ನರೇಂದ್ರ ಪ.ಪೂ.ಕಾಲೇಜಿನಲ್ಲಿ ಓಣಂ ಆಚರಣೆ

0

ಪುತ್ತೂರು: ಓಣಂ ಹಬ್ಬವನ್ನು ಕೇರಳ ಮತ್ತು ಅದರ ಅದ್ಭುತ ಸಂಸ್ಕೃತಿ ಮತ್ತು ಸಂಪ್ರದಾಯಗಳ ವಿಜೃಂಭಣೆಯ ಮತ್ತು ಸಂತೋಷದಾಯಕ ಆಚರಣೆ ಎಂದು ಹೇಳಬಹುದು .ಕೇರಳದ ಸಂಸ್ಕೃತಿ ಮತ್ತು ಸಾಂಪ್ರದಾಯಿಕ ಆಚರಣೆ ಈ ಓಣಂ.ಬಲಿ ರಾಜನು ಓಣಂ ಹಬ್ಬದ ದಿನದಂದು ತನ್ನ ಪ್ರಜೆಗಳನ್ನು ಭೇಟಿ ಮಾಡಲು ಮತ್ತು ಅವರ ಎಲ್ಲಾ ತೊಂದರೆಗಳನ್ನು ತೆಗೆದು ಹಾಕಲು ಬರುತ್ತಾನೆ ಎಂಬ ನಂಬಿಕೆಯಿದೆ.ಉತ್ತಮ ಫಸಲು ಮತ್ತು ಇಳುವರಿಗಾಗಿ ಓಣಂ ಹಬ್ಬವನ್ನು ಆಚರಿಸಲಾಗುತ್ತದೆ.ವರ್ಷದ ಮೊದಲ ಪೈರು ಅಥವಾ ಬೆಳೆಯ ಖುಷಿಯನ್ನು ಓಣಂ ಹಬ್ಬದ ಸಂದರ್ಭದಲ್ಲಿ ಆಚರಿಸಲಾಗುತ್ತದೆ. ಹೀಗಾಗಿ, ರೈತ ಸಮುದಾಯ ಸೇರಿದಂತೆ ಕೇರಳದ ಎಲ್ಲರಿಗೂ ಇದು ಬಹಳ ದೊಡ್ಡ ಹಬ್ಬ. ಹೊಸತನ,ವೈವಿಧ್ಯತೆಯನ್ನು ಹೊಂದಿರುವ ಈ ಆಚರಣೆಯನ್ನು ಸುಗ್ಗಿಯ ಹಬ್ಬ ಎಂದೂ ಕರೆಯಲಾಗುತ್ತದೆ. ಎಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ಆಶಾ ಬೆಳ್ಳಾರೆ ಹೇಳಿದರು.


ನರೇಂದ್ರ ಪ.ಪೂ.ಕಾಲೇಜಿನಲ್ಲಿ ನಡೆದ ಓಣಂ ಆಚರಣೆಯ ಸಂದರ್ಭದಲ್ಲಿ ಅವರು ಮಾತನಾಡಿದರು.ಓಣಂ ಹಬ್ಬದ ಆಚರಣೆಯ ವಿಶೇಷತೆ ಮತ್ತು ಮಹತ್ವವನ್ನು ತಿಳಿಸಿದರು.
ಓಣಂ ಆಚರಣೆಯ ಪ್ರಯುಕ್ತ ಸಾಂಪ್ರದಾಯಿಕ ಜಾನಪದ ನೃತ್ಯವನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು.


ವಿದ್ಯಾರ್ಥಿಗಳು ಕಾಲೇಜಿನ ಮುಂಭಾಗದಲ್ಲಿ ಪೂಕಳಂ ನಿರ್ಮಿಸಿ ಜ್ಯೋತಿ ಬೆಳಗಿದರು.ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರಸಾದ್ ಶ್ಯಾನಭಾಗ್ ಮತ್ತು ಎಲ್ಲಾ ಉಪನ್ಯಾಸಕರು ಉಪಸ್ಥಿತರಿದ್ದರು.ಕಾರ್‍ಯಕ್ರಮದಲ್ಲಿ ಆಂಗ್ಲ ಭಾಷ ಉಪನ್ಯಾಸಕರಾದ ಅನಘಾ ಸ್ವಾಗತಿಸಿ,ವಂದಿಸಿದರು.

LEAVE A REPLY

Please enter your comment!
Please enter your name here