ಜಿಡೆಕಲ್ಲು: ಅಡಿಕೆ ಕಳವು – ಆರೋಪಿಗಳು ವಶಕ್ಕೆ

0


ಪುತ್ತೂರು: ಚಿಕ್ಕಮುಡ್ನೂರು ಗ್ರಾಮದ ಜಿಡೆಕಲ್ಲು ಸಮೀಪದ ನೆಕ್ಕರೆ ಡಿವೈನ್ ಮರ್ಸಿ ಮನೆಯ ಕಾರ್ಮಿನ್ ಮಿರಾಂದ ಅವರ ಮನೆಯಿಂದ ಮೂರು ದಿನದ ಹಿಂದೆ ಅಡಿಕೆ ಕಳವಾಗಿದೆ. ಈ ಬಗ್ಗೆ ಅವರು ಪುತ್ತೂರು ನಗರ ಪೊಲೀಸರಿಗೆ ದೂರು ನೀಡಿದ್ದು, ಇದೀಗ ಆರೋಪಿಗಳಿಬ್ಬರನ್ನು ಪೊಲೀಸರು ವಶಕ್ಕೆ ಪಡೆದು ಕೊಂಡಿದ್ದಾರೆ.
ಪತಿ ಸುನಿಲ್ ಮಿರಾಂದ ಅವರು ವಿದೇಶದಲ್ಲಿ ಉದ್ಯೋಗದಲ್ಲಿದ್ದು, ತಾಯಿ ಅವರು ಅವರ ಮನೆಯಲ್ಲಿ ಅಡಿಕೆ ಒಣಗಿಸಲು ಜಾಗ ಇಲ್ಲದೆ ಇರುವುದರಿಂದ ಕಾರ್ಮಿನ್ ಮಿರಾಂದ ಅವರ ಮನೆಯ ಅಂಗಳದಲ್ಲಿ ಅಡಿಕೆ ಒಣಗಿಸಿ, ಅಡಿಕೆಯನ್ನು ಸುಲಿದು ತೂಕ ಮಾಡಿ ಇಟ್ಟಿದ್ದರು. ಸುಲಿದ 276 ಕೆ.ಜಿ ಅಡಿಕೆಯನ್ನು 6 ಗೋಣಿಗಳಲ್ಲಿ ತುಂಬಿಸಿ ಮನೆಯ ಎದುರಿನ ಹಾಲ್‌ನಲ್ಲಿ ಇಡಲಾಗಿತ್ತು. ಆದರೆ ಸುಲಿದ ಅಡಿಕೆ ಮತ್ತು ಕೆಲಸಗಾರರಿಗೆ ನೀಡಲೆಂದು ಮನೆಯ ಬೆಡ್ ರೂಮಿನ ಕಪಾಟಿನಲ್ಲಿಟ್ಟಿದ್ದ ರೂ. 10ಸಾವಿರ ಹಣ ಕಳವಾಗಿತ್ತು. ಈ ಕುರಿತು ಕಾರ್ಮಿನ್ ಮಿರಾಂದ ಅವರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಆರೋಪಿಗಳು ವಶಕ್ಕೆ
ಮೂರು ದಿನದ ಹಿಂದೆ ಜಿಡೆಕಲ್ಲು ಸಮೀಪದ ನೆಕ್ಕರೆ ಎಂಬಲ್ಲಿ ಅಡಿಕೆ ಕಳವು ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ಕೊಂಡಿದ್ದಾರೆಂದು ತಿಳಿದು ಬಂದಿದೆ. ಆರೋಪಿಗಳನ್ನು ಕಾವೇರಿಕಟ್ಟೆಯ ಬಳಿಯಿಂದ ಆ.28ರಂದು ರಾತ್ರಿ ವಶಕ್ಕೆ ಪಡೆದು ಅವರು ಕೃತ್ಯಕ್ಕೆ ಉಪಯೋಗಿಸಿದ ಬೈಕ್ ಮತ್ತು ಮೊಬೈಲ್‌ಗಳನ್ನು ವಶಕ್ಕೆ ಪಡೆದು ಕಾವೇರಿಕಟ್ಟೆಯ ಬಳಿಯ ಬಾಡಿಗೆ ಮನೆಯ ಕೊಠಡಿಯಲ್ಲಿ ದಾಸ್ತಾನು ಮಾಡಿದ ಕಳವು ಮಾಡಿದ ಸೊತ್ತಗಳನ್ನು ವಶಕ್ಕೆ ಪಡೆದು ಕೊಂಡಿದ್ದಾರೆ ಎಂದು ತಿಳಿದು ಬಂದಿದೆ. 

LEAVE A REPLY

Please enter your comment!
Please enter your name here