ಆ.31:ಬಿಲ್ಲವ ಸಂಘದಿಂದ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮೀಜಿಯವರ 169ನೇ ಜನ್ಮದಿನಾಚರಣೆ

0

ಪುತ್ತೂರು: ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಪುತ್ತೂರು ಮತ್ತು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಮಂದಿರದ ವತಿಯಿಂದ ಆ.31 ರಂದು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮೀಜಿಯವರ 169ನೇ ಜನ್ಮ ದಿನಾಚರಣೆ ಕಾರ್ಯಕ್ರಮ ನಡೆಯಲಿದೆ.


ಮೂಲ್ಕಿ ವಿಜಯಾ ಕಾಲೇಜಿನ ನಿವೃತ್ತ ಪ್ರಾಂಶುಪಾಲರು ಹಾಗೂ ರಸಾಯನ ಶಾಸ್ತ್ರ ಪ್ರಾಧ್ಯಾಪಕರಾದ ಡಾ|ಕೆ.ನಾರಾಯಣ ಪೂಜಾರಿಯವರು ಗುರು ಸಂದೇಶ ನೀಡಲಿದ್ದಾರೆ. ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಲಯನ್ಸ್ ಜಿಲ್ಲೆ 317ಡಿ ಇದರ ಪೂರ್ವ ರಾಜ್ಯಪಾಲ ಡಾ.ಗೀತಪ್ರಕಾಶ್ ವಿಟ್ಲ, ಮಂಗಳೂರು ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ರಾಜೇಶ್ ಬಿ, ಬೆಂಗಳೂರಿನ ಆನನ್ಯ ಎಂಟರ್‌ಪ್ರೈಸಸ್‌ನ ನಟೇಶ್ ಪೂಜಾರಿ ಪುಳಿತ್ತಡಿರವರು ಭಾಗವಹಿಸಲಿದ್ದಾರೆ.


ಪ್ರತಿಭಾ ಪುರಸ್ಕಾರ:
2022-23ನೇ ವರ್ಷದ ಎಸೆಸ್ಸೆಲ್ಸಿಯಲ್ಲಿ ಶೇ.85 ಮತ್ತು ಮೇಲ್ಟಟ್ಟು ಅಂಕ ಗಳಿಸಿದವರಿಗೆ, ಪಿಯುಸಿ, ಐಟಿಐ, ಡಿಎಡ್ ಅಂತಿಮ ಪರೀಕ್ಷೆಯಲ್ಲಿ ಶೇ.80 ಮತ್ತು ಮೇಲ್ಪಟ್ಟು ಅಂಕ ಗಳಿಸಿದವರಿಗೆ, ಎಲ್ಲಾ ತರದ ಡಿಗ್ರಿ, ಡಿಪ್ಲೋಮಾ, ಬಿಬಿಎಂ, ಬಿಸಿಎ, ಬಿಎಡ್, ಎಲ್‌ಎಲ್‌ಬಿ ಇತ್ಯಾದಿ ಕೋರ್ಸಿನ ಅಂತಿಮ ಪರೀಕ್ಷೆಯಲ್ಲಿ ಶೇ.85 ಮತ್ತು ಮೇಲ್ಪಟ್ಟ ಅಂಕ ಗಳಿಸಿದವರಿಗೆ, ಎಲ್ಲಾ ಸ್ನಾತಕೋತ್ತರ, ವೈದ್ಯಕೀಯ, ತಾಂತ್ರಿಕ ಎಂಸಿಎ, ಎಂಬಿಎ, ಎಂಎಸ್‌ಡಬ್ಲ್ಯೂ, ಎಂಎ, ಎಂಕಾಂ, ಎಂಟೆಕ್ ಕೋರ್ಸಿನ ಅಂತಿಮ ಪರೀಕ್ಷೆಯಲ್ಲಿ ಶೇ.೮೦ ಮತ್ತು ಮೇಲ್ಪಟ್ಟು ಅಂಕಗಳನ್ನು ಪಡೆದ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ.


ಸನ್ಮಾನ:
ಐಪಿಎಸ್, ಐಎಎಸ್, ಕೆಎಎಸ್, ಕೆಇಎಸ್, ಪಿಎಚ್‌ಡಿ, ಸಿಎ ಪದವಿ ಪಡೆದವರಿಗೆ, 2022-23ರ ಸಾಲಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ರಾಷ್ಟ್ರಪ್ರಶಸ್ತಿ ಅಥವಾ ರಾಜ್ಯಪ್ರಶಸ್ತಿ ಪಡೆದವರಿಗೆ ಮತ್ತು ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಐದು ಮಹನೀಯರು, 2022-23ರಲ್ಲಿ ಜಿಲ್ಲಾಮಟ್ಟಕ್ಕಿಂತ ಮೇಲ್ಪಟ್ಟ ಕ್ರೀಡಾ ಕ್ಷೇತ್ರ, ಕಲಾ ಕ್ಷೇತ್ರ, ಸಾಹಿತ್ಯ, ವಿಜ್ಞಾನ ಕ್ಷೇತ್ರದಲ್ಲಿನ ಪ್ರತಿಭೆ ಹೊಂದಿದ ಸಮಾಜ ಬಾಂಧವರಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಲಿದೆ.


ಬ್ರಹ್ಮಶ್ರೀ ನಾರಾಯಣ ಗುರುಸ್ವಾಮೀಜಿಯವರ 169ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಬಿಲ್ಲವ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಾಗಬೇಕಾಗಿ ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ, ಉಪಾಧ್ಯಕ್ಷ ಅಶೋಕ್ ಕುಮಾರ್ ಪಡ್ಪು, ಉಪಾಧ್ಯಕ್ಷೆ ವಿಮಲಾ ಸುರೇಶ್, ಕಾರ್ಯದರ್ಶಿ ಚಿದಾನಂದ ಸುವರ್ಣ, ಜೊತೆ ಕಾರ್ಯದರ್ಶಿ ದಯಾನಂದ ಕರ್ಕೇರ, ಕೋಶಾಧಿಕಾರಿ ಬಿ.ಟಿ ಮಹೇಶ್ಚಂದ್ರ ಸಾಲಿಯಾನ್, ಬ್ರಹ್ಮಶ್ರೀ ನಾರಾಯಣ ಗುರುಮಂದಿರದ ಕಾರ್ಯನಿರ್ವಹಣಾಧಿಕಾರಿ ಉದಯಕುಮಾರ್ ಕೋಲಾಡಿ, ಅರ್ಚಕ ಜಗದೀಶ್ ಶಾಂತಿ, ಸದಸ್ಯರಾದ ಸಜ್ಜನ್ ಕುಮಾರ್, ರಾಜೇಶ್ ಪೂಜಾರಿ, ಉಮೇಶ್ ಬಾಯಾರುರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ವಿದ್ಯಾನಿಧಿ ಯೋಜನೆ…
ಬಿಲ್ಲವ ಸಮಾಜದ ಬಡ ವಿದ್ಯಾರ್ಥಿಗಳ ವಿದ್ಯಾರ್ಥಿವೇತನ, ಸಹಾಯಧನ, ಪ್ರತಿಭಾ ಪುರಸ್ಕಾರ ಇತ್ಯಾದಿ ಉದ್ಧೇಶಗಳಿಗಾಗಿ ಸ್ಥಾಪಿಸಿದ ವಿನೂತನ ವಿದ್ಯಾನಿಧಿ ಯೋಜನೆಗೆ ಸಮಾಜ ಬಾಂಧವರ ಧನ ಸಹಾಯದ ಸಹಭಾಗಿತ್ವವನ್ನು ಕೋರಲಾಗಿದೆ. ಸಹಾಯಧನವನ್ನು ನೀಡ ಬಯಸುವವರು ವಿದ್ಯಾನಿಧಿ ಯೋಜನೆಯ ಸಂಚಾಲಕರಾದ ಡಾ.ಸದಾನಂದ ಕುಂದರ್‌ರವರನ್ನು ಸಂಪರ್ಕಿಸುವಂತೆ ಬಿಲ್ಲವ ಸಂಘ ಮನವಿ ಮಾಡಿದೆ.

ಧಾರ್ಮಿಕ/ಸಾಂಸ್ಕೃತಿಕ ಕಾರ್ಯಕ್ರಮ..
ಬೆಳಿಗ್ಗೆ(7.30)ರಿಂದ ಶ್ರೀ ಸಾಯಿ ಶಾಂತಿ ಸರಪಾಡಿ ನೇತೃತ್ವದಲ್ಲಿ ಪ್ರಾರ್ಥನೆ, ಪಂಚಾಮೃತಾಭಿಷೇಕ, ಬಳಿಕ ಆಲಂಕಾರು, ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿಯಿಂದ ಭಜನಾ ಕಾರ್ಯಕ್ರಮ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಪ್ರಸಾದ ಭೋಜನ ನಡೆಯಲಿದೆ. ಪ್ರಸಾದ ಭೋಜನ ಬಳಿಕ ಯುವವಾಹಿನಿ ಪುತ್ತೂರು ಘಟಕದ ಪ್ರಾಯೋಜಕತ್ವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಜರಗಲಿದೆ. ತಾಲೂಕಿನ 51 ಬಿಲ್ಲವ ಗ್ರಾಮ ಸಮಿತಿ, ಬಿಲ್ಲವ ಮಹಿಳಾ ವೇದಿಕೆ ಪುತ್ತೂರು, ಯುವವಾಹಿನಿ ಪುತ್ತೂರು ಘಟಕ, ಉಪ್ಪಿನಂಗಡಿ ಹಾಗೂ ಕಡಬ ಘಟಕಗಳು, ಪುತ್ತೂರು ಬಿಲ್ಲವ ವಿದ್ಯಾರ್ಥಿ ಸಂಘದ ಸಹಕಾರದಲ್ಲಿ ಕಾರ್ಯಕ್ರಮ ನಡೆಯಲಿದೆ.

LEAVE A REPLY

Please enter your comment!
Please enter your name here