ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ ಓಣಂ ಹಬ್ಬ ಆಚರಣೆ

0

ಪುತ್ತೂರು: ಪುತ್ತೂರಿನ ಹೃದಯ ಭಾಗದಲ್ಲಿ ಕಾರ್‍ಯನಿರ್ವಹಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ 16 ನೇ ವರ್ಷದ ಓಣಂ ಹಬ್ಬವನ್ನು ಆಚರಿಸಲಾಯಿತು.ಸಂಸ್ಥೆಯ ಸಂಚಾಲಕ ಗೋಕುಲ್‌ನಾಥ್ ಪಿ. ವಿ. ಹಾಗೂ ಪ್ರಾಂಶುಪಾಲೆ ಹೇಮಲತಾ ಗೋಕುಲ್‌ನಾಥ್ ದೀಪ ಪ್ರಜ್ವಲನೆಯ ಮೂಲಕ ಓಣಂ ಆಚರಣೆಗೆ ಚಾಲನೆ ನೀಡಿದರು. ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕ ವೃಂದ ಸೇರಿ ಪೂಕಳಂ ರಚಿಸಿದರು.

ಸಂಸ್ಥೆಯ ಉಪನ್ಯಾಸಕಿ ಅನುಪಮ ಓಣಂ ಹಬ್ಬವನ್ನು ಆಚರಿಸುವ ರೀತಿಯ ಕುರಿತು ತಿಳಿಸಿದರು. ಹಾಸ್ಟೆಲ್ ವಾರ್ಡನ್ ಕಲಾವತಿ ಓಣಂ ಹಬ್ಬದಲ್ಲಿರುವ ವಿಶೇಷ ಖಾದ್ಯದ ಹಾಗೂ ಆಚರಣೆಯ ಕುರಿತು ಮಾಹಿತಿ ನೀಡಿದರು. ಸಂಸ್ಥೆಯ ಪ್ರಾಂಶುಪಾಲೆ ಹೇಮಲತಾ ಗೋಕುಲ್‌ನಾಥ್ ಶುಭಹಾರೈಸಿದರು. ಸಂಸ್ಥೆಯ ಮುಖ್ಯ ಶಿಕ್ಷಕಿ ಓಣಂ ಹಬ್ಬದ ಹೂವಿನ ಅಲಂಕಾರದಲ್ಲಿ ಬಳಸಿದ ವಿವಿಧ ಹೂವುಗಳಂತೆ ವಿದ್ಯಾರ್ಥಿಗಳ ಜೀವನವು ಸುಂದರವಾಗಲಿ ಎಂದು ಶುಭಹಾರೈಸಿದರು. ಕಛೇರಿ ಸಿಬ್ಬಂದಿ ಸುಷ್ಮಲತಾ ಶುಭಹಾರೈಸಿದರು. ಸಂಸ್ಥೆಯ ಸಂಚಾಲಕ ಗೋಕುಲ್‌ನಾಥ್ ಪಿ. ವಿ. ಓಣಂ ಹಬ್ಬವನ್ನು ಕೇರಳದಲ್ಲಿ ಯಾಕೆ ಆಚರಿಸುತ್ತಾರೆ ಎನ್ನುವ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿ ಕೇರಳದಲ್ಲಿ ಆಚರಿಸುವ ಅತಿ ದೊಡ್ಡ ಹಬ್ಬ ಓಣಂ ಆಗಿದ್ದು ಇದನ್ನು ಹತ್ತು ದಿನ ಆಚರಿಸುತ್ತಿದ್ದು ಹಬ್ಬದಲ್ಲಿ ವಿಶೇಷವಾಗಿ 24 ಬಗೆಯ ಖಾದ್ಯಗಳನ್ನು ಸವಿಯುದರ ಜತೆಗೆ ಮಹಾಬಲಿ ಚಕ್ರವರ್ತಿಯನ್ನು ವಿಶೇಷವಾಗಿ ಗೌರವಿಸುವುದು ಸಂಪ್ರದಾಯವಾಗಿದೆ ಎಂದರು. ಕಾರ್‍ಯಕ್ರಮದಲ್ಲಿ ಸಂಸ್ಥೆಯ ಉಪನ್ಯಾಸಕ ವೃಂದ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here