ್ಷಕಿ ಲೀನಾ ಲಸ್ರಾಡೊ ಮತ್ತು ಗೌರವ ಶಿಕ್ಷಕ ಜುನೈದ್ ಕೆಮ್ಮಾರ ನಿರೂಪಿಸಿದರು. ಕೆಮ್ಮಾರ ಶಾಲೆಯ ಶಿಕ್ಷಕರಾದ ವೆಂಕಟರಮಣ ಭಟ್, ಸುಮನ ಕೆ‌.ಎನ್, ಮೆಹನಾಝ್, ದಿವ್ಯ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಕೆಮ್ಮಾರ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಮೋಹನಾಂಗಿ ವಂದಿಸಿದರು.

LEAVE A REPLY

Please enter your comment!
Please enter your name here